Kannada Cinema News

ಡಿಬಾಸ್, ವಿಜಿ ಆದಮೇಲೆ ಶಿವಣ್ಣ ಜೊತೆ ಮತ್ತೆ ನಟಿಸುತ್ತಿದ್ದಾರೆ ಡಾಲಿ ಧನಂಜಯ್! ಯಾವ ಸಿನಿಮಾ ಗೊತ್ತಾ

ನಮ್ಮ ಡಾಲಿ ಧನಂಜಯ್ ಅವರು ಸದ್ಯ ಕನ್ನಡದ ಅತಿಯಾದ ಬ್ಯುಸಿ ನಟರಲ್ಲಿ ಒಬ್ಬರು! ಸದ್ಯ ನಮ್ಮ ಡಾಲಿ ಧನಂಜಯ್ ಅವರು ಅಪ್ಪು ಅವರ ಯುವರತ್ನ, ದುನಿಯಾ ವಿಜಿ ಅವರ ಸಲಗ, ಹಾಗು ಬಡವ ರಾ’ಸ್ಕ್ಯಾ’ಲ್ ಎಂಬ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಹಿಂದಿ ಧನಂಜಯ್ ಅವರು ಡಿಬಾಸ್, ಅವರ ಜೊತೆ ಯಜಮಾನ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಮತ್ತೆ ಡಾಲಿ ಧನಂಜಯ್ ಅವರು ಶಿವಣ್ಣ ಜೊತೆ ನಟಿಸುತ್ತಿದ್ದಾರೆ! ಅದು ಯಾವ ಸಿನಿಮಾ ಗೊತ್ತಾ, ಸದ್ಯ ಡಾಲಿ ಧನಂಜಯ್ ಅವರ ಯಾವ ಯಾವ ಸಿನಿಮಾಗಳು ಬಿಡುಗಡೆ ರೆಡಿ ಇದೆ ಗೊತ್ತಾ! ಈ ಕೆಳಗಿನ ಅವರ ಹೊಸ ಸಂದರ್ಶನ ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ನೋಡಿ ಶೇರ್ ಮಾಡಿ (ವಿಡಿಯೋ ಕೃಪೆ – ನ್ಯೂಸ್ ಫಸ್ಟ್ ಕನ್ನಡ)

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಧನಂಜಯ್ ಎಂದರೆ ತಪ್ಪಾಗಲಾರದು. ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸದಭಿರುಚಿಯ ಸಿನಿಮಾಗಳಲ್ಲಿ ಅಭಿನಯಿಸಿ, ಕನ್ನಡ ಸಿನಿಪ್ರಿಯರ ಮನಗೆದ್ದ ನಟ ಧನಂಜಯ್. ಕರ್ನಾಟಕದಲ್ಲಿ ಇವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಕ್ಲಾಸ್ ಮಾಸ್, ಹೀರೋ ವಿಲನ್ ಎರಡು ರೀತಿಯ ಪಾತ್ರಗಳಿಗೂ ಸೂಟ್ ಆಗುವಂತಹ ಕೆಲವೇ ಕೆಲವು ನಟರಲ್ಲಿ ಒಬ್ಬರು ಧನಾಂಜಯ್. ನಿನ್ನೆ ಈ ನಟನ ಹುಟ್ಟುಹಬ್ಬ ಇತ್ತು, ಇಷ್ಟು ವರ್ಷ ಅಭಿಮಾನಿಗಳ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು ಧನಂಜಯ್.

ಆದರೆ ಈ ವರ್ಷ ಕರೊನಾ ಸಂ’ಕ’ಷ್ಟ ಇರುವ ಕಾರಣ, ಹುಟ್ಟುಹಬ್ಬದ ಆಚರಣೆ ಬೇಡ, ಯಾರು ಮನೆಯ ಹತ್ತಿರ ಬರಬೇಡಿ ಎಂದು ಹುಟ್ಟುಹಬ್ಬಕ್ಕೂ ಮೊದಲೇ ನಟ ಧನಂಜಯ್ ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದರಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮೆಚ್ಚಿನ ನಟನಿಗೆ ಶುಭಕೋರಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ನ ಇತರ ಸೆಲೆಬ್ರಿಟಿಗಳು ಸಹ ಧನಂಜಯ್ ಅವರಿಗೆ ಶುಭಕೋರಿದ್ದಾರೆ. ಎಲ್ಲರ ಮೆಚ್ಚಿನ ಡಿಬಾಸ್, “ಹುಟ್ಟುಹಬ್ಬದ ಶುಭಾಶಯಗಳು ಡಾಲಿ..” ಎಂದು ಟ್ವೀಟ್ ಮಾಡಿದ್ದು. ಇದಕ್ಕೆ ರಿಪ್ಲೈ ಮಾಡಿರುವ ಧನಂಜಯ್.. “ಬ್ರದರ್ ಫ್ರಮ್ ಆನೆದರ್ ಮದರ್.. ಥ್ಯಾಂಕ್ ಯೂ.. ದರ್ಶನ್..” ಎಂದು ಟ್ವೀಟ್ ಮಾಡಿದ್ದಾರೆ. ದರ್ಶನ್ ಅವರ ವಿಶ್ ನೋಡಿ ಇಬ್ಬರು ನಟರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಜಮಾನ ಸಿನಿಮಾದಲ್ಲಿ ದರ್ಶನ್ ಮತ್ತು ಧನಂಜಯ್ ಒಟ್ಟಿಗೆ ನಟಿಸಿದ್ದರು.

ನಟ ಧನಂಜಯ್ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ನಮಗೆಲ್ಲಾ ತಿಳಿದಿದೆ. ಹಾಗಾಗಿ ಸಲಗ ಚಿತ್ರದ ಪರವಾಗಿ ನಟ ದುನಿಯಾ ವಿಜಯ್ “ನಗುತ ನಗುತ ಬಾಳು ನೀನು ನೂರು ವರುಷ.. ಹ್ಯಪಿ ಬರ್ತ್ ಡೇ ಧನಂಜಯ್..” ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಡಾಲಿ ಧನಂಜಯ್ ಬರ್ತ್ ಡೇ ಗೆ ಸಲಗ ಚಿತ್ರತಂಡ ಸೂಪರ್ ಆಗಿರುವ ಗಿಫ್ಟ್ ನೀಡಿದೆ. ಇದಕ್ಕೆ ಮನಸೋತಿರುವ ಧನಂಜಯ್ ಸದಾ ತಮಗೆ ಸಪೋರ್ಟ್ ಮಾಡಿದ ಸಲಗ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರತಿಭಾನ್ವಿತ ನಟ ಸತೀಶ್ ನೀನಾಸಂ. ಧನಂಜಯ್ ಮತ್ತು ಸತೀಶ್ ನೀನಾಸಂ ಸಹ ಒಳ್ಳೆಯ ಗೆಳೆಯರು. “ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಗಲು ನಿನ್ನ ಜೊತೆಗಿರಲಿ..” ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಿಪ್ಲೈ ಮಾಡಿರುವ ಡಾಲಿ, ಥ್ಯಾಂಕ್ ಯೂ ಗೆಳೆಯ ಎಂದಿದ್ದಾರೆ.

Trending

To Top