ಧಾಕಡ್ ಫಸ್ಟ್ ಲುಕ್ ಬಿಡುಗಡೆ: ಕಂಗನಾ ಲುಕ್ಗೆ ಫಿದಾ ಆದ್ರು ಪ್ಯಾನ್ಸ್ !

ಮುಂಬೈ: ಬಾಲಿವುಡ್ ನಟಿ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವ ಕಂಗನಾ ರಾಣವತ್ ಇದೀಗ ಧಾಕಡ್ ಪೋಸ್ಟರ್ ಮೂಲಕ ಸುದ್ದಿಯಲ್ಲಿದ್ದಾರೆ. ಧಾಕಡ್ ಚಿತ್ರದಲ್ಲಿ ಕಂಗನಾ ನ್ಯೂ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಲಾಗಿದೆ.

ನಟಿ ಕಂಗನಾ ರಾಣವತ್ ಅಭಿನಯಿಸಲಿರುವ ಧಾಕಡ್ ಚಿತ್ರ ಅಂತರಾಷ್ಟ್ರೀಯ ಮಟ್ಟದ ಥ್ರಿಲ್ಲರ್ ಮೂವಿಯಾಗಿದೆ. ಈ ಚಿತ್ರದಲ್ಲಿ ಕಂಗನಾ ರಾ ಸಂಸ್ಥೆಯ ಏಜೆಂಟ್ ಆಗಿ ಅಭಿನಯಿಸಲಿದ್ದು, ಏಜೆಂಟ್ ಅಗ್ನಿ ಎಂಬ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇನ್ನೂ ಸದ್ಯ ಬಿಡುಗಡೆಯಾದ ಪೋಸ್ಟರ್ ನಲ್ಲಿ ಖಡಕ್ ಲುಕ್ ನೊಂದಿಗೆ ಕಂಗನಾ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಪೋಸ್ಟರ್ ಬಿಡುಗಡೆಯ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ರಿವೀಲ್ ಮಾಡಿದ್ದಾರೆ.

ಕಂಗನಾ ರವರ ಈ ಚಿತ್ರ ಧಾಕಡ್ ಬಹುನಿರೀಕ್ಷೆಯ ಚಿತ್ರವಾಗಿದ್ದು, ರಿಲೀಸ್ ಆದ ಪೋಸ್ಟರ್ ನಲ್ಲಿ ಕೈಯಲ್ಲಿ ಕತ್ತಿಯನ್ನು ಹಿಡಿದು, ಕೊಲೆ ಮಾಡುತ್ತಾ ರಕ್ತ ಚಿಮ್ಮುಸುತ್ತಿರುವ ಕಂಗನಾ ಲುಕ್ ಅವರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಜೊತೆಗೆ ಈ ಚಿತ್ರ ಸ್ಪೈ ಥ್ರಿಲ್ಲರ್ ಚಿತ್ರವಾಗಿದ್ದು ಅಕ್ಟೋಬರ್ ೧, ೨೦೨೦ ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇನ್ನೂ ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡುತ್ತಿದ್ದು, ಧಾಕಡ್ ಚಿತ್ರಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನೂ ನಟಿ ಕಂಗನಾ ತೇಜಸ್ ಹಾಗೂ ತಲೈವಿ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, ಕಾಲಿವುಡ್ ನ ತಲೈವಿ ಚಿತ್ರದ ಶೂಟಿಂಗ್ ಮುಗಿದಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

Previous articleಶೀಘ್ರದಲ್ಲಿಯೇ ಶ್ರೀದೇವಿ ದ್ವಿತೀಯ ಪುತ್ರಿ ಸಿನೆಮಾರಂಗಕ್ಕೆ ಎಂಟ್ರಿ!
Next articleಹ್ಯಾಕ್ ಆಯ್ತು ಮತ್ತೋರ್ವ ನಟಿ ಇನ್ಸ್ಟಾಗ್ರಾಂ ಖಾತೆ