ಮುಂಬೈ: ಮೂಲತಃ ಬೆಂಗಳೂರಿನವರಾದ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ರವರು 35ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಸ್ಟಾರ್ ನಟ-ನಟಿಯರು ಸೇರಿದಂತೆ ಅನೇಕರು ಶುಭಾಷಯಗಳನ್ನು ತಿಳಿಸುತ್ತಿದ್ದಾರೆ.
ಬೆಂಗಳೂರಿನ ಮೂಲದವರಾದ ನಟಿ ದೀಪಿಕಾ ಪಡುಕೋಣೆಯವರು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐಶ್ವರ್ಯ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಸಿನೆಮಾ ಇವರಿಗೆ ಭಾರಿ ಮಟ್ಟದ ಫೇಮ್ ತಂದುಕೊಂಟ್ಟಿದೆ. ಇನ್ನೂ ನಟಿ ದೀಪಿಕಾ ರವರಿಗೆ ಸಾಕಷ್ಟು ಫೇಮ್ ದೊರೆತಿದ್ದು, ಅತ್ಯಂತ ಕಠಿಣವಾದ ಪಾತ್ರಗಳನ್ನು ಪೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ದೀಪಿಕಾ ಭಾರತ ಸಿನಿರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ.
ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ದೀಪಿಕಾ ಹೇಳಿರುವಂತೆ ಪದ್ಮಾವತ್, ಬಾಜಿರಾವ್ ಮಸ್ತಾನಿ ಚಿತ್ರಗಳಲ್ಲಿನ ಪಾತ್ರದಿಂದ ತಮ್ಮ ಸಿನಿ ವೃತ್ತಿಯನ್ನು ಇನ್ನಷ್ಟು ಮೆರುಗುಗೊಳಿಸಲು ಸಹಾಯ ಮಾಡಿದೆ ಎಂದಿದ್ದಾರೆ. ಈ ಕುರಿತು ಸುಮಾರು ಕಲಾವಿದರು ಸಹ ದೀಪಿಕಾ ಮಾಡಿರುವಂತಹ ಪಾತ್ರಗಳನ್ನು ತಾವು ಸಹ ಮಾಡಲು ಇಚ್ಚೆ ಹೊಂದಿರುವುದಾಗಿ ಕೆಲವೊಂದು ಸಮಾರಂಭಗಳಲ್ಲಿ ಹೇಳಿದ್ದುಂಟು. ಇನ್ನೂ ಪ್ರಸ್ತುತ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ರೊಂದಗೆ ರಾಜಸ್ಥಾನದಲ್ಲಿ ಟೂರ್ ನಲ್ಲಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂ ನಲ್ಲಿನ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವ ದೀಪಿಕಾ ಪ್ರಸ್ತುತ ರಾಜಸ್ಥಾನದಲ್ಲಿ ಸಂಭ್ರಮಿಸಿದ ಹೊಸವರ್ಷದ ಪೊಟೋಗಳನ್ನು ಹಾಕಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಹೊಸವರ್ಷದ ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತೊಂದು ಪ್ರಮುಖ ವಿಚಾರವೆಂದರೇ ಟಾಲಿವುಡ್ ಸ್ಟಾರ್ ನಟ ಬಾಹುಬಲಿ ಪ್ರಭಾಸ್ ದೀಪಿಕಾ ರವರಿಗೆ ಶುಭಾಷಯ ತಿಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ದೀಪಿಕಾ ಪೊಟೋವೊಂದನ್ನು ಹಂಚಿಕೊಂಡು ’ಹುಟ್ಟುಹಬ್ಬದ ಶುಭಾಷಯಗಳು ಗಾರ್ಜಿಯಸ್ ಸೂಪರ್ ಸ್ಟಾರ್ ದೀಪಿಕಾ’ ಎಂದು ವಿಶ್ ಮಾಡಿದ್ದಾರೆ.
