ಆರೋಗ್ಯ ಚೇತರಿಸಿಕೊಂಡು ಶೂಟಿಂಗ್ ಸೆಟ್ ಗೆ ಹಾಜರಾದ ದೀಪಿಕಾ ಪಡುಕೋಣೆ…!

ಬಹುನಿರೀಕ್ಷಿತ ನಟಿಯರಲ್ಲಿ ದೀಪಿಕಾ ಪಡುಕೋಣೆ ಸಹ ಒಬ್ಬರಾಗಿದ್ದಾರೆ. ಸದ್ಯ ಆಕೆ ಪ್ರಭಾಸ್ ಅಭಿನಯಿಸುತ್ತಿರುವ ಪ್ರಾಜೆಕ್ಟ್ ಕೆ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕಳೆದ ಕೆಲವು ದಿನಗಳಿಂದ ಹೈದರಾಬಾದ್ ನಲ್ಲಿ ಪ್ರಾಜೆಕ್ಟ್ ಕೆ ಸಿನೆಮಾದ ಶೂಟಿಂಗ್ ಕೆಲಸಗಳನ್ನು ನಡೆಯುತ್ತಿವೆ. ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇನ್ನೂ ಪ್ರಭಾಸ್ ಸಹ ಆಕೆಗಾಗಿ ಸಿನೆಮಾ ಶೂಟಿಂಗ್ ಮುಂದೂಡವಂತೆ ಸಹ ತಿಳಿಸಿದ್ದರು. ಸದ್ಯ ಆಕೆ ಆರೋಗ್ಯದಿಂದ ಸಿನೆಮಾ ಶೂಟಿಂಗ್ ಸೆಟ್ ಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ದೀಪಿಕಾ ಪ್ರಾಜೆಕ್ಟ್ ಕೆ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನೆಮಾ ಶೂಟಿಂಗ್ ನಿಮಿತ್ತ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದರು. ಶೂಟಿಂಗ್ ನಲ್ಲಿದ್ದ ದೀಪಿಕಾ ಆರೋಗ್ಯ ಏರುಪೇರಾಗಿದ್ದರಿಂದ ಪ್ರಭಾಸ್ ಸಿನೆಮಾ ಶೂಟಿಂಗ್ ನಿಲ್ಲಿಸುವಂತೆ ತಿಳಿಸಿದ್ದರಂತೆ. ಸಿನೆಮಾ ನಿರ್ದೇಶಕರಲ್ಲಿ ಸಿನೆಮಾ ಶೂಟಿಂಗ್ ಪೋಸ್ಟ್ ಪೋನ್ಡ್ ಮಾಡುವಂತೆ ನಿರ್ದೇಶಕರಿಗೆ ಮನವಿ ಮಾಡಿದ್ದಾರಂತೆ. ಕನಿಷ್ಟ ಒಂದು ವಾರವಾದರೂ ಸಿನೆಮಾ ಶೂಟಿಂಗ್ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರಂತೆ ಪ್ರಭಾಸ್. ಇದೀಗ ನಟಿ ದೀಪಿಕಾ ಸಹ ಆರೋಗ್ಯ ಚೇತರಿಸಿಕೊಂಡಿದ್ದಾರಂತೆ. ಸದ್ಯ ಶೂಟಿಂಗ್ ಸೆಟ್ ಗೆ ಆರೋಗ್ಯಕರವಾಗಿ ದೀಪಿಕಾ ಎಂಟ್ರಿಕೊಟ್ಟಿದ್ದಾರಂತೆ. ಇನ್ನೂ ದೀಪಿಕಾಳ ವೃತ್ತಿಪರತೆಗೆ ಪ್ರಾಜೆಕ್ಟ್ ಕೆ ಸಿನೆಮಾದ ನಿರ್ಮಾಪಕಿ ಅಶ್ವಿನಿದತ್ ಸಹ ಶಬ್ಬಾಸ್ ಹೇಳಿದ್ದಾರೆ.

ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಾಜೆಕ್ಟ್ ಕೆ ಸಿನೆಮಾ ಬಿಗ್ ಬಜೆಟ್ ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಸಿದ್ದವಾಗುತ್ತಿದೆ. ಈ ಸಿನೆಮಾದಲ್ಲಿ ನಟಿ ದೀಪಿಕಾ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಆಕೆಯ ಭಾಗದ ಶೂಟಿಂಗ್ ಗಾಗಿ ಹೈದಾರಾಬಾದ್ ನಲ್ಲಿದ್ದು, ಶೂಟಿಂಗ್ ವೇಳೆ ಅಸ್ವಸ್ಥಗೊಂಡಿದ್ದರು. ಇದೀಗ ಆರೋಗ್ಯ ಸರಿಮಾಡಿಕೊಂಡು ಸಿನೆಮಾ ಶೂಟಿಂಗ್ ಗೆ ಹಾಜರಾಗಿದ್ದಾರೆ. ನಟಿ ದೀಪಿಕಾಳ ಈ ವೃತ್ತಿಪರತೆಗೆ ಪ್ರಾಜೆಕ್ಟ್ ಕೆ ನಿರ್ಮಾಪಕಿ ಸಹ ಭೇಷ್ ಎಂದಿದ್ದಾರೆ.

ಇನ್ನೂ ನಟಿ ದೀಪಿಕಾ ಇತ್ತೀಚಿಗಷ್ಟೆ ಕಾನ್ ಫೆಸ್ಟಿವಲ್ ನಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿದ್ದರು. ಈ ಅಂತರಾಷ್ಟ್ರೀಯ ಸಿನಮೋತ್ಸವ ಮುಗಿದ ಬಳಿಕ ಪ್ರಾಜೆಕ್ಟ್ ಕೆ ಸಿನೆಮಾ ಶೂಟಿಂಗ್ ಗೆ ಬಂದಿದ್ದರು. ಬ್ರೇಕ್ ಇಲ್ಲದೇ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನಟಿ ದೀಪಿಕಾಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗಿದೆ. ಇನ್ನೂ ದೀಪಿಕಾ ಹೃತಿಕ್ ರೋಷನ್ ಜೊತೆ ಫೈಟರ್‍ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಇನ್ನೂ ಶೀಘ್ರದಲ್ಲೇ ಶಾರುಖ್ ಖಾನ್ ಜೊತೆ ನಟಿಸಿರುವ ಪಠಾನ್ ಸಿನೆಮಾ ಸಹ ತೆರೆಗೆ ಬರಲಿದೆ.

Previous articleಅಬ್ಬಬ್ಬಾ ಹಾಟೆಸ್ಟ್ ಪೋಸ್ ಕೊಟ್ಟ ಲೈಗರ್ ಬ್ಯೂಟಿ… ಆಕೆಯ ಮಾದಕ ನೋಟಕ್ಕೆ ಸ್ಟನ್ ಆಗಲೇ ಬೇಕು…!
Next articleಮಗನ ಮುಖ ತೋರಿಸಿದ ಕಾಜಲ್ ಅಗರ್ವಾಲ್.. ಕಾಜಲ್ ಮಗ ತುಂಬಾ ಕ್ಯೂಟ್….!