Film News

ಬಾಲಿವುಡ್ ನಟಿ ಆರ್ಯಾ ಸಾವಿನ ಬಗ್ಗೆ ಸಿಕ್ತು ಕಾರಣ!

ಮುಂಬೈ: 33 ವರ್ಷದ ಬಾಲಿವುಡ್ ನಟಿ ಆರ್ಯಾ ಬ್ಯಾನರ್ಜಿ ಸಾವಿನ ಕುರಿತಂತೆ ಉದ್ಬವವಾಗಿದ್ದ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಂತಾಗಿದೆ. ಆರ್ಯಾ ಬ್ಯಾನರ್ಜಿ ಅವರು ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇತ್ತೀಷಿಗೆ ಕೋಲ್ಕತ್ತಾದ ತಮ್ಮ ಸ್ವಂತ ಪ್ಲಾಟ್ ನಲ್ಲಿ ನಟಿ ಆರ್ಯಾ ಬ್ಯಾನರ್ಜಿ ಮೃತಪಟ್ಟಿದ್ದರು. ರಕ್ತದ ಮಡುವಿನಲ್ಲಿ ಬಿದಿದ್ದರಿಂದ ಇವರ ಸಾವು ಅನೇಕ ಅನುಮಾನಗಳಿಗೆ ಆಸ್ಪದ ನೀಡಿತ್ತು. ಆದರೆ ಅವರು ಯಕೃತ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.  ಆದರೂ ಕೂಡ ಅವರು ಮಿತಿಮೀರಿ ಮದ್ಯಪಾನ ಮಾಡುತ್ತಿರುವುದರಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ದಿ ಡರ್ಟಿ ಪಿಕ್ಚರ್ ಸಿನೆಮಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿರುವ ಆರ್ಯಾ ಅವರ ವರ್ತನೆ ಕೆಲವು ದಿನಗಳಿಂದ ಭಿನ್ನವಾಗಿತ್ತು. ಅಪಾರ್ಟಿಮೆಂಟ್ ನಲ್ಲಿ ಯಾರೊಂದಿಗೆ ಸೇರುತ್ತಿರಲಿಲ್ಲ. ಹೊರಗಡೆಯಿಂದ ಊಟ ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ. ಮನೆಕೆಲಸದಾಕೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಾಗ ರಕ್ತದ ಮಡುವಿನಲ್ಲಿ ಆರ್ಯಾ ಮೃತ ದೇಹ ಬಿದ್ದಿರುವುದು ಕಂಡಿತು. ಮೂಗಿನಿಂದ ರಕ್ತಸ್ರಾವ ಆಗಿರುವುದರಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Trending

To Top