Kannada Cinema News

ಪತ್ನಿ ವಿಜಯಲಕ್ಷ್ಮಿ, ಪುತ್ರನ ಜೊತೆ ಡಿಬಾಸ್ ದರ್ಶನ್ ಅವರ ಗಣೇಶ ಹಬ್ಬ ಆಚರಣೆ ಹೇಗಿತ್ತು ನೋಡಿ!

ನೆನ್ನೆ ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಕರೋನ ನಡುವೆ ಕೂಡ ಆಚರಿಸಲಾಯಿತು. ನಮ್ಮ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅವರ ಕುಟುಂಬದವರು ಕೂಡ ನೆನ್ನೆ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಡಿಬಾಸ್ ಅವರ ಪತ್ನಿ, ವಿಜಯಲಕ್ಷ್ಮಿ, ಪುತ್ರ ಹಾಗು ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರ ಕುಟುಂಬದವರು ಎಲ್ಲಾರೂ ಸೇರಿಕೊಂಡು ಹಬ್ಬವನ್ನು ಸರಳಾಗಿ ಆಚರಿಸಿದರು. ಡಿಬಾಸ್ ದರ್ಶನ್ ಹಾಗು ಅವರ ಕುಟುಂಬದ ಗಣೇಶ ಹಬ್ಬದ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಕೂಡ ಆಗುತ್ತಿದೆ. ಕೆಳಗಿನ ಸುಂದರ ಫೋಟೋಗಳನ್ನು ತಪ್ಪದೆ ನೋಡಿ.

ಇದಲ್ಲದೆ, ಡಿಬಾಸ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ , ಮಣ್ಣಿನಿಂದ ಗಣಪತಿಯನ್ನು ತಯಾರಿಸಿ ಅದನ್ನೇ ಇಟ್ಟು ಪೂಜೆ ಮಾಡಿದ್ದಾರೆ. ಕರೋನ ಸಂದರ್ಭದಲ್ಲಿ ಜಾಸ್ತಿ ಸಡಗರ ಬೇಡವೆಂದು, ಸರಳವಾಗಿ ಮನೆಯಲ್ಲೇ ಎಲ್ಲರೂ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಡಿಬಾಸ್ ಅವರ ಪತ್ನಿ, ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ ಅವರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಸಕತ್ ಸದ್ದು ಮಾಡುತ್ತಿದೆ. ಮೊನ್ನೆಯ ತನಕ ನಮ್ಮ ಡಿಬಾಸ್ ದರ್ಶನ್ ಅವರು ತಮ್ಮ ತೋಟದ ಕೆಲಸಗಳಲ್ಲಿ ಬಹಳ ಬ್ಯುಸಿ ಆಗಿದ್ದರು, ನೆನ್ನೆ ಹಬ್ಬ ಆಚರಣೆ ಮಾಡಲು ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ಮನೆಗೆ ಬಂದು ಕುಟುಂಬದ ಸಮೇತ ಹಬ್ಬ ಆಚರಣೆ ಮಾಡಿದ್ದಾರೆ.

ದರ್ಶನ್ ಅವರ ಕುಟುಂಬದ ಜೊತೆ ದಿನಕರ್ ತೂಗುದೀಪ್ ಕುಟುಂಬದವರು ಕೂಡ ಆಚರಣೆಯಲ್ಲಿ ಹಾಜರಿದ್ದರು. ಇದಲ್ಲದೆ ಡಿಬಾಸ್ ಅವರ ಕೆಲವು ಸ್ನೇಹಿತರು ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ನೆನ್ನೆ ಹಬ್ಬ ಮುಗಿಸಿ ಕುಟುಂಬದ ಸಮೇತ ದರ್ಶನ್ ಅವರು ಮತ್ತೆ ಮೈಸೂರಿನ ಹತ್ತಿರ ಇರುವ ತಮ್ಮ ತೋಟದ ಕಡೆ ಹೊರಟಿದ್ದಾರೆ. ಇತ್ತೀಚಿಗಷ್ಟೇ ಡಿಬಾಸ್ ದರ್ಶನ್ ಅವರು ತಮ್ಮ ತೋಟಕ್ಕೆ ಎರಡು ಹೊಸ ಎತ್ತುಗಳನ್ನು ಕೂಡ ತಂದಿದ್ದಾರೆ! ಇನ್ನೊಂದು ಕಡೆ ಡಿಬಾಸ್ ಅವರ ಬಹು ನಿರೀಕ್ಷೆಯ ಚಿತ್ರವಾದ ರಾಬರ್ಟ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಎಲ್ಲಾ ಸರಿ ಹೋದರೆ ಮುಂದಿನ ತಿಂಗಳು ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ.

Trending

To Top