Cinema

ಡಿಬಾಸ್ ದರ್ಶನ್ ನನಗೆ ಸ್ವಂತ ಅಣ್ಣನ ತರ ಎಂದ ಡಾಲಿ ಧನಂಜಯ್! ಕಾರಣ ಏನು ಗೊತ್ತಾ

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಧನಂಜಯ್ ಎಂದರೆ ತಪ್ಪಾಗಲಾರದು. ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸದಭಿರುಚಿಯ ಸಿನಿಮಾಗಳಲ್ಲಿ ಅಭಿನಯಿಸಿ, ಕನ್ನಡ ಸಿನಿಪ್ರಿಯರ ಮನಗೆದ್ದ ನಟ ಧನಂಜಯ್. ಕರ್ನಾಟಕದಲ್ಲಿ ಇವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಕ್ಲಾಸ್ ಮಾಸ್, ಹೀರೋ ವಿಲನ್ ಎರಡು ರೀತಿಯ ಪಾತ್ರಗಳಿಗೂ ಸೂಟ್ ಆಗುವಂತಹ ಕೆಲವೇ ಕೆಲವು ನಟರಲ್ಲಿ ಒಬ್ಬರು ಧನಾಂಜಯ್. ನಿನ್ನೆ ಈ ನಟನ ಹುಟ್ಟುಹಬ್ಬ ಇತ್ತು, ಇಷ್ಟು ವರ್ಷ ಅಭಿಮಾನಿಗಳ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು ಧನಂಜಯ್.

ಆದರೆ ಈ ವರ್ಷ ಕರೊನಾ ಸಂಕಷ್ಟ ಇರುವ ಕಾರಣ, ಹುಟ್ಟುಹಬ್ಬದ ಆಚರಣೆ ಬೇಡ, ಯಾರು ಮನೆಯ ಹತ್ತಿರ ಬರಬೇಡಿ ಎಂದು ಹುಟ್ಟುಹಬ್ಬಕ್ಕೂ ಮೊದಲೇ ನಟ ಧನಂಜಯ್ ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದರಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮೆಚ್ಚಿನ ನಟನಿಗೆ ಶುಭಕೋರಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ನ ಇತರ ಸೆಲೆಬ್ರಿಟಿಗಳು ಸಹ ಧನಂಜಯ್ ಅವರಿಗೆ ಶುಭಕೋರಿದ್ದಾರೆ. ಎಲ್ಲರ ಮೆಚ್ಚಿನ ಡಿಬಾಸ್, “ಹುಟ್ಟುಹಬ್ಬದ ಶುಭಾಶಯಗಳು ಡಾಲಿ..” ಎಂದು ಟ್ವೀಟ್ ಮಾಡಿದ್ದು. ಇದಕ್ಕೆ ರಿಪ್ಲೈ ಮಾಡಿರುವ ಧನಂಜಯ್.. “ಬ್ರದರ್ ಫ್ರಮ್ ಆನೆದರ್ ಮದರ್.. ಥ್ಯಾಂಕ್ ಯೂ.. ದರ್ಶನ್..” ಎಂದು ಟ್ವೀಟ್ ಮಾಡಿದ್ದಾರೆ. ದರ್ಶನ್ ಅವರ ವಿಶ್ ನೋಡಿ ಇಬ್ಬರು ನಟರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯಜಮಾನ ಸಿನಿಮಾದಲ್ಲಿ ದರ್ಶನ್ ಮತ್ತು ಧನಂಜಯ್ ಒಟ್ಟಿಗೆ ನಟಿಸಿದ್ದರು.

ನಟ ಧನಂಜಯ್ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ನಮಗೆಲ್ಲಾ ತಿಳಿದಿದೆ. ಹಾಗಾಗಿ ಸಲಗ ಚಿತ್ರದ ಪರವಾಗಿ ನಟ ದುನಿಯಾ ವಿಜಯ್ “ನಗುತ ನಗುತ ಬಾಳು ನೀನು ನೂರು ವರುಷ.. ಹ್ಯಪಿ ಬರ್ತ್ ಡೇ ಧನಂಜಯ್..” ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಡಾಲಿ ಧನಂಜಯ್ ಬರ್ತ್ ಡೇ ಗೆ ಸಲಗ ಚಿತ್ರತಂಡ ಸೂಪರ್ ಆಗಿರುವ ಗಿಫ್ಟ್ ನೀಡಿದೆ. ಇದಕ್ಕೆ ಮನಸೋತಿರುವ ಧನಂಜಯ್ ಸದಾ ತಮಗೆ ಸಪೋರ್ಟ್ ಮಾಡಿದ ಸಲಗ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರತಿಭಾನ್ವಿತ ನಟ ಸತೀಶ್ ನೀನಾಸಂ. ಧನಂಜಯ್ ಮತ್ತು ಸತೀಶ್ ನೀನಾಸಂ ಸಹ ಒಳ್ಳೆಯ ಗೆಳೆಯರು. “ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಗಲು ನಿನ್ನ ಜೊತೆಗಿರಲಿ.😍@Dhananjayaka..” ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಿಪ್ಲೈ ಮಾಡಿರುವ ಡಾಲಿ, ಥ್ಯಾಂಕ್ ಯೂ ಗೆಳೆಯ ಎಂದಿದ್ದಾರೆ.

ಧನಂಜಯ್ ಅಭಿನಯಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಯುವರತ್ನ, ಯುವರತ್ನ ಚಿತ್ರತಂಡ ಸಹ ಧನಂಜಯ್ ಅವರ ಹುಟ್ಟುಹಬ್ಬದ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಯುವರತ್ನ ಸಿನಿಮಾದಲ್ಲಿ ಆಂಟೋನಿ ಜೋಸೆಫ್ ಪಾತ್ರದಲ್ಲಿ ನಟಿಸಿದ್ದಾರೆ ಧನಂಜಯ್. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್..”ಕಲಾದೇವಿ ಹರಸಿದ ಅರಸೀಕೆರೆಯ ಶೋಭೆ ಕರುನಾಡ ಪ್ರತಿಭೆ @Dhananjayaka ನೀವು ನೂರಾರು ಪಾತ್ರಗಳನ್ನ ಮಾಡಿ ಕನ್ನಡ ಬೆಳ್ಳಿಪರದೆಯಲ್ಲಿ ಧ್ರುವತಾರೆ ಯಾಗಿ ಸದಾ ಜಯ, ದಿಗ್ವಿಜಯ ನಿಮ್ಮದಾಗಲಿ ಧನಂಜಯ❤️ ನಟರಾಕ್ಷಸನಿಗೆ ಜನ್ಮದಿನದ ಶುಭಾಶಯಗಳು😍 #HappyBirthdayAntonyJoseph @hombalefilms @VKiragandur @Karthik1423 @YOGIGRAJ..” ಎಂದು ಬರೆದಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಧನಂಜಯ್.. “ಥ್ಯಾಂಕ್ಸ್ ಬ್ರದರ್..” ಎಂದು ರಿಪ್ಲೈ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟರಲ್ಲಿ ಒಬ್ಬರು ಧನಾಂಜಯ್. ಸತತ 10 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಉದಯೋನ್ಮುಖ ನಟ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸೋಣ.

Trending

To Top