Cinema

ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್! ವಿಡಿಯೋ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳು ಹಾಗೂ ಅರಣ್ಯ ಎಂದರೆ ಬಹಳ ಪ್ರೀತಿ. ತಮಗೆ ಸಮಯ ಸಿಕ್ಕಾಗಲೆಲ್ಲಾ, ಸ್ನೇಹಿತರೊಡನೆ ಕಾಡಿನ ಪ್ರದೇಶಗಳಿಗೆ ಹೋಗಿ ಪ್ರಾಣಿಗಳನ್ನು ನೋಡಿಕೊಂಡು, ಫೋಟೋ ತೆಗೆದುಕೊಂಡು ಬರುತ್ತಾರೆ ಡಿಬಾಸ್. ಪ್ರಾಣಿಗಳು ಪಕ್ಷಿಗಳು ಅವರ ಅಚ್ಚುಮೆಚ್ಚಾದರೆ ಫೋಟೋಗ್ರಫಿ ಅವರ ಪ್ಯಾಷನ್..ಸಧ್ಯಕ್ಕೆ ಲಾಕ್ ಡೌನ್ ಇದ್ದ ಕಾರಣ ಡಿಬಾಸ್ ಎಲ್ಲೂ ಹೊರಹೋಗಲು ಸಾಧ್ಯವಾಗಿಲ್ಲ. ಕರೊನಾ ವೈರಸ್ ಕಾಟ ಶುರುವಾಗುವ ಮೊದಲು ಉತ್ತರಾಖಂಡ್ ನ ಕಾಡುಗಳಿಗೆ ತಮ್ಮ ಸ್ನೇಹಿತರೊಡನೆ ಭೇಟಿ ನೀಡಿದ್ದರು ದರ್ಶನ್. ಪ್ರಕೃತಿ, ಕಾಡು ಹಾಗೂ ಪ್ರಾಣಿ ಪಕ್ಷಿಗಳ ಸುಂದರ ನೋಟವನ್ನು ಆನಂದಿಸಿ ತಮ್ಮ ಕ್ಯಾಮೆರಾದಲ್ಲಿ ಆ ಕ್ಷಣಗಳನ್ನು ಸೆರೆಹಿಡಿದಿದ್ದರು.
ಇದೀಗ ಲಾಕ್ ಡೌನ್ ಆರಂಭವಾದ ನಂತರ ಸಿನಿಮಾ ಶೂಟಿಂಗ್ ಇಲ್ಲದೆ ಫ್ರೀ ಆಗಿದ್ದ ಡಿಬಾಸ್. ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದರು. ತಾವು ಸಾಕಿರುವ ಪ್ರಾಣಿ ಪಕ್ಷಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಅದರ ನಡುವೆ ಸ್ನೇಹಿತರನ್ನು ಸಹ ಭೇಟಿ ಮಾಡುತ್ತಿದ್ದರು. ಇತ್ತೀಚೆಗೆ, ಶ್ರೀ ಮಲೈ ಮಹಾದೇಶ್ವರ ಬೆಟ್ಟದ ಸಮೀಪ ಇರುವ ದೊಡ್ಡಮ್ಮಕಾಳಗಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸ್ನೇಹಿತರೊಡನೆ ಭೇಟಿ ನೀಡಿದ್ದ ದರ್ಶನ್, ಅರಣ್ಯ ಪ್ರದೇಶವನ್ನು ವೀಕ್ಷಿಸಿ, ಗಿಡ ನೆಟ್ಟಿ ಬಂದಿದ್ದರು. ದರ್ಶನ್ ಅವರು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಕೂಡ ಹೌದು.
ಇದೀಗ ನಟ ದರ್ಶನ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದಾರೆ ಹಾಗೂ ಭದ್ರಾ ಜಲಾಶಯವನ್ನು ವೀಕ್ಷಣೆ ಮಾಡಿದ್ದಾರೆ. ಜಲಾಶಯ ವೀಕ್ಷಣೆಯ ನಂತರ ಅರಣ್ಯಕ್ಕೆ ಸಮೀಪ ಇರುವ ಬಿಆರ್ ಪಿಯ ಜಂಗಲ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ ನಟ ದರ್ಶನ್. ಎರಡು ದಿನ ಅದೇ ರೆಸಾರ್ಟ್ ನಲ್ಲೇ ಇರಲಿದ್ದಾರೆ. ನಿನ್ನೆ ಭದ್ರಾ ಅರಣ್ಯದಲ್ಲಿ ಸಫಾರಿ ನಡೆಸಿ, ಫೋಟೋಗ್ರಫಿ ಮಾಡಿದ್ದಾರೆ. ಹಾಸ್ಯನಟ ಚಿಕ್ಕಣ್ಣ ಹಾಗೂ ಇನ್ನಿತರ 10 ಮಂದಿ ಸ್ನೇಹಿತರೊಂದಿಗೆ ದರ್ಶನ್ ಸ್ನೇಹಿತರೊಡನೆ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.

Trending

To Top