Cinema

ನಮ್ಮ ಡಿಬಾಸ್ದ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬ್ಯುಸಿನೆಸ್‌ಗೆ ಸಾಥ್‌ ಕೊಟ್ಟ ರಮ್ಯಾ!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಜೀವನದ ಬಗ್ಗೆ ಹೊಸ ಹೊಸ ಅಪ್ಡೇಟ್ ಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಮಗ ಮತ್ತು ಪತಿಯ ಜೊತೆಗಿನ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇದೇ ತಿಂಗಳು ಆಗಸ್ಟ್ 14ರಿಂದ ಹೊಸದೊಂದು ಉದ್ಯಮ ಶುರುಮಾಡಿದ್ದಾರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ. ಇದರ ಕುರಿತು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅನ್ನದಾತನ ನೆರವಿಗೆ ನಿಂತಿದ್ದಾರೆ.

ಫೇಸ್ ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ.. ಕಮಿಂಗ್ ಸೂನ್ ಎಂದು ಕ್ಯಾಪ್ಶನ್ ಬರೆದಿದ್ದರು. “ನೀವೆಲ್ಲರೂ ರೆಡಿ ಇದ್ದೀರಾ ? ಪಟ್ಟಣದ ಸುತ್ತ ಮುತ್ತ ಫ್ರೆಶ್ ಆಗಿ ಬೆಳೆದಿರುವ ಪದಾರ್ಥಗಳನ್ನು ನೀವು ರುಚಿಸಬಹುದು..” ಎಂದು ಫೋಟೋನಲ್ಲಿ ಬರೆದು, ಹಣ್ಣು ಮತ್ತು ತರಕಾರಿಗಳ ಫೋಟೋಗಳನ್ನು ಹಂಚಿಕೊಂಡಿದ್ದರು ವಿಜಯಲಕ್ಷ್ಮಿ. ಈ ಯೋಜನೆಯಂತೆಯೇ ಆಗಸ್ಟ್ 14ರಿಂದ ವಿಜಯಲಕ್ಷ್ಮಿ ದರ್ಶನ್ ನೇತೃತ್ವದ ಫ್ರೆಶ್ ಬ್ಯಾಸ್ಕೆಟ್ ಉದ್ಯಮ ಶುರುವಾಗಿದೆ. ಫ್ರೆಶ್ ಬ್ಯಾಸ್ಕೆಟ್ ನಲ್ಲಿ ಆರ್ಡರ್ ಮಾಡುವ ಮೂಲಕ, ಫ್ರೆಶ್ ಆದ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ನೇರವಾಗಿ ರೈತರಿಂದಲೆ ಪಡೆಯಬಹುದು.

ವಿಜಯಲಕ್ಷ್ಮಿ ದರ್ಶನ್ ಅವರ ಈ ಹೊಸ ಯೋಜನೆಗೆ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಪೋರ್ಟ್ ಮಾಡಿದ್ದಾರೆ. ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ಕಾಣೆಯಾಗಿದ್ದ ನಟಿ ರಮ್ಯಾ, ಕಳೆದ ಎರಡು ತಿಂಗಳುಗಳಿಂದ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ರಮ್ಯಾ. ಕೆಲದಿನಗಳ ಹಿಂದೆ, ರಾಧಿಕಾ ಪಂಡಿತ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ರಮ್ಯಾ ಕಮೆಂಟ್ ಮಾಡಿದ್ದರು, ಈ ಮೂಲಕ ಈ ಇಬ್ಬರು ನಟಿಯರ ಒಳ್ಳೆಯ ಸ್ನೇಹವಿದೆ ಎಂಬುದು ಎಲ್ಲರಿಗು ತಿಳಿದು ಬಂದಿತ್ತು. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬ್ಯುಸಿನೆಸ್ ಗು ಸಪೋರ್ಟ್ ಮಾಡಿರುವ ರಮ್ಯಾ, ದರ್ಶನ್ ಕುಟುಂಬದ ಜೊತೆ ಸಹ ತಮಗೆ ಒಳ್ಳೆಯ ಸ್ನೇಹವಿದೆ ಎಂಬುದನ್ನು ತೋರಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೊಸ ಬ್ಯುಸಿನೆಸ್ ಮೈ ಫ್ರೆಶ್ ಬ್ಯಾಸ್ಕೆಟ್ ಗೆ ಪ್ರಚಾರ ಮಾಡಿದ್ದಾರೆ. ರಮ್ಯಾ ಅವರ ಈ ಪೋಸ್ಟ್ ಗಳನ್ನೆಲ್ಲ ನೋಡಿದರೆ, ದರ್ಶನ್ ಸಿನಿಮಾ ಮೂಲಕ ಈ ನಟಿ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಜೀವನದ ಬಗ್ಗೆ ಹೊಸ ಹೊಸ ಅಪ್ಡೇಟ್ ಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಮಗ ಮತ್ತು ಪತಿಯ ಜೊತೆಗಿನ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇದೇ ತಿಂಗಳು ಆಗಸ್ಟ್ 14ರಿಂದ ಹೊಸದೊಂದು ಉದ್ಯಮ ಶುರುಮಾಡಿದ್ದಾರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ. ಇದರ ಕುರಿತು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅನ್ನದಾತನ ನೆರವಿಗೆ ನಿಂತಿದ್ದಾರೆ.

Trending

To Top