ಹುಟ್ಟುಹಬ್ಬಕೂ ಮುನ್ನವೇ ವೈರಲ್ ಆಯ್ತು ದರ್ಶನ್ ಕಾಮನ್ ಡಿ.ಪಿ!

ಬೆಂಗಳೂರು: ಫೆ.16 ರಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬಕ್ಕೂ ಮುಂಚೆಯೇ ಅವರ ಕಾಮನ್ ಡಿಪಿ ಹಾಕಿಕೊಂಡು ಅನೇಕ ನಟರು, ಅಭಿಮಾನಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಬಾಸ್ ಪರ್ವ ಎಂಬ ಪೋಸ್ಟರ್ ಹೆಸರಿನಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಸಂಭ್ರಮಿಸಲಾಗುತ್ತಿದ್ದು, ಈ ಪೋಸ್ಟರ್ ನಲ್ಲಿ ದರ್ಶನ್ ಅವರಿಗಿರುವ ಪ್ರಾಣಿಪ್ರೇಮ, ಹಾಗೂ ಪರಿಸರ ಪ್ರೇಮ ಕಾಣಬಹುದಾಗಿದೆ. ಇನ್ನೂ ಅರಣ್ಯದಲ್ಲಿ ವನ್ಯಜೀವಿಗಳ ಜೊತೆ ದರ್ಶನ್ ಕುಳಿತಿರುವಂತೆ ಈ ಪೋಸ್ಟರ್ ಡಿಸೈನ್ ಮಾಡಿದ್ದು, ಸುಂದರವಾಗಿ ವಿನ್ಯಾಸ ಮಾಡಲಾಗಿದೆ.

ಇನ್ನೂ ಕೊರೋನಾ ಹಿನ್ನೆಲೆಯಲ್ಲಿ ದರ್ಶನ್ ರವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ಯಾರು ಕೂಡ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಬೇಡಿ.  ಹುಟ್ಟುಹಬ್ಬದ ಹೆಸರಿನಲ್ಲಿ ಮನೆಯ ಬಳಿ ಬರುವುದಾಗಲಿ ದುಡ್ಡು ಖರ್ಚು ಮಾಡುವುದಾಗಲಿ ಬೇಡ. ಅದೇ ಹಣದಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಅಥವಾ ನಿಮ್ಮ ಕುಟುಂಬಗಳ ಕಷ್ಟಗಳಿಗೆ ಬಳಸಿಕೊಳ್ಳಿ ಎಂದು ಮನವಿ ಸಹ ಮಾಡಿದ್ದರು.

ಇನ್ನೂ ದರ್ಶನ್ ರವರ ಈ ಪೋಸ್ಟರ್ ಅನ್ನು ಕಾಮನ್ ಡಿಪಿಯನ್ನಾಗಿ ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುದೀರ್, ನಟ ಜಗ್ಗೇಶ್, ನಟ ಪ್ರೇಮ್, ನಟಿ ಸುಮಲತಾ ಅಂಬರೀಶ್, ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿದಂತೆ ಅನೇಕ ನಟ-ನಟಿಯರು ಶೇರ್ ಮಾಡಿದ್ದು, ಅಪಾರ ಸಂಖ್ಯೆ ಅಭಿಮಾನಿಗಳು ಸಹ ಇದೇ ಪೋಸ್ಟರ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ರವರ ಹುಟ್ಟುಹಬ್ಬದಂದು ರಾಬರ್ಟ್ ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಲಿದ್ದು, ಅಂದೇ ಹೊಸ ಚಿತ್ರಗಳ ಘೋಷಣೆ ಏನಾದರೂ ಆಗಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

Previous articleಜುಲೈ 30ರಂದು ತೆರೆಗೆ ಬರಲಿದೆ ರಾಧೆ ಶ್ಯಾಮ್ ಸಿನೆಮಾ!
Next articleಮಾಲ್ಡೀವ್ಸ್ ನಲ್ಲಿ ಗಾಯಕಿ ಸುನಿತಾ-ರಾಮ್ ಹನಿಮೂನ್ ಪ್ರವಾಸ!