News

ನಾನು ದರ್ಶನ್ ಜೊತೆ ಸಿನಿಮಾ ಮಾಡಲು ರೆಡಿ ಎಂದು ಹೇಳಿದ ಕಿಚ್ಚ ಸುದೀಪ್, ದಚ್ಚು ಕಿಚ್ಚ ಅಭಿಮಾನಿಗಳಿಗೆ ಹಬ್ಬ!

sudeep-tweet

ಹೌದು! ಈ ವಿಷ್ಯ ಕೇಳಿದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹಬ್ಬ ಎಂದೇ ಹೇಳಬಹುದು. ಒಂದು ಕಾಲದಲ್ಲಿ ನಮ್ಮ ದರ್ಶನ್ ಹಾಗು ಸುದೀಪ್ ಅವರು ಕುಚ್ಚಿಕು ಗೆಳೆಯರಾಗಿದ್ದರು. ಸುಮಾರು 15 ಕ್ಕೂ ಹೆಚ್ಚು ವರ್ಷಗಳ ಕಾಲ ದರ್ಶನ್ ಹಾಗು ಸುದೀಪ್ ಅವರು ಬಹಳ ಒಳ್ಳೆಯ ಗೆಲೆರಗಿದ್ದರು. ಆದರೆ 2017 ಯಾವುದೊ ಒಂದು ಸಣ್ಣ ಕಾರಣಕ್ಕೆ ಇವರಿಬ್ಬರ ಸ್ನೇಹ ದೂರವಾಯಿತು. ಇದ್ದರಿಂದ ದರ್ಶನ್ ಹಾಗು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬಹಳ ಬೇಸರವಾಗಿತ್ತು. ಇದರ ಹಲವಾರು ಬಾರಿ ಮಾಧ್ಯಮದವರು ದರ್ಶನ್ ಹಾಗು ಸುದೀಪ್ ಅವರಿಗೆ ಕೇಳಿದಾಗ ಇಬ್ಬರೂ ಕೂಡ ಇದರ ಬಗ್ಗೆ ಜಾಸ್ತಿ ಏನು ಮಾತಾಡುತ್ತಿರಲಿಲ್ಲ. ಈಗ ಸುದೀಪ್ ಅವರು ಹೌದು ನಾನು ದರ್ಶನ್ ಜೊತೆ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದಾರೆ. ಅದು ಹೇಗೆ ಗೊತ್ತ? ಈ ಕಂಪ್ಲೀಟ್ ಸ್ಟೋರಿ ಓದಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ದರ್ಶನ್ ಹಾಗು ಸುದೀಪ್ ಅವರನ್ನು ಇಷ್ಟ ಪಡುವ ಅಭಿಮಾನಿಗಳು ಅದೆಷ್ಟೋ ಲಕ್ಷ ಮಂದಿ ಇದ್ದಾರೆ. ಇಬ್ಬರು ಒಂದೇ ಚಿತ್ರದಲ್ಲಿ ನಟಿಸಬೇಕು , ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕು, ಇಬ್ಬರು ಒಟ್ಟಿಗೆ ಇರಬೇಕು ಎಂದು ಆಸೆ ಪಡುವ ಅಭಿಮಾನಿಗಳು ಬಹಳಷ್ಟು ಜನ ಇದ್ದಾರೆ. ಕಿಚ್ಚ ಸುದೀಪ್ ಅವರು twitter ನಲ್ಲಿ ಬಹಳ active ಇರುತ್ತಾರೆ. ಅಭಿಮಾನಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಬಹಳ ತಾಳ್ಮೆ ಇಂದ ಕಿಚ್ಚ ಸುದೀಪ್ ಅವರು ಉತ್ತರಿಸುತ್ತಾರೆ. ಇದೆ ರೀತಿ ಒಬ್ಬ ದರ್ಶನ್ ಅವರ ಅಭಿಮಾನಿ ಕಿಚ್ಚ ಸುದೀಪ್ ಅವರನ್ನು “ಅಣ್ಣಾ, ನೀವು ನಮ್ಮ ಡಿಬಾಸ್ ಅವರ ಜೊತೆ ಯಾವಾಗ ಸಿನಿಮಾ ಮಾಡುತ್ತೀರಾ?, ನೀವಿಬ್ಬರು ಬಾಕ್ಸ್ ಆಫೀಸ್ ಕಿಂಗ್ ಗಳು, ನಿಮ್ಮಿಬ್ಬರ ಸಿನಿಮಾ ನೋಡಬೇಕು ಎಂದು ಅದೆಷ್ಟೋಜನಕ್ಕೆ ಆಸೆ ಇದೆ” ಎಂದು ಟ್ವೀಟ್ ಮಾಡಿದ್ದರು. ಈ ಅಭಿಮಾನಿಯೇ ಟ್ವೀಟ್ ಈ ಕೆಳಗಿನ ಫೋಟೋದಲ್ಲಿ ನೋಡಿರಿ
ಅಭಿಮಾನಿಯ ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು “ಫ್ರೆಂಡ್, ಒಂದೊಳ್ಳೆ ಸ್ಕ್ರಿಪ್ಟ್ ಬಂದರೆ ನಾನು ಖಂಡಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೇನೆ” ಎಂದು ಹೇಳಿದ್ದಾರೆ. ಸದ್ಯ ಈ ಒಂದು ಟ್ವೀಟ್ ನಿಂದಾಗಿ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಬಹಳ ಖುಷಿ ತಂದಿದೆ. ಈ ಟ್ವೀಟ್ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಕಿಚ್ಚ ಸುದೀಪ್ ಅವರ ಟ್ವೀಟ್ ಹೇಗಿತ್ತು ಅಂತ ಈ ಕೆಳಗಿನ ಫೋಟೋದಲ್ಲಿ ನೋಡಿರಿ
ಈ ತಿಂಗಳು ಸಂಕ್ರಾಂತಿ ಹಬ್ಬದ ದಿನ ದರ್ಶನ್ ಅವರ ಯಜಮಾನ ಚಿತ್ರದ ಜೊತೆ ನಮ್ಮ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು. ಪೈಲ್ವಾನ್ ಚಿತ್ರದ ಟೀಸರ್ ಕೂಡ ಯೌಟ್ಯೂಬ್ ನಲ್ಲಿ ಸುಮಾರು 2 ದಿನಗಳ ಕಾಲ ಟ್ರೆಂಡಿಂಗ್ ಆಗಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಟೀಸರನ್ನು ಒಂದು ವಾರದಲ್ಲಿ ಬರೋಬ್ಬರಿ ೩೦ ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಇದಲ್ಲದೆ ನಮ್ಮ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಅನ್ನು ನೋಡಿ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್, ತಮಿಳು ನಟ ಪ್ರಭುದೇವ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಹಾಗು ಇನ್ನೂ ಹತ್ತು ಹಲವಾರು ಭಾರತದ ಕಲಾವಿದರು ಇದರ ಬಗ್ಗೆ ಟ್ವೀಟ್ ಮಾಡಿದ್ದರು, ಹಾಗು ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ನಮ್ಮ ದರ್ಶನ್ ಅವರ ಯಜಮಾನ ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳು.
ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಹಾಗು ರಚಿತಾ ರಾಮ್ ಅವರ ಅಭಿನಯದ ಮತ್ತೊಂದು ಬಹು ನಿರೀಕ್ಷೆಯ ಕನ್ನಡ ಚಿತ್ರವೆಂದರೆ ಅದು ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ. ಸೀತಾರಾಮ ಕಲ್ಯಾಣ ಚಿತ್ರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೈಲರ್ 3 ದಿನಗಳ ಹಿಂದೆ ಅಷ್ಟೇ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ ಹಾಗು ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಅನ್ನು ಕೇವಲ 3 ದಿನಗಳಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಈ ಮೂಲಕ ಬಲ್ಲ ಮೂಲಗಳ ಪ್ರಕಾರ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ದರ್ಶನ್ ಅವರ ಯಜಮಾನ ಹಾಡಿನ ವಿಡಿಯೋ ವನ್ನು ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರನ್ನು ಯೌಟ್ಯೂಬ್ ನಲಿ ಹಿಂದಿಕ್ಕಿದೆ ಎಂದು ತಿಳಿದು ಬಂದಿದೆ. ದರ್ಶನ್ ಅವರ ಯಜಮಾನ ಚಿತ್ರದ ಹಾಡನ್ನು ಒಂದು ವಾರದಲ್ಲಿ 60 ಲಕ್ಷ ಜನ ನೋಡಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರನ್ನು ಒಂದು ವಾರದಲ್ಲಿ 30 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ, ಹಾಗು ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಅನ್ನು ಕೇವಲ ಮೂರು ದಿನಕ್ಕೆ ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ ಎಂದು ತಿಳಿದು ಬಂದಿದೆ.

Trending

To Top