News

(video)ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದರ್ಶನ್! ವಿಡಿಯೋ ನೋಡಿ

darshan-siddu

ನೆನ್ನೆ ನಮ್ಮ ಮೈಸೂರಿನಲ್ಲಿ ಇರುವ ನಂಜನ್ ಗೂಡು ತಾಲೂಕಿನ ಸುತ್ತೂರಿನಲ್ಲಿ “ಸುತ್ತೂರು ಜಾತ್ರೆ” / ಸುತ್ತೂರು ಮಹೋತ್ಸವವನ್ನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಉದ್ಘಾಟನೆ ಮಾಡಿದ್ದರು. ಈ ಸಮಾಯ್ದಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಆದ ಸಿದ್ದರಾಮಯ್ಯ ಕೂಡ ವೇದಿಕೆ ಮೇಲೆ ಬಂದರು! ಮಾಜಿ ಮುಖ್ಯ ಮಂತ್ರಿ ಸಿದ್ದು ಬಂದಾಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ನಮ್ಮ ದರ್ಶನ್ ಅವರು ಸಿದ್ದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಕರ್ನಾಟಕದ ಮೈಸೂರಿನ, ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಪ್ರತಿ ವರ್ಷ ಕೂಡ ಬಹಳ ದೊಡ್ಡ ರೀತಿಯಲ್ಲಿ ಜಾತ್ರೆ ನಡೆಯುತ್ತದೆ. ಸುತ್ತೂರುನಲ್ಲಿ ಸುತ್ತೂರು ಮಠ ಬಹಳ ಹೆಸರು ವಾಸಿ! ಈ ವರ್ಷದ ಸುತ್ತೂರು ಜಾತ್ರೆ ಇಂದಿಂದ ಶುರು ಆಗಿದೆ. ಇವತ್ತು ಜಾತ್ರೆಗೆ ಚಾಲನೆ ಕೊಟ್ಟರು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಜಾತ್ರೆಯನ್ನು ಚಾಲನೆ ಕೊಟ್ಟ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ದರ್ಶನ್ ಅವರು ಬಹಳ ಅದ್ಭುತವಾಗಿ ಮಾತಾಡಿದ್ದಾರೆ. ಇದಲ್ಲದೆ ನಾನು ಎಂದಿಗೂ ಚಿರಋಣಿ ಎಂದು ಜನರಿಗೆ ಹೇಳಿದ್ದಾರೆ. ಇವತ್ತು ದರ್ಶನ್ ಅವರನ್ನು ನೋಡಲೆಂದೇ ಪಕ್ಕದ ಹಳ್ಳಿಗಳಿಂದ ಸಾವಿರಾರು ಜನರು ಬಂದಿದ್ದರು! ಸುತ್ತೂರು ಜಾತ್ರೆಯಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅದ್ಭುತ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಯಜಮಾನ ಚಿತ್ರದ ಸುಮಾರು 3 ಹಾಡುಗಳು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು. ಅತೀ ಶೀಘ್ರದಲ್ಲೇ ದರ್ಶನ್ ಅವರ ಬಹು ನಿರೀಕ್ಷೆಯ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಯಜಮಾನ ಚಿತ್ರಕ್ಕೆ ನಮ್ಮ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಯಜಮಾನ ಚಿತ್ರದ ಶಿವನಂದಿ, ಒಂದು ಮುಂಜಾನೆ ಹಾಗು ಬಸನ್ನಿ ಎಂಬ ಹಾಡುಗಳು ಬಿಡುಗಡೆ ಆಗಿದೆ. ಇತ್ತೀಚಿಗೆ ಯಜಮಾನ ಚಿತ್ರದ ಚಿತ್ರೀಕರಣ ದೂರದ ಸ್ವೀಡನ್ ದೇಶದಲ್ಲಿ ನಡೆಯಿತು ಹಾಗು ಯಜಮಾನ ಚಿತ್ರದ ಶೇಕಡಾ 80 ರಷ್ಟು ಚಿತ್ರೀಕರಣ ಮುಗಿದಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಚಿತ್ರವಾದ ಕುರುಕ್ಷೇತ್ರ ಕೂಡ ಕೆಲವೇ ಕೆಲವು ತಿಂಗಳು ಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ ಒಂದು ಪ್ರೆಸ್ ಮೀಟ್ ನಲ್ಲಿ ಕುರುಕ್ಷೇತ್ರ ಚಿತ್ರದ ನಿರ್ಮಾಪಕರಾದ ಮುನಿರತ್ನ ಅವರು, ಸದ್ಯ ಕುರುಕ್ಷೇತ್ರ ಚಿತ್ರದ 2D ಕೆಲಸಗಳು ಮುಗಿದಿದೆ, ಈಗ 3D ಕೆಲಸಗಳು ನಡೆಯುತ್ತಿವೆ, ಮಾರ್ಚ್ ತಿಂಗಳಲ್ಲಿ ಕುರುಕ್ಷೇತ್ರ ಚಿತ್ರ ಕಂಡಿತಾ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರೆಬೆಲ್ ಸ್ಟಾರ್ ಅಂಬರೀಷ್, ಜೈ ಜಗದೀಶ್ ಹಾಗು ಇನ್ನೂ ಹಲವಾರು ಹಿರಿಯ ಕನ್ನಡ ನಟರು ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು busiest ನಟರಲ್ಲಿ ಒಬ್ಬರು! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಲ್ ಶೀಟ್ 2022 ತನಕ ಫುಲ್ ಆಗಿದೆ. ಈ ವರ್ಷ ದರ್ಶನ್ ಅವರು ಅಂಬಿ ಪುತ್ರ ಅಭಿಷೇಕ್ ಅವರ ಅಮರ್ ಚಿತ್ರದಲ್ಲಿ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗು ಪ್ರಜ್ವಲ್ ದೇವರಾಜ್ ಅವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಕೂಡ ಬಹಳ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
ಸ ರೇ ಗ ಮ ಪ ವೇದಿಕೆಯಿಂದ ಇಡೀ ಕರ್ನಾಟಕದ ಮನೆ ಮಾತಾಗಿರುವ ಗಾಯಕ ಹನುಮಂತನಿಗೆ ಈಗ ಎಲ್ಲಿಲ್ಲದ ಬೇಡಿಕೆ! ಇತ್ತೀಚಿಗೆ ನಮ್ಮ ಮುಖ್ಯಮಂತ್ರಿ ಅವರು ಹನುಮಂತನ ಕುಟುಂಬಕ್ಕೆ ಸುಮಾರು 5 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ! ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಡೆ ಇಂದ ಹನುಮಂತನಿಗೆ ಊಹೆ ಕೂಡ ಮಾಡಲಾಗದ ಒಂದು ಅದೃಷ್ಟ ಒದಗಿ ಬಂದಿದೆ. ಅದೇನಪ್ಪ ಅಂದರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರದಲ್ಲಿ ಹನುಮಂತ ಒಂದು ಹಾಡನ್ನು ಹಾಡಲೇಬೇಕು ಎಂದು ದರ್ಶನ್ ಅವರು ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಹೇಳಿದ್ದಾರಂತೆ! ಹೌದು! ರಾಬರ್ಟ್ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯದ 53 ನೇ ಚಿತ್ರ. ಈ ಚಿತ್ರವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಹಾಗು ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹನುಮಂತನ ಹಾಡುಗಳನ್ನು ಕೇಳಿ ಬಹಳ ಇಷ್ಟ ಆಗಿ ದರ್ಶನ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಳಿದು ಬಂದಿದೆ. ಹನುಮಂತ ಈಗಾಗಲೇ ಬಹಳ ಫೇಮಸ್ ಆಗಿದ್ದಾನೆ! ಇನ್ನೂ ದರ್ಶನ್ ಸಿನಿಮಾದಲ್ಲಿ ಹಾಡುತ್ತಾನೆ ಎಂದರೆ ಅವನ ರೆಂಜ್ ಏನ್ ಆಗುತ್ತದೆ ಅಂತ ನೀವೇ ಊಹಿಸಿ!

Trending

To Top