Film News

ನಿರ್ದೇಶಕ ಮುನಿರತ್ನ ಪರವಾಗಿ ಪ್ರಚಾರ ಶುರು ಮಾಡುವ ಮೊದಲು ಮೀಡಿಯಾ ಮುಂದೆ ಡಿಬಾಸ್ ಹೇಳಿದ್ದೇನು ?

ಸಹಾಯ ಮತ್ತು ಸ್ನೇಹ ಎಂಬ ವಿಚಾರಕ್ಕೆ ಬಂದರೆ ಮೊದಲು ನೆನಪಾಗುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಸಹಾಯ ಮಾಡುವವರ ಜೊತೆ ನಿಂತು ತಾವು ಪ್ರೋತ್ಸಾಹ ನೀಡುತ್ತಾರೆ. ಎಲೆಕ್ಷನ್ ಸಮಯದಲ್ಲಿ ತಮ್ಮ ಸ್ನೇಹಿತರು ಸ್ಪರ್ಧಿಸಿದ್ದರೆ ಅವರ ಪರವಾಗಿ ಪ್ರಚಾರಕ್ಕೆ ತೆರಳಿ, ಸಪೋರ್ಟ್ ಮಾಡುತ್ತಾರೆ. ಕಳೆದ ಬಾರಿ ಎಲೆಕ್ಷನ್ ನಲ್ಲಿ ಸುಮಲತಾ ಅಂಬರೀಶ್ ಅವರ ಪರವಾಗಿ ದರ್ಶನ್ ಅವರು ಯಾವ ರೀತಿ ಪ್ರಚಾರ ಮಾಡಿದರು ಎಂಬುದನ್ನು ನಾವು ನೋಡಿದ್ದೇವೆ.

ಈ ಬಾರಿ, ಬೆಂಗಳೂರಿನಲ್ಲಿ ಶುರುವಾಗಿರುವ ಚುನಾವಣೆಯ ಪ್ರಚಾರದಲ್ಲಿ ಸಹ ಭಾಗಿಯಾಗಲಿದ್ದಾರೆ ಡಿಬಾಸ್ ದರ್ಶನ್. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ, ಕುರುಕ್ಷೇತ್ರ ಅಂತಹ ಅದ್ಭುತವಾದ ಸಿನಿಮಾವನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ ನಿರ್ದೇಶಕ ಮುನಿರತ್ನ ಅವರು ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ಪ್ರಚಾರ ಮಾಡಿದ್ದಾರೆ ಡಿಬಾಸ್.

ಬೆಂಗಳೂರಿನ ರಾಜ ರಾಜೇಶ್ವರಿ ನಗರಕ್ಕೆ ಪ್ರಚಾರಕ್ಕಾಗಿ ತೆರಳುವ ಮೊದಲು, ತಮ್ಮ ಮನೆಯ ಮುಂದೆ ಮಾಧ್ಯಮದವರೊಡನೆ ಮಾತನಾಡಿದ ದರ್ಶನ್ ಅವರು ತಾವು ವ್ಯಕ್ತಿಯ ಒಳ್ಳೆ ಗುಣವನ್ನು ನೋಡಿ ಅವರ ಪರವಾಗಿ ಪ್ರಚಾರ ಮಾಡಲು ಹೋಗುವುದಾಗಿ ಹೇಳಿದ್ದರು. ಕರೊನಾ ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಆಹಾರ ವ್ಯವಸ್ಥೆ ಮಾಡಿ ಮುನಿರತ್ನ ಅವರು ಸಾಕಷ್ಟು ಸಹಾಯ ಮಾಡಿದ್ದರು ಆ ಕಾರಣಕ್ಕಾಗಿ ಅವರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ್ದರು ಡಿಬಾಸ್.

ಮಾನವೀಯತೆಯ ದೃಷ್ಟಿಯಿಂದ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿದ್ದರು.ಮುನಿರತ್ನ ಅವರು ತಮಗೆ ಬಹಳ ಆಪ್ತರು ಜೊತೆಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು ಹಾಗಾಗಿ ಅವರು ಎಲ್ಲಿಗೆ ಕರೆದರೂ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದರು. ಇಡೀ ದಿನ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದ ಡಿಬಾಸ್, ತಮ್ಮ ಅಭಿಮಾನಿಗಳಿಗೋಸ್ಕರ ಸಿನಿಮಾ ಡೈಲಾಗ್ ಸಹ ಹೇಳಿ ಮನರಂಜನೆ ನೀಡಿದ್ದಾರೆ.

Trending

To Top