News

ದರ್ಶನ್ ಮದಕರಿ ಸಿನಿಮಾದ ಬಜೆಟ್ ಬರೋಬ್ಬರಿ 100 ಕೋಟಿ! ಎಲ್ಲಾರ ರೆಕಾರ್ಡ್ ಗಳು ಉಡೀಸ್!

madakari

ನಿಮಗೆಲ್ಲಾ ಗೊತ್ತಿರೋ ಹಾಗೆ ಕಳೆದ ವರ್ಷ ಮದಕರಿ ನಾಯಕ ಎಂಬ ಚಿತ್ರದ ಬಗ್ಗೆ ಬಹಳಷ್ಟು ಕಾಂಟ್ರೊವರ್ಸಿಗಳು ಆಗಿತ್ತು. ಮೊದಲಿಗೆ ಈ ಚಿತ್ರವನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಾನು ಮಾಡುತ್ತೇನೆ ಎಂದು ಹೇಳಿದ್ದರು. ಇದಾದ ನಂತರ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು, ಇಲ್ಲ ನಾನು ದರ್ಶನ್ ಅವರನ್ನು ಹಾಕಿಕೊಂಡು ಈ ಚಿತ್ರವನ್ನು ಮಾಡುತ್ತೇನೆ ಎಂದು ಹೇಳಿದ್ದರು. ಕೊನೆಗೆ ನಮ್ಮ ಕಿಚ್ಚ ಸುದೀಪ್ ಅವರು, ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಮಾತಾಡಿ, ಈ ಚಿತ್ರವನ್ನು ನೀವೇ ಮಾಡಿ, ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ವೀರ ಮದಕರಿ ನಾಯಕ ಚಿತ್ರವನ್ನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಮಾಡುತ್ತಿದ್ದಾರೆ ಹಾಗು ಇದನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯ ಈ ಚಿತ್ರದ ಟೈಟಲ್ ಮದಕರಿ ಎಂದು ಫೈನಲ್ ಮಾಡಲಾಗಿದೆ. ಬಲ್ಲ ಮೂಲಗಳ ಪ್ರಕಾರ ಮದಕರಿ ಚಿತ್ರ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರ ಒಂದರ ಬಜೆಟ್ ಬರೋಬ್ಬರಿ 100 ಕೋಟಿ ದಾಟಲಿದೆ. ಇದನ್ನು ಕುದ್ದು ರಾಕ್ ಲೈನ್ ವೆಂಕಟೇಶ್ ಅವರೇ ಹೇಳಿದ್ದಾರೆ, ಹೌದು! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮದಕರಿ ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 100 ಕೋಟಿ! ಇದಲ್ಲದೆ ಮದಕರಿ ಚಿತ್ರದ ಇನ್ನೆಂದು ಕಾಣದ ಅತೀ ದೊಡ್ಡ ತಾರಾ ಬಳಗವನ್ನು ಕಾಣ ಬಹುದು ಎಂದು ತಿಳಿದು ಬಂದಿದೆ. ಮದಕರಿ ಚಿತ್ರದ ಬಜೆಟ್ ಬಗ್ಗೆ ಎಸ್ಕ್ಲ್ಯೂಸಿವ್ ಮಾಹಿತಿ , ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಯಜಮಾನ ಚಿತ್ರದ ಸುಮಾರು 3 ಹಾಡುಗಳು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು. ಅತೀ ಶೀಘ್ರದಲ್ಲೇ ದರ್ಶನ್ ಅವರ ಬಹು ನಿರೀಕ್ಷೆಯ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಯಜಮಾನ ಚಿತ್ರಕ್ಕೆ ನಮ್ಮ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಯಜಮಾನ ಚಿತ್ರದ ಶಿವನಂದಿ, ಒಂದು ಮುಂಜಾನೆ ಹಾಗು ಬಸನ್ನಿ ಎಂಬ ಹಾಡುಗಳು ಬಿಡುಗಡೆ ಆಗಿದೆ. ಇತ್ತೀಚಿಗೆ ಯಜಮಾನ ಚಿತ್ರದ ಚಿತ್ರೀಕರಣ ದೂರದ ಸ್ವೀಡನ್ ದೇಶದಲ್ಲಿ ನಡೆಯಿತು ಹಾಗು ಯಜಮಾನ ಚಿತ್ರದ ಶೇಕಡಾ 80 ರಷ್ಟು ಚಿತ್ರೀಕರಣ ಮುಗಿದಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಚಿತ್ರವಾದ ಕುರುಕ್ಷೇತ್ರ ಕೂಡ ಕೆಲವೇ ಕೆಲವು ತಿಂಗಳು ಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ ಒಂದು ಪ್ರೆಸ್ ಮೀಟ್ ನಲ್ಲಿ ಕುರುಕ್ಷೇತ್ರ ಚಿತ್ರದ ನಿರ್ಮಾಪಕರಾದ ಮುನಿರತ್ನ ಅವರು, ಸದ್ಯ ಕುರುಕ್ಷೇತ್ರ ಚಿತ್ರದ 2D ಕೆಲಸಗಳು ಮುಗಿದಿದೆ, ಈಗ 3D ಕೆಲಸಗಳು ನಡೆಯುತ್ತಿವೆ, ಮಾರ್ಚ್ ತಿಂಗಳಲ್ಲಿ ಕುರುಕ್ಷೇತ್ರ ಚಿತ್ರ ಕಂಡಿತಾ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರೆಬೆಲ್ ಸ್ಟಾರ್ ಅಂಬರೀಷ್, ಜೈ ಜಗದೀಶ್ ಹಾಗು ಇನ್ನೂ ಹಲವಾರು ಹಿರಿಯ ಕನ್ನಡ ನಟರು ನಟಿಸಿದ್ದಾರೆ.
ಸದ್ಯ ಕನ್ನಡದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು busiest ನಟರಲ್ಲಿ ಒಬ್ಬರು! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಲ್ ಶೀಟ್ 2022 ತನಕ ಫುಲ್ ಆಗಿದೆ. ಈ ವರ್ಷ ದರ್ಶನ್ ಅವರು ಅಂಬಿ ಪುತ್ರ ಅಭಿಷೇಕ್ ಅವರ ಅಮರ್ ಚಿತ್ರದಲ್ಲಿ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗು ಪ್ರಜ್ವಲ್ ದೇವರಾಜ್ ಅವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಕೂಡ ಬಹಳ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top