News

(video)ಬಾಹುಬಲಿ ನ ಕೆಜಿಫ್ ಚಿತ್ರಾನಾ? ಯಾವುದು ಇಷ್ಟ ಅಂತ ಕೇಳಿದಾಗ ದರ್ಶನ್ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

darshan-kgf

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಬಹು ನಿರೀಕ್ಷೆಯ ಚಿತ್ರವಾದ ಯಜಮಾನ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ! ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಚಿತ್ರ ಬಿಡುಗಡೆ ಆಗಿ ಇಡೀ ದೇಶದ ಗಮನ ಸೆಳೆದಿದೆ. ನಮ್ಮ ಕನ್ನಡ ಚಿತ್ರ ರಂಗವನ್ನು ಇಡೀ ದೇಶಕ್ಕೆ ತಲುಪುವಂತೆ ಮಾಡಿದೆ ಕೆಜಿಫ್ ಚಿತ್ರ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನ್ನೆ ಸುಗುಣ ಅವರು ಸಂದರ್ಶನ ಮಾಡಿದ್ದಾರೆ! ಈ ಸಮಯದಲ್ಲಿ ಸುಗುಣ ಅವರು ದರ್ಶನ್ ಅವರಿಗೆ ನಿಮಗೆ ಬಾಹುಬಲಿ ನ , ಕೆಜಿಫ್ ಚಿತ್ರಾನಾ ಯಾವುದು ಇಷ್ಟ ಎಂದು ಕೇಳಿದಾಗ ದರ್ಶನ್ ಅವರು ಕೆಜಿಫ್ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದಲ್ಲದೆ ಬಹು ನಿರೀಕ್ಷೆಯ ಯಜಮಾನ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್, ಶಿವರಾಜ್ KR ಪೇಟೆ, ಥಾಕುರ್ ಅನೂಪ್ ಸಿಂಗ್, ಹಿರಿಯ ನಟ ದೇವರಾಜ್, ಹೆಬ್ಬಾಲೆ ಕೃಷ್ಣ, ಶಂಕರ್ ಅಶ್ವತ್ ಅವರು ಕೂಡ ನಟಿಸಿದ್ದಾರೆ! ಯಜಮಾನ ಚಿತ್ರದ ಬಹಳಷ್ಟು ಜನ ಹಿರಿಯ ಕಲಾವಿದರು ಕೆಲಸ ಮಾಡಿದ್ದಾರೆ! ಇದಲ್ಲದೆ ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಯಜಮಾನ ಚಿತ್ರದ ಪ್ರತಿ ಒಂದು ಹಾಡುಗಳು ಕೂಡ ಈಗಾಗಲೇ ಸೂಪರ್ ಹಿಟ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಇತ್ತೀಚಿಗೆ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕನ್ನಡದ ಎಲ್ಲಾ ಹಳೆಯ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಯಜಮಾನ ಚಿತ್ರದ ಟ್ರೇಲರನ್ನು ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ! ಯಜಮಾನ ಚಿತ್ರ ಕರ್ನಾಟಕ ಅಲ್ಲದೆ, ನಮ್ಮ ಪಕ್ಕದ ರಾಜ್ಯಗಳಲ್ಲಿ ಕೂಡ ಬಿಡುಗಡೆ ಆಗಲಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ, ತಮಿಳು ನಾಡು, ಆಂಧ್ರ ಪ್ರದೇಶ ಹಾಗು ಕೇರಳದಲ್ಲಿ ಕೂಡ ಬಿಡುಗಡೆ ಆಗಲಿದೆ. ಕರ್ನಾಟಕ ಅಲ್ಲದೆ ಹೊರ ರಾಜ್ಯ ಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಯಜಮಾನ ಚಿತ್ರದಲ್ಲಿ ಖಳನಾಯಕರಾಗಿ ಆರ್ಮುಗಂ ರವಿ ಶಂಕರ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಡಾಲಿ ಧನಂಜಯ್ ಅವರು ಟಗರು ಚಿತ್ರದ ಮೂಲಕ ಖಳನಾಯಕರಾಗಿ ಎಂಟ್ರಿ ಕೊಟ್ಟು ಈಗ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ! ಯಜಮಾನ ಚಿತ್ರದಲ್ಲಿ ಡಾಲಿ ಧನಂಜಯ್ ಅವರು, ಮಿಠಾಯಿ ಸೂರಿ ಪಾತ್ರವನ್ನು ಮಾಡಿದ್ದಾರೆ! ಇದಲ್ಲದೆ ಬಾಲಿವುಡ್ ನಟನಾದ ಠಾಕೂರ್ ಅನೂಪ್ ಸಿಂಗ್ ಅವರು ಕೂಡ ಯಜಮಾನ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ! ನಾವು ಕೂಡ ಯಜಮಾನ ಚಿತ್ರಕ್ಕಾಗಿ ಕಾತುರ ದಿಂದ ಕಾಯುತ್ತಿದ್ದೇವೆ! ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top