ಲಾಕ್ ಡೌನ್ ಹಿಂದೆ ಇಂದು ನಾಡು ಸರಳವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡುತ್ತಿದೆ. ಇಂದು ನಟ ನಟಿಯರು ಸಹ ಸರಳವಾಗಿ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ. ನಟ ದರ್ಶನ್ ಅವರಿಗೆ ಸಂಕ್ರಾಂತಿ ವಿಶೇಷ ಹಬ್ಬ. ಅಪ್ರತಿಮ ಪ್ರಾಣಿ ಪ್ರೇಮಿ ಆಗಿರುವ ದರ್ಶನ್ ಪ್ರಾಣಿಗಳನ್ನ ಪೂಜಿಸುವ ಮೂಲಕ ಸರಳವಾಗಿ ಸಂಕ್ರಾಂತಿಯನ್ನ ಆಚರಣೆ ಮಾಡುತ್ತಾರೆ.
ಮೈಸೂರಿನ ಸಮೀಪ ಫಾರ್ಮ್ ಹೌಸ್ ಹೊಂದಿರುವ ದರ್ಶನ್ ಹಸು, ಎತ್ತು, ಕುದುರೆ ಸೇರಿದಂತೆ ಹಲವು ಪ್ರಾಣಿಗಳನ್ನ ಸಾಕಿದ್ದಾರೆ. ಪ್ರಾಣಿಗಳನ್ನ ಲಾಭಕ್ಕಾಗಿ ಅಲ್ಲದೆ ಅವ್ಯಾಸಕ್ಕಾಗಿ, ಪ್ರೀತಿಗಾಗಿ ದರ್ಶನ್ ಸಾಕಿದ್ದಾರೆ. ಸಂಕ್ರಾಂತಿ ಹಬ್ಬದಂದು ದರ್ಶನ್ ತಾವೇ ಸ್ವತಃ ಮುಂದೆ ನಿಂತು ಈ ಎಲ್ಲಾ ಪ್ರಾಣಿಗಳನ್ನ ಸ್ವಚ್ಛಗೊಳಿಸಿ ಪೂಜೆ ಮಾಡುತ್ತಾರೆ ದರ್ಶನ್. ಇಂದು ಹಬ್ಬದ ದಿನ ದರ್ಶನ್ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಹಬ್ಬ ಆರಂಭವಾಗಿದೆ.
ಹಸು, ಎತ್ತು, ಕುದುರೆ, ಇನ್ನಿತರ ಪ್ರಾಣಿಗಳನ್ನ ಚೆನ್ನಾಗಿ ಶುಚಿ ಗೊಳಿಸಿ ಅವುಗಳಿಗೆ ಪೂಜೆ ಮಾಡಿ ನೈವೇದ್ಯ ನೀಡಿ ಸಂಜೆ ವೇಳೆಗೆ ಕಿಚ್ಚನ ಹಾಯಿಸಲಾಗುತ್ತದೆ. ಸಾಮಾನ್ಯವಾಗಿ ಎತ್ತುಗಳನ್ನ ಕಿಚ್ಚು ಹಾಯಿಸುವ ರೂಢಿ ಇದೆ. ದರ್ಶನ್ ಫಾರ್ಮ್ ಹೌಸ್ ನಲ್ಲಿ ಎತ್ತುಗಳು ಮಾತ್ರವಲ್ಲದೆ ಕುದುರೆಗಳನ್ನು ಕಿಚ್ಚು ಹಾಯಿಸಲಾಗುತ್ತದೆ.
ಕಷ್ಟದ ದಿನಗಳು ಕಳೆದು ಹೋಗಲಿ, ಈ ಹಬ್ಬ ಅನಂತ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು pic.twitter.com/ZtErqtXvmz
— Darshan Thoogudeepa (@dasadarshan) January 15, 2022