ಈ ಭಾರಿ ಹುಟ್ಟು ಹಬ್ಬ ಅದ್ಧುರಿ ಆಗಿ ಆಚರಿಸಿ ಕೊಳ್ಳುವುದಿಲ್ಲ ಎಂದು ಹೇಳಿದ ಡಿಬಾಸ್! ಪೂರ್ತಿ ವಿಷ್ಯ ನೋಡಿ

darshan-birthday
darshan-birthday

ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಳ್ಳೆಯ ಸ್ವಮಭಾವಕ್ಕೆ ಒಂದಿ ಸಾಕ್ಷಿ ಎಂದೇ ಹೇಳಬಹುದು. ನಿಮಗೆಲ್ಲ ಗೊತ್ತಿರೋ ಹಾಗೆ ಫೆಬ್ರವರಿ 16 ಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬ. ಪ್ರತಿ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ದಿನ ಲಕ್ಷ ಗಟ್ಟಲೆ ಅಭಿಮಾನಿಗಳು ಬೇರೆ ಬೇರೆ ಊರಿನಿಂದ ಬೆಂಗಳೂರಿಗೆ ಬಂದು, ದರ್ಶನ್ ಅವರ ಮನೆಗೆ ಬಂದು ದರ್ಶನ್ ಅವರಿಗೆ ಶುಭ ಹಾರೈಸಿ ಹೋಗುತ್ತಿದ್ದರು. ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರತಿ ವರ್ಷ ಕೂಡ ತಮ್ಮ ಹುಟ್ಟು ಹಬ್ಬದ ದಿನ ದೂರದಿಂದ ಬಂದ ಎಲ್ಲಾ ಅಭಿಮಾನಿಗಳಿಗೆ ತಮ್ಮ ಮನೆಯ ಹತ್ತಿರ ಒಂದು ಬೃಹತ್ ಊಟದ ವ್ಯವಸ್ಥೆಯನ್ನು ಕೂಡ ಮಾಡುತ್ತಿದ್ದರು. ಈ ವರ್ಷ ತಮ್ಮ ಹುಟ್ಟು ಹಬ್ಬಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇರುವಾಗಲೇ ದರ್ಶನ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಅಲ್ಲಿ ಏನ್ ಇದೆ ಗೊತ್ತ? ಈ ಕೆಳಗಿನ ಡೀಟೇಲ್ಸ್ ನೋಡಿರಿ.
ಹೌದು! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಆಚರಿಸಿ ಕೊಳ್ಳುತ್ತಿದ್ದಾರೆ. ಕಾರಣ ತಮ್ಮ ತಂದೆಯಂತೆ ಇದ್ದ ಅಂಬಿ ಅವರ ನಿಧನ. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದರ್ಶನ್ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ದತ್ತು ಪುತ್ರನಂತೆ ಇದ್ದರು. ಅಂಬಿ ಅವರಿಗೆ ಕೂಡ ನಮ್ಮ ದಚ್ಚು ಅಂದರೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಅವರು ಕೂಡ ಅಂಬರೀಷ್ ಅವರ ಮಾತುಗಳಿಗೆ ಬೆಲೆ ಕೊಟ್ಟಷ್ಟು ಬೇರೆ ಯಾರ ಮಾತಿಗೂ ಅಷ್ಟೊಂದು ಬೆಲೆ ಕೊಡುತ್ತಿರಲಿಲ್ಲ. ಕಳೆದ ವರ್ಷ ಅಂಬರೀಷ್ ಅವರ ನಿಧನರಾದಾಗ ದರ್ಶನ್ ಅವರು ದೂರದ ಸ್ವೀಡನ್ ನಲ್ಲಿ ತಮ್ಮ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಇದ್ದರು. ವಿಷ್ಯ ತಿಳಿದ ಕೂಡಲೇ ದರ್ಶನ್ ಅವರು ಶೂಟಿಂಗ್ ಅನ್ನು ಕ್ಯಾನ್ಸಲ್ ಮಾಡಿ, ಸ್ವೀಡನ್ ನಿಂದ ಬೆಂಗಳೂರಿಗೆ ಬಂದು ಅಂಬರೀಷ್ ಅವರ ಕೊನೆಯ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂಬರೀಷ್ ಅವರ ಎಲ್ಲಾ ಕೊನೆಯ ಕಾರ್ಯಗಳು ನಡೆದ ಮೇಲೆ, ಅಂಬಿ ಕುಟುಂಬದ ಜೊತೆ, ಅವರ ಪುತ್ರ ಅಭಿಷೇಕ್ ಹಾಗು ಸುಮಲತಾ ಅವರ ಮನೆಗೆ ಹೋಗಿ ಅವರ ಜೊತೆ ಕೂಡ ಕಾಲ ಕಳೆದು ಸಮಾಧಾನ ಹೇಳಿದ್ದರು. ದರ್ಶನ್ ಅವರು ಈ ವರ್ಷ ಬಹಳ ಸರಳ ರೀತಿ ಯಲ್ಲಿ ನಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಇದಲ್ಲದೆ ದರ್ಶನ್ ಅವರು ಅಂಬರೀಷ್ ಅವರ ಪುತ್ರನಾದ ಅಭಿಷೇಕ್ ಅವರ ಅಮರ್ ಚಿತ್ರದಲ್ಲಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಂಬಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರಿಗೆ ನಮ್ಮ ಕಡೆ ಇಂದ ಒಂದು ಸಲಾಂ!
– ಯಜಮಾನ ಚಿತ್ರದ ಶಿವನಂದಿ ಹಾಡನ್ನು ಬಿಡುಗಡೆ ಆದ ಕೇವಲ 8 ನಿಮಿಷಕ್ಕೆ ಬರೋಬ್ಬರಿ 1 ಲಕ್ಷ ಜನ ಇದನ್ನು ನೋಡಿದ್ದಾರೆ. ಇದಲ್ಲದೆ ವಿಡಿಯೋ ಬಿಡುಗಡೆ ಆಗಿ ಕೇವಲ ಒಂದು ಘಂಟೆಯಲ್ಲಿ ಬರೋಬ್ಬರಿ 5 ಲಕ್ಷ ಜನ ಇದನ್ನು ನೋಡಿದ್ದಾರೆ. ಇದಲ್ಲದೆ ವಿಡಿಯೋ ಬಿಡುಗಡೆ ಆಗಿ ಕೇವಲ 3 ಘಂಟೆಗಳಲ್ಲಿ ಬರೋಬ್ಬರಿ 10 ಲಕ್ಷ ಜನ ಈ ಹಾಡನ್ನು ನೋಡಿದ್ದಾರೆ. ಎಷ್ಟು ನಿಮಿಷಕ್ಕೆ ಎಷ್ಟು ಜನರು ಈ ಹಾಡನ್ನು ನೋಡಿದ್ದಾರೆ ಗೊತ್ತ? ಈ ಕೆಳಗಿನ ಫೋಟೋದಲ್ಲಿ ಇದೆ ಕಂಪ್ಲೀಟ್ ಮಾಹಿತಿ. 2 – ಯಜಮಾನ ಚಿತ್ರದ ಶಿವನಂದಿ ಹಾಡಿಗೆ ಯೌಟ್ಯೂಬ್ ನಲ್ಲಿ ಬರೋಬ್ಬರಿ 1.30 ಲಕ್ಷ ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಒಂದು ವಿಡಿಯೋವನ್ನು ಲೈಕ್ ಮಾಡಿರಿವುದು. ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ ಎಂದೇ ಹೇಳಬಹುದು. 3 – ಇದಲ್ಲದೆ ಯೌಟ್ಯೂಬ್ ನಲ್ಲಿ ಈ ಹಾಡಿಗೆ ಸುಮಾರು 19 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕ ಅಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು ಹಾಗು ಕೇರಳ ದಿಂದ ಕೂಡ ನಮ್ಮ DBOSS ಅಭಿಮಾನಿಗಳು, ಹಾಡನ್ನು ನೋಡಿ ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಹಾಡಿಗೆ ಈ ಮಟ್ಟದ ಕಾಮೆಂಟ್ ಗಳು ಯೌಟ್ಯೂಬ್ ನಲ್ಲಿ ಬಂದಿದೆ. 4 – ಕೆಲವು ಬಲ್ಲ ಮೂಲಗಳ ಪ್ರಕಾರ ಇವತ್ತು ಮುಂಜಾನೆ ಯಿಂದ ಯಜಮಾನ #hashtag ಅನ್ನು ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಮಂದಿ ಟ್ವಿಟ್ಟರ್ ನಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ ಹಾಗು ಫೇಸ್ಬುಕ್ ನಲ್ಲಿ ಬಳಸಿದ್ದಾರೆ. ಒಂದು ಕನ್ನಡ ಚಿತ್ರಕ್ಕೆ ಈ ಮಟ್ಟದ #hastag ಟ್ರೆಂಡ್ ಇದೆ ಮೊದಲ ಬಾರಿಗೆ ಆಗಿದೆ ಎಂದು ತಿಳಿದು ಬಂದಿದೆ.
5 – ಸುಮಾರು ಒಂದು ವಾರ ದಿಂದ ಯಜಮಾನ ಚಿತ್ರದ ಹಾಡಿನ ಕುರಿತ ಪೋಸ್ಟ್ ಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಒಂದು ವಾರದಲ್ಲಿ ಯಜಮಾನ ಹಾಡಿನ ಬಗ್ಗೆ ಬರೋಬ್ಬರಿ 8000 ಕ್ಕೂ ಹೆಚ್ಚು ಪೋಸ್ಟ್ ಗಳನ್ನೂ ಮಾಡಲಿಗೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಹಿಂದೆ ಕನ್ನಡದ KGF ಚಿತ್ರ ಬಹಳಷ್ಟು ದಾಖಲೆಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡಿತ್ತು. ಈಗ ನಮ್ಮ ಕನ್ನಡದ ಮತ್ತೊಂದು ಚಿತ್ರ ಯಜಮಾನ ಕೂಡ ಬಹಳಷ್ಟು ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ ಹಾಗು ಹೊಸ ದಾಖಲೆಗಳನ್ನು ಕ್ರಿಯೇಟ್ ಮಾಡುತ್ತಿದೆ. ಏನೇ ಆಗಲಿ ನಮ್ಮ ಕನ್ನಡ ಚಿತ್ರ ರಂಗ ದಿನ ದಿಂದ ದಿನಕ್ಕೆ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ಹೀಗೆ ಮತ್ತಷ್ಟು ದಾಖಲೆಗಳನ್ನು ಕನ್ನಡ ಚಿತ್ರಗಳು ಮಾಡಲಿ ಎಂದು ನಾವು ಆಶಿಸುತ್ತೇವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ತಪ್ಪದೆ ನಮಗೆ ತಿಳಿಸಿರಿ.

Previous article(video)tv9 ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಕಿಚ್ಚ! IT ರೇಡ್ ಬಗ್ಗೆ ಹಾಗು ಪೈಲ್ವಾನ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ
Next article(video)ಬಿಗ್ ಬಾಸ್ ಮನೆಯಿಂದ ಬಂದೆ ಮೇಲೆ ಫಸ್ಟ್ ನ್ಯೂಸ್ ಸಂದರ್ಶನದಲ್ಲಿ ಕಣ್ಣೀರಿಟ್ಟ ಅಕ್ಷತಾ, ವಿಡಿಯೋ