ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ರವರಿಗೆ ಇಂದು (ಮೇ.19) ವಿಶೇಷವಾದ ದಿನವಾಗಿದೆ. ಸುಮಾರು ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಅವರ ಸಮ್ಮುಖದಲ್ಲೇ ದರ್ಶನ್ ಹಾಗೂ ವಿಜಯಲಕ್ಷ್ಮೀಯವರ ಮದುವೆ ನಡೆಯಿತು. ಇನ್ನೂ ಇಂದು ಈ ದಂಪಂತಿಗೆ ವಿಶೇಷ ದಿನವಾಗಿದ್ದು, ಸಂಭ್ರಮದಿಂದ ತಮ್ಮ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡಿದ್ದಾರೆ.

ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ಜೋಡಿ ಕಳೆದ 2000 ಮೇ.19 ರಂದು ಮದುವೆಯಾಗಿದ್ದರು. ಇಂದಿಗೆ ಅವರ ಮದುವೆ ಸಂಭ್ರಮಕ್ಕೆ 22 ವರ್ಷಗಳು ಪೂರ್ಣಗೊಂಡಿದೆ. ಈ ಜೋಡಿ ಸುಮಾರು ವರ್ಷಗಳ ಕಾಲ ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದರು. ಮನೆಯವರ ಹಾಗೂ ಬಂಧು ಬಳಗದ ಸಮ್ಮುಖದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥನ ಸನ್ನಿದಿಯಲ್ಲಿ ಇವರ ಮದುವೆ ಸಮಾರಂಭ ನಡೆದಿತ್ತು. ಈ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಸಿನೆಮಾ ತಾರೆಯರು ಸೇರಿದಂತೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಸ್ನೇಹಿತ ಬಳಗ ಭಾಗಿಯಾಗಿತ್ತು.

ಇನ್ನೂ ದರ್ಶನ್ ಹಾಗೂ ವಿಜಯಲಕ್ಷ್ಮೀಯವರ ಪ್ರೀತಿಗೆ ಕುರುಹಾಗಿ ವಿನೀಶ್ ಎಂಬ ಮಗ ಸಹ ಜನಿಸಿ‌ದ್ದಾನೆ. ವಿನೀಶ್ ಸಹ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾನೆ. ದರ್ಶನ್ ಅಭಿನಯದ ಐರಾವತಾ ಸಿನೆಮಾದಲ್ಲೂ ವಿನೀಶ್ ಕಾಣಿಸಿಕೊಂಡಿದ್ದಾರೆ. ಇನ್ನೂ ವಿನೀಶ್ ಹಾಗೂ ವಿಜಯಲಕ್ಷ್ಮೀ ರವರ ಪೊಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿನೀಶ್ ನ ಹೊಸ ಲುಕ್ ಎಲ್ಲರನ್ನೂ ಚಕಿತಗೊಳಿಸಿದೆ. ಇನ್ನೂ ಈ ಪೊಟೋಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲೇ ಕಾಮೆಂಟ್ ಗಳು ಹರಿದು ಬರುತ್ತಿವೆ. ವಿನೀಶ್ ಮುಂದಿನ ಚಾಲೆಂಜಿಂಗ್ ಸ್ಟಾರ್‍ ಕಿಡ್ ಹಿರೋ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ದರ್ಶನ್ ಹಾಗೂ ವಿಜಯಲಕ್ಷ್ಮೀ ಮದುವೆ ವಾರ್ಷಿಕೋತ್ಸವ ಯಾವ ರೀತಿ ಆಚರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈಗಾಗಲೇ ಸಿನೆಮಾ ಸೆಲೆಬ್ರೆಟಿಗಳು, ದರ್ಶನ್ ವಿಜಯಲಕ್ಷ್ಮೀ ಸ್ನೇಹಿತರು ಹಾಗೂ ಅಭಿಮಾನಿಗಳು ಸೋಷಿಯಲ್ ಮಿಡಿಯಾಗಳ ಮೂಲಕ ದರ್ಶನ್ ದಂಪಂತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಅಷ್ಟೇಅಲ್ಲದೇ ದರ್ಶನ್ ಹಾಗೂ ವಿಜಯಲಕ್ಷ್ಮೀ ರವರುಗಳ ಪೊಟೋಗಳನ್ನು ಸಹ ಹಂಚಿಕೊಂಡು ಶುಭ ಕೋರುತ್ತಿದ್ದಾರೆ. ಈ ಪೈಕಿ ದರ್ಶನ್ ರವರ ಮದುವೆ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Previous articleಅದ್ದೂರಿಯಾಗಿ ನಡೆದ ಕ್ಯೂಟ್ ಜೋಡಿ ಮದುವೆ.. ನಿಕ್ಕಿ ಗಲ್ರಾನಿ ಆದಿ ಪಿನಿಶೆಟ್ಟಿ ಅದ್ದೂರಿ ಮದುವೆ..
Next articleಅನುಷ್ಕಾ ಶರ್ಮಾರವರ ಆ ನಿರ್ಣಯದಿಂದ ಶಾಕ್ ಆದ ಅಭಿಮಾನಿಗಳು……