Cinema

ನಮ್ಮ ಡಿಬಾಸ್ ದರ್ಶನ್ ಅವರು ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟು 23 ವರ್ಷ! ಫ್ಯಾನ್ಸ್ ಮಾಡಿರುವ ಈ ಅದ್ಭುತ ವಿಡಿಯೋ ನೋಡಿ

ಇಂದಿನ ಪೀಳಿಗೆಯ ಕನ್ನಡ ನಟರಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಾತ ಚಾಲೆಂಜಿಂಗ್ ಸ್ಟಾರ್ ದರ್ಶನ್. ಪ್ರಪಂಜಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ದರ್ಶನ್. ದರ್ಶನ್ ಅವರ ನಟನೆಗೆ ಮಾತ್ರವಲ್ಲದೆ, ಅವರ ಸರಳತೆಗೆ ಮಾರುಹೋಗುವ ಅಭಿಮಾನಿಗಳು ಹೆಚ್ಚು. ಅಣ್ಣ ಎಂದು ತಮ್ಮ ಕಷ್ಟ ಹೇಳಿಕೊಂಡು ಮನೆ ಹತ್ತಿರ ಹೋಗುವ ಜನರನ್ನು ಇಂದಿಗೂ ಬರಿಕೈಯಲ್ಲಿ ಕಳಿಸಿಲ್ಲ ನಟ ದರ್ಶನ್. ಜನರ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಸೂಚಿಸಿ ಕಲಿಸಿರುತ್ತಾರೆ. ಇನ್ನು ಅವರ ಸ್ನೇಹದ ವಿಚಾರವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರದ್ದು. ಈ ಗುಣದಿಂದಲೇ ಎಲ್ಲರ ಮನಸಲ್ಲಿ ಮನೆಮಾಡಿದ ನಟ ದರ್ಶನ್. ಸ್ಕ್ರಾಲ್ ಡೌನ್ ಮಾಡಿ, ಅಭಿಮಾನಿಗಳ ವಿಡಿಯೋ ನೋಡಿ
ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು, ಇದೇ ಆಗಸ್ಟ್ 11ಕ್ಕೆ 23 ವರ್ಷ ತುಂಬಲಿದೆ. ನಮಗೆಲ್ಲ ತಿಳಿದಿರುವ ಹಾಗೆ ಮೊದಲಿಗೆ ದರ್ಶನ್ ಅವರು ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ ಯಶಸ್ವಿ ನಿರ್ದೇಶಕ ಎಸ್.ನಾರಾಯಣ್ ಅವರು ನಿರ್ದೇಶಿಸಿದ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದರು. ಧಾರಾವಾಹಿಯ ನಂತರ, ಮೊದಲ ಬಾರಿಗೆ “ಮಹಾಭಾರತ” ಎಂಬ ಸಿನಿಮಾದಲ್ಲಿ ನಟಿಸಿದರು. ಮಹಾಭಾರತ ಸಿನಿಮಾದಲ್ಲಿ ಚರಣ್ ರಾಜ್ ಮತ್ತು ವಿನೋದ್ ರಾಜ್ ನಾಯಕ ನಟರು. ಈ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು ದರ್ಶನ್. ಈ ಸಿನಿಮಾವನ್ನು ಸಹ ಎಸ್.ನಾರಾಯಣ್ ಅವರೇ ನಿರ್ದೇಶನ ಮಾಡಿದ್ದರು. ಈ ಕೆಳಗಿನ ವಿಡಿಯೋ ನೋಡಿ
ಈ ಮಹಾಭಾರತ ಸಿನಿಮಾ ಆಗಸ್ಟ್ 11, 1997ರಲ್ಲಿ ತೆರೆಕಂಡಿತ್ತು. ಅಂದರೆ ಇಂದಿಗೆ 23 ವರ್ಷಗಳು ಕಳೆದಿವೆ. ಅಂದು, ಸಣ್ಣ ಪಾತ್ರದಲ್ಲಿ ನಟಿಸಿದ್ದ ದರ್ಶನ್ ಅವರು ಇಂದು ಬೆಳೆದಿರುವ ಪರಿ ವರ್ಣನೆಗೆ ನಿಲುಕದ್ದು. 23 ವರ್ಷಗಳಲ್ಲಿ ಕನ್ನಡದ ಟಾಪ್ ನಟನಾಗಿ ಮೆರೆದಿದ್ದಾರೆ ದರ್ಶನ್. ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷ ತುಂಬಿರುವ ಈ ಸಂಭ್ರಮವನ್ನು ಅಭಿಮಾನಿಗಳು ಆಚರಿಸಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಸಹ ಕಾಮನ್ ಡಿಪಿ ಯನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಈಗಾಗಲೇ, ದರ್ಶನ್ ಅವರ ಸಿನಿಜರ್ನಿಯ ಕುರಿತು ಒಂದು ಹಾಡನ್ನು ಸಹ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಲೈಟ್ ಬಾಯ್ ಆಗಿ ಕೆಲಸ ಆರಂಭಿಸಿದ ದರ್ಶನ್ ನಂತರ ಹಂತ ಹಂತವಾಗಿ ಬೆಳೆದು ಬಂದ ಹಾಡಿಯನ್ನು ತೋರಿಸಲಾಗಿದೆ.

Trending

To Top