ಕಾಲಿವುಡ್ ಸ್ಟಾರ್ ಧನುಷ್ ಅಭಿನಯದ ಹಾಲಿವುಡ್ ಸಿನೆಮಾ ಪೋಸ್ಟರ್ ಸಖತ್ ವೈರಲ್.…

ತಮಿಳು ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಯುವ ನಟ ಧನುಷ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ಕೇವಲ ತಮಿಳಿಗೆ ಮಾತ್ರ ಸೀಮಿತವಾಗದೇ ಹಿಂದಿಯಲ್ಲೂ ಸಹ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಇದೀಗ ‘ದಿ ಗ್ರೇ ಮ್ಯಾನ್’ ಎಂಬ ಸಿನೆಮಾ ಮೂಲಕ ಹಾಲಿವುಡ್ ಗೂ ಕಾಲಿಟ್ಟಿದ್ದಾರೆ.

https://twitter.com/NetflixIndia/status/1518954162284761088

ವಿಶ್ವದಲ್ಲಿ ಖ್ಯಾತಿ ಪಡೆದ ಒಟಿಟಿ ದಿಗ್ಗಜ ಸಂಸ್ಥೆ ನೆಟ್ ಫ್ಲಿಕ್ಸ್ ನ ಮೂಲ ಚಿತ್ರವೇ ‘ದಿ ಗ್ರೇ ಮ್ಯಾನ್’. ಈ ಸಿನೆಮಾದಲ್ಲಿ ನಟ ಧನುಷ್ ಬಣ್ಣ ಹಚ್ಚಿದ್ದಾರೆ. ಇದೀಗ ಧನುಷ್ ಪಾತ್ರ ಹೇಗಿರಲಿದೆ ಎಂಬುದನ್ನು ನೆಟ್ ಫ್ಲಿಕ್ಸ್ ರಿವೀಲ್ ಮಾಡಿದೆ. ಧನುಷ್ ಪಾತ್ರ ಸೇರಿದಂತೆ ಕೆಲವೊಂದು ಪ್ರಮುಖ ಪಾತ್ರಗಳನ್ನು ಸಹ ರಿವೀಲ್ ಮಾಡಿದೆ. ನಟ ಧನುಷ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಜು.22  ರಂದು ಸಿನೆಮಾ ನೆಟ್‌ ಫ್ಲಿಕ್ಸ್ ನಲ್ಲಿ ಪ್ರದರ್ಶನವಾಗಲಿದೆ.

ಇನ್ನೂ ‘ದಿ ಗ್ರೇ ಮ್ಯಾನ್’ ಮಾರ್ಕ್ ಗ್ರೇನಿ ಎಂಬುವವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಆಂಥೋನಿ ಹಾಗೂ ಕೋ ರಸ್ಸೋ ಈ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ದೊಡ್ಡ ತಾರಾಬಳಗವೇ ಬಣ್ಣಹಚ್ಚಿದೆ. ಕ್ರಿಸ್ ಇವಾನ್ಸ್, ಅನಾ ಡಿ ಅರ್ಮಾಸ್, ರಯಾನ್ ಗೊಸ್ಲಿಂಗ್, ರೆಗೆ ಜೀನ್ ಪೇಜ್, ಜೆಸ್ಸಿಕಾ ಹೆನ್‌ ವಿಕ್, ಬಿಲ್ಲಿ ಬಾಬ್ ಥಾರ್ನ್‌ಟನ್, ವ್ಯಾಗ್ನರ್‍ ಮೌರಾ ಮೊದಲಾದ ಸ್ಟಾರ್‍ ಗಳು ಕಾಣಿಸಿಕೊಳ್ಳಲಿದ್ದಾರೆ.

Previous article167 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಹಾಲಿವುಡ್ ನ ಸಿನೆಮಾ ಅವತಾರ್-2!
Next articleಶಿವಣ್ಣ ಘೋಸ್ಟ್ ಮೂವಿ ಪೋಸ್ಟರ್ ಸಖತ್ ಟ್ರೆಂಡಿಂಗ್…