ಬೆಂಗಳೂರು: 2020 ನೇ ಸಾಲಿನ ’ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್’ ಪಟ್ಟಿ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಚಲನ ಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸುವ ನಿಟ್ಟಿನಲ್ಲಿ ನೀಡಲಾಗುವ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಹೊಸ ವರ್ಷದ ಪ್ರಾರಂಭದಲ್ಲೇ ಪ್ರಕಟವಾಗಿದೆ. ಇನ್ನೂ ದಕ್ಷಿಣ ಭಾರತದ ಖ್ಯಾಥ ನಟರಾದ ಶಿವರಾಜ್ ಕುಮಾರ್, ಅಕ್ಕಿನೇನಿ ನಾಗಾರ್ಜುನ, ಅಜಿತ್ ಕುಮಾರ್, ಮೋಹನ್ ಲಾಲ್ ರವರಿಗೆ ಬಹುಮುಖ ಸಾಮರ್ಥ್ಯವುಳ್ಳ ನಟ ಪ್ರಶಸ್ತಿ ದೊರೆತಿದೆ.
ಇನ್ನೂ ಸ್ಯಾಂಡಲ್ ವುಡ್ ನ ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿ ಪಾಲಾಗಿದ್ದು, ಅವನೇ ಶ್ರೀಮ್ನನಾರಾಯಣ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ದೊರೆತಿದೆ. ಯಜಮಾನ ಚಿತ್ರದ ನಾಯಕಿಯಾಗಿ ನಟಿಸಿದ್ದ ತಾನ್ಯಾ ಹೋಪ್ ರವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನು ಮೂಕಜ್ಜಿಯ ಕನಸುಗಳು ಸಿನೆಮಾ ಪಡೆದುಕೊಂಡಿದ್ದು, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಪಡೆದುಕೊಂಡಿದ್ದಾರೆ. ವಿ.ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನೂ ಕಾಲಿವುಡ್ ನ ಅತ್ಯುತ್ತಮ ಬಹುಮುಖ ನಟ ಪ್ರಶಸ್ತಿಗೆ ಅಜಿತ್ ಕುಮಾರ್, ಅತ್ಯುತ್ತಮ ನಟ ಧನುಷ್, ಖ್ಯಾತ ನಟಿ ಜ್ಯೋತಿಕಾ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟಾಲಿವುಡ್ ನ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ನವೀನ್ ಪಾಲಿಶೇಟ್ಟಿ ರವರಿಗೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಶ್ಮಿಕಾ ಮಂದಣ್ಣ ರವರಿಗೆ ಬಂದಿದ್ದು, ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನು ಜೆರ್ಸಿ ಪಡೆದುಕೊಂಡಿದೆ. ಮಾಲಿವುಡ್ ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸೂರಜ್ ವೆಂಜರಮೂಡು, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಾರ್ವತಿ ತಿರುವೊತ್ತು ಪಡೆದುಕೊಂಡಿದ್ದಾರೆ. ಇನ್ನೂ ಪ್ರಶಸ್ತಿ ಪ್ರಧಾನ ಸಮಾರಂಭ ಎಂದು ನಡೆಯಲಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.
