News

ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ! ಹೆಮ್ಮೆಯಿಂದ ಶೇರ್ ಮಾಡಿರಿ

vishnu1

ಕರುನಾಡ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸ್ವಂತ ಜಾಗವನ್ನೆ ನೀಡಲು ಅಭಿಮಾನಿಯೊಬ್ಬರು ಮುಂದೆ ಬಂದಿದ್ದಾರೆ.
ಮೂಲತಃ ಮಂಡ್ಯದವರಾದ ಕೆ.ಸಿ.ಪಿ ರಾಜಣ್ಣ ಸ್ಮಾರಕ ಕಟ್ಟಿಸಲು ಜಾಗ ನೀಡಲು ಮುಂದೆ ಬಂದ ಅಭಿಮಾನಿ, ಮೈಸೂರಿನ ಕೆ.ಆರ್.ಎಸ್. ಜಲಾಶಯ ಬಳಿ ತಮ್ಮ ಹೆಸರಿನಲ್ಲಿ ಇರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ. ಕಳೆದ 3 ತಿಂಗಳ ಹಿಂದೆ 100*80 ನಿವೇಶನವನ್ನು ರಾಜಣ್ಣ ಅವರು ಖರೀದಿ ಮಾಡಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ವಿಷ್ಣು ಅವರ ಪಕ್ಕ ಅಭಿಮಾನಿ. ಇದೆ ಕಾರಣದಿಂದ ಅವರು ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ.
ಅವರ ವಿಶಾಲ ಹೃದಯ ವನ್ನೂ ಮೆಚ್ಚಲೇಬೇಕು ಅಲ್ಲವೇ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಾಜಣ್ಣ ಅವರು, ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿ ಮಾಡಿದೆ. ಅದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ. ನಾನು ಅಶ್ರಮ ಮಾಡಬೇಕು ಎಂದಿದ್ದೆ. ಆದರೆ ಮನೆಯವರು ಮತ್ತು ನಾನು ಕೂತ ಯೋಚಿಸಿ ಕೊನೆಗೆ ಈ ನಿರ್ಧಾರಕ್ಕೆ ಬಂದೆವು ಮತ್ತು ವಿಷ್ಣು ಸ್ಮಾರಕಕ್ಕೆ ಜಾಗ ಕೊಡಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಅಷ್ಟು ವರ್ಷಗಳು ಕನ್ನಡ ಸಿನೆಮಾ ರಂಗದಲ್ಲಿ ಅಭಿಮಾನಿಗಳಿಗೆ ಮನರಂಜಿಸಿದ ಅವರ ಸ್ಮಾರಕ ವಿಚಾರಕ್ಕೆ ಈ ರೀತಿ ಹೋರಾಟ ಬೇಡ. ಇದರಿಂದ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ. ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರು ವಿಧಿ ವಶರಾಗಿ ಸುಮಾರು 9 ವರ್ಷಗಳು ಕಳೆದಿವೆ. ಈ 9 ವರ್ಷಗಳಲ್ಲಿ ಅದೆಷ್ಟೋ ಸರ್ಕಾರಗಳು ಬಂದಿವೆ! ವಿಷ್ಣು ಅವರ ಕುಟುಂಬದವರು ಎಲ್ಲಾ ಮುಖ್ಯಮಂತ್ರಿಗಳ ಹತ್ತಿರ ರಿಕ್ವೆಸ್ಟ್ ಮಾಡಿದ್ದರೂ ಯಾರು ಕೂಡ ಸರಿಯಾಗಿ ವಿಷ್ಣು ಸ್ಮಾರಕದ ಬಗ್ಗೆ ಮಾತಾಡಿಲ್ಲ ಹಾಗು ಎಲ್ಲರೂ ಬರಿ ಸುಳ್ಳು ಸುಳ್ಳು ಆಶ್ವಾಸನೆ ಕೊಡುತ್ತಿದ್ದರು. ವಿಷ್ಣು ಕುಟುಂಬದವರು ಹೇಳುವ ಪ್ರಕಾರ ಈಗ ಕೆಲವರು ಟಿವಿ ಅಲ್ಲಿ ಕೂತುಕೊಂಡು ವಿಷ್ಣು ಬಗ್ಗೆ ವಿಷ್ಣು ಸ್ಮಾರಕದ ಬಗ್ಗೆ ಘಂಟೆ ಗಟ್ಟಲೆ ಮಾತಾಡುತ್ತಾರೆ ಅದರ ನಮ್ಮ ಕುಟುಂಬದ ಜೊತೆ ಯಾರು ಕೂಡ ಇದುವರೆಗೂ ಮಾತಾಡಿಲ್ಲ. ವಿಷ್ಣು ಅವರ ಮಗಳು ಹೇಳುವ ಪ್ರಕಾರ “ನಮ್ಮನ್ನು ಯಾರು ಕೇರ್ ಮಾಡಲ್ಲ.. ಎಲ್ಲೆಡೆ ನಮ್ಮನ್ನು ಅವಮಾನ ಮಾಡುತ್ತಾರೆ..ಯಾರು ನಮಗೆ ಸಪೋರ್ಟ್ ಮಾಡುತ್ತಿಲ್ಲ” ಎಂದು ತಮ್ಮ ದುಕ್ಕವನ್ನು ಹೇಳಿದ್ದಾರೆ.

ಇನ್ನೊಂದೆಡೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ನೆನ್ನೆ ಕುಮಾಸ್ವಾಮಿ ಅವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅನಿರುಧ್ ಏನ್ ಹೇಳಿದ್ರು ಅಂದ್ರೆ “ಸಾಹಸ ಸಿಂಹ ವಿಷ್ಣುವರ್ಧನ್ ಅವರು ಸಿಂಹ ಇದ್ದ ಹಾಗೆ, ಅವರ ಅಭಿಮಾನಿಗಳು ಕೂಡ ಸಿಂಹ ಗಳು, ಇಷ್ಟು ವರ್ಷದ ತಾಳ್ಮೆ ಈಗ ಮುಗಿದಿದೆ, ಸಾಹಸ ಸಿಂಹ ಅಭಿಮಾನಿಗಳು ತಿರುಗಿ ಬಿದ್ರೆ ಏನ್ ಆಗುತ್ತೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಆದಷ್ಟು ಬೇಗ ವಿಷ್ಣು ಸ್ಮಾರಕದ ಕಡೆ ಸ್ವಲ್ಪ ಗಮನ ಕೊಟ್ಟು ಆದಷ್ಟು ಬೇಗ ವಿಷ್ಣುವರ್ಧನ್ ಅವರಿಗೆ ಒಂದು ಗೌರವ ಸಲ್ಲಿಸಲಿ ಎಂಬುದು ನಮ್ಮ ಆಸೆ.

Click to comment

You must be logged in to post a comment Login

Leave a Reply

Trending

To Top