ಸೌತ್ ಸಿನಿರಂಗದಲ್ಲಿ ಸ್ಟಾರ್ ನಟಿಯಾಗಿ ಕ್ರೇಜ್ ಪಡೆದುಕೊಂಡು ಅನೇಕ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇರುವ ನಟಿಯರಲ್ಲಿ ಅನುಪಮಾ ಪರಮೇಶ್ವರನ್ ಸಹ ಒಬ್ಬರಾಗಿದ್ದಾರೆ. ಕ್ಯೂಟಿ ಬ್ಯೂಟಿ ಪ್ರೇಮಂ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ಸ್ಟಾರ್ ನಟಿಯಾದರು. ಇದೀಗ ಅನುಪಮಾ ರವರ ತೆಗೆದುಕೊಂಡಿದ್ದಾರೆ ಎಂಬ ನಿರ್ಣಯದಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟಿಯಾಗಿ ದೂರವಾಗಿ ಮತ್ತೊಂದು ಕೆಲಸದತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರೇಮಂ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಅನುಪಮಾ ಕಡಿಮೆ ಸಮಯದಲ್ಲೇ ಸೌತ್ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸೇರಿಕೊಂಡರು. ಅ ಆ ಸಿನೆಮಾದ ಮೂಲಕ ತೆಲುಗು ಸಿನಿರಂಗದಲ್ಲಿ ಅಭಿಮಾನಿಗಳನ್ನು ಪಡೆದುಕೊಂಡರು. ಅಲ್ಲಿಂದ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಆದರೆ ಇತ್ತೀಚಿಗೆ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ತಂದುಕೊಡುವ ಸಿನೆಮಾಗಳು ಸಿಗಲಿಲ್ಲ. ಕೆರಿಯರ್ ಡಲ್ ಆಗಿ ಸಾಗುತ್ತಿರುವ ಸಮಯದಲ್ಲಿ ಆಕೆಗೆ ಬೂಸ್ಟ್ ನೀಡಿದ್ದು ಮಾತ್ರ ಕಾರ್ತಿಕೇಯ 2 ಸಿನೆಮಾ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆ ಮೊದಲಿನ ಕ್ರೇಜ್ ಪಡೆದುಕೊಂಡರು. ಇದೀಗ ಆಕೆ ನಟಿಯಾಗಿ ಸಿನೆಮಾಗಳಿಂದ ದೂರವಾಗಲಿದ್ದಾರಂತೆ. ಈ ಸುದ್ದಿ ಹೊರಬರುತ್ತಿದ್ದ ಕೂಡಲೇ ಅನುಪಮಾ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕಾರ್ತಿಕೇಯ 2 ಸಿನೆಮಾದ ಮೂಲಕ ಇಡೀ ದೇಶದಾದ್ಯಂತ ಕ್ರೇಜ್ ಪಡೆದುಕೊಂಡ ನಟಿ ಅನುಪಮಾ, ಇದೀಗ 18 ಪೇಜಸ್ ಸಿನೆಮಾದಲ್ಲಿ ನಿಖಿಲ್ ಜೊತೆಗೆ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. 18 ಪೇಜಸ್ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಸಹ ಭರದಿಂದ ಸಾಗುತ್ತಿದ್ದು, ಈ ಪ್ರಮೋಷನ್ ನಿಮಿತ್ತ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಈ ಹೇಳಿಕೆಗಳು ಅಭಿಮಾನಿಗಳನ್ನು ಶಾಕ್ ಆಗುವಂತೆ ಮಾಡಿದ್ದಾರೆ. ಶೀಘ್ರದಲ್ಲೇ ನಾನು ನಿರ್ದೇಶಕಿಯಾಗಿ ಸಿನೆಮಾ ಒಂದನ್ನು ಮಾಡಲಿದ್ದೇನೆ. ನಿರ್ದೇಶನಕ್ಕೆ ಬೇಕಾದ ತಾಂತ್ರಿಕ ಕೌಶಲ್ಯಗಳನ್ನು ಸಹ ತರಬೇತಿ ಮೂಲಕ ಪಡೆದುಕೊಳ್ಳುತ್ತಿದ್ದೇನೆ. ಒಂದು ವರ್ಷ ನಟನೆಗೆ ಗ್ಯಾಫ್ ಕೊಟ್ಟು ನನ್ನ ಆಲೋಚನೆಯನ್ನು ನಿರ್ದೇಶಕಳಾಗಿ ತೋರಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.
ನಟಿ ಅನುಪಮಾಗೆ ನಿರ್ದೇಶನದ ಮೇಲೆ ತುಂಬಾ ಆಸಕ್ತಿಯಿದೆ ಎನ್ನಲಾಗಿದೆ. ಆದ್ದರಿಂದಲೇ ಆಕೆ ಸಿನೆಮಾಗಳಲ್ಲಿ ನಟಿಸುವ ಬದಲಿಗೆ ನಿರ್ದೇಶನಕ್ಕೆ ಮುಂದಾಗಲಿದ್ದಾರಂತೆ. ಈಗಾಗಲೇ ಮುನಿಯರಯಲಿಯಾ ಅಶೋಕನ್ ಎಂಬ ಮಲಯಾಳಂ ಸಿನೆಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ಆಕೆ ಸಿನೆಮಾ ಒಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆಕೆಗೆ ಮಲಯಾಳಂ ನಟ ದುಲ್ಕಾರ್ ಸಲ್ಮಾನ್ ಸಹ ಸಪೋರ್ಟ್ ಮಾಡುತ್ತಿದ್ದಾರಂತೆ.