ಡ್ರಾಮಾ ಜೂನಿಯರ್ಸ್ ಶೋ ನಲ್ಲಿ ಕ್ರೇಜಿಸ್ಟಾರ್ ರಚಿತಾ ರಾಮ್ ಡ್ಯುಯೆಟ್: ಫಿಧಾ ಆದ ಫ್ಯಾನ್ಸ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ನಲ್ಲಿ ಕ್ರೇಜಿಸ್ಟಾರ್‍ ಡಾ.ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಂ ರವರ ಭರ್ಜರಿ ಡ್ಯಾನ್ಸ್ ಕ್ರೇಜಿಸ್ಟಾರ್‍ ಅಭಿಮಾನಿಗಳನ್ನು ಫಿಧಾ ಮಾಡಿದೆ. ಲೋಕವೇ ಹೇಳಿದ ಮಾತಿದು ಹಾಡಿಗೆ ಈ ಇಬ್ಬರೂ ಮಾಡಿದ ನೃತ್ಯ ಎಲ್ಲರನ್ನೂ ರಂಜಿಸಿದೆ.

ನಟ ರವಿಚಂದ್ರನ್ ರವರ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇಂದಿಗೂ ಸಹ 90ರ ದಶಕದ ಹಾಡುಗಳು ಎಲ್ಲರನ್ನೂ ಮೆಚ್ಚಿಸುತ್ತಿವೆ. ಎಂದಿಗೂ ಈ ಹಾಡುಗಳು ಎವರ್‍ ಗ್ರೀನ್ ಎಂದು ಹೇಳಲಾಗುತ್ತಿದೆ. ಇದೀಗ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ನಲ್ಲೂ ಸಹ ಎವರ್‍ ಗ್ರೀನ್ ಎಂಬುವಂತೆ ಕಂಗೊಳಿಸಲಿವೆ. ಇನ್ನೂ ಈ ಸಂಬಂಧ ಸ್ಯಾಂಪಲ್ ಕ್ಲಿಪ್ ಒಂದನ್ನು ಬಿಟ್ಟ ಜೀ ಕನ್ನಡ ವಾಹಿನಿ ಎಲ್ಲರನ್ನೂ ರಂಜಿಸುವಂತೆ ಮಾಡಿದೆ.

ಕ್ರೇಜಿಸ್ಟಾರ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಅವರ ಹಾಡುಗಳೇ ಉತ್ತಮ ಉದಾಹರಣೆಯಾಗಿದೆ. ಇಂದಿಗೂ ಸಹ ಆ ಹಾಡುಗಳನ್ನು ಕೇಳಿದರೇ ಮನಸ್ಸು ಮುದವಾಗಿರುತ್ತದೆ. ಜೊತೆಗೆ ಲವ್ ಸಾಂಗ್ಸ್ ಅಂತೂ ಪ್ರೇಮಿಗಳ ಮನದಲ್ಲಿ ಮಿಡಿಯುತ್ತಲೇ ಇರುತ್ತದೆ.  ಇನ್ನೂ ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಈ ವಾರದ ಸೀಸನ್ ನಲ್ಲಿ ರವಿಮಾಮ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಂ ಲೋಕವೇ ಹೇಳಿದ ಮಾತಿದು ಎಂಬ ಹಾಡಿದಗೆ ಭರ್ಜರಿಯಾಗಿ ಕುಣಿದಿದ್ದು ಎಲ್ಲರನ್ನು ಮನಸೋರೆಗೊಳಿಸುವಂತೆ ಮಾಡಿದೆ. ಇನ್ನೂ ಈ ವಿಡಿಯೋ ತುಣುಕು ಬಿಡುವುದಕ್ಕೂ ಮುನ್ನಾ ಪೊಟೋ ಒಂದನ್ನು ಹರಿಬಿಟ್ಟು, ಇದು ಯಾವ ಹಾಡು ಎಂದು ಹೇಳಿ ಎಂಬ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಲಾಗಿತ್ತು.

ಇಡೀ ವಾರಪೂರ್ತಿ ಜೀ ಕನ್ನಡದಲ್ಲಿ ಮನರಂಜನೆ ಜೇನು ಗೂಡಿನಂತೆ ಸಿಹಿಯಾಗಿ ಇರುತ್ತದೆ. ರಿಯಾಲಿಟಿ ಶೋಗಳು ಎಲ್ಲರನ್ನು ರಂಜಿಸುತ್ತಿವೆ. ವೀಕೆಂಡ್ ನಲ್ಲಿ ಬರುವಂತಹ ಶೋ ಗಳಂತೂ ಒಂದನ್ನು ಮೀರಿ ಮತ್ತೊಂದು ಎಂಬಂತೆ ಇವೆ. ಈಗಾಗಲೇ ಎಲ್ಲರ ಮನವನ್ನು ಡ್ರಾಮಾ ಜೂನಿಯರ್ಸ್ ಸೀಸನ್ 4 ಸೆಳೆಯುತ್ತಿದೆ. ಇನ್ನೂ ಕಾರ್ಮಿಕ ದಿನಾಚರಣೆ ಅಂಗವಾಗಿ ಪುಟಾಣಿಗಳು ನಾಟಕವೊಂದನ್ನು ಮಾಡಿದ್ದು, ಪೌರಕಾರ್ಮಿಕರು ಈ ನಾಟಕವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

Previous articleನಟಿ ಕರಿಷ್ಮಾಗೆ ನೆಟ್ಟಿಗನ ಪ್ರಶ್ನೆ, ನಟಿ ಕೊಟ್ಟ ಉತ್ತರ ಏನು ಗೊತ್ತಾ?
Next article15 ನೇ ವಯಸ್ಸಿನಲ್ಲಾದ ಕರಾಳ ಅನುಭವ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್ !