News

ಕೋವಿಡ್ ಕೇರ್ ಸೆಂಟರ್ ನಲ್ಲಿ ಉತ್ಸಾಹದಿಂದಿದ್ದ ಹುಡುಗಿ ಮೃತರಾಗಿದ್ದಾರೆ

ಕೊರೋನ ಬಂದಾದ ಮೇಲೆ ಸಾವಿನ ಸುದ್ದಿ ಜಾಸ್ತಿಯಾಗಿದೆ.ನ್ಯೂಸ್ ಚನ್ನೆಲ್ ನೋಡಿದರೆ ಭಯ ಆಗುತ್ತೆ ಅಂತ ಸಾಕಷ್ಟು ಜನ ನ್ಯೂಸ್ ನೋಡೋದನ್ನೇ ಬಿಟ್ಟಿದ್ದಾರೆ.ಈಗಿರುವಾಗ ನಮ್ಮನ ನಾವು ಖುಷಿಯಾಗಿ ಇಟ್ಟಿಕೊಳ್ಳುವುದು, ಪಾಸಿಟಿವ್ ಆಟಿಟ್ಯೂಡ್ ಇಟ್ಟುಕೊಳ್ಳುವುದು ತುಂಬಾನೇ ಇಂಪೋರ್ಟನ್ಟ್ ಆಗುತ್ತೆ.ಇಂಥದ್ದೇ ಮನೋಭಾವ ಇರುವಂತಹ ಹುಡುಗಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೋನಿಕ ಲಾಂಗೆ ಅನ್ನೋ ಅಂತ ಒಬ್ಬ ಡಾಕ್ಟರ್ ಈ ವಿಡಿಯೋ ಅನ್ನ ತಮ್ಮ ಟ್ವಿಟರ್ ನಲ್ಲಿ ಮೊದಲ ಬಾರಿಗೆ ಅಂಚಿಕೊಂಡಿದ್ದಾರೆ.ಈ ವಿಡಿಯೋದಲ್ಲಿ ಇರುವಂತಹ ಹುಡುಗಿಗೆ 30 ವರ್ಷ ವಯಸಂತೆ ಕೋವಿಡ್ ಪಾಸಿಟಿವ್ ಬಂದಾದ ಮೇಲೆ ಉಸಿರಾಟದಲ್ಲಿ ಏರುಪೇರಾಗಿದೆ, ಆಗ ಆಕೆಗೆ ತಕ್ಷಣಕ್ಕೆ ಐಸಿಯೂ ಬೆಡ್ ಸಿಕ್ಕಿಲ್ಲ.

ಹಾಗಾಗಿ ಆಕೆಯನ್ನ ಕೋವಿಡ್ ಎಮರ್ಜೆನ್ಸಿಯಲ್ಲಿ 10 ದಿನಗಳ ಕಾಲ ಇಟ್ಟಿದ್ದಾರಂತೆ, ಅಲ್ಲೇ ಒಂದು ವೆಂಟಿಲೇಟರ್ ಸಪ್ಪೋರ್ಟ್ ಅನ್ನ ಕೊಟ್ಟು ಸಾಕಷ್ಟು ಕೋವಿಡ್ ರೋಗಿಗಳ ಮದ್ಯೆ ಒಟ್ಟಿಗೆ ಬಿಟ್ಟಿರುತ್ತಾರೆ.ಇಂತಹ ಜಾಗದಲ್ಲೂ ಕೂಡ ಒಂದು ಉತ್ಸವ ಭಾವುಕ ಮನೋಭಾವ ಇಟ್ಟುಕೊಳ್ಳುವುದಕ್ಕೆ ಈ ಹುಡುಗಿ ಪ್ರಯತ್ನ ಮಾಡಿದ್ದಾರೆ.

ಈಕೆ ಬಗ್ಗೆ ಬರೆದುಕೊಂಡಿರುವ ಡಾಕ್ಟರ್ ಈಕೆ ತುಂಬಾ ಸ್ಟ್ರಾನ್ಗ್ ಗರ್ಲ್, ತುಂಬಾನೇ ಸ್ಟ್ರಾನ್ಗ್ ವಿಲ್ ಪವರ್ ಇರುವಂತವಳು, ನನ್ನ ಬಳಿ ಬಂದು ಮ್ಯೂಸಿಕ್ ಪ್ಲೇ ಮಾಡಬಹುದ ಎಂದು ಕೇಳಿದಳು ಅದಕ್ಕೆ ನಾನು ಒಪ್ಪಿದಕ್ಕೆ ಲವ್ ಯು ಝೀನ್ದಗಿ ಹಾಡನ್ನ ಹಾಕಿಕೊಂಡು ತಲೆದೂಗುತ್ತಿದ್ದರು.ಇದರಿಂದ ನಾವು ಕಲಿತುಕೊಳ್ಳುವ ಪಾಠ ಏನು ಅಂತ ಅಂದರೆ ನಾವು ಯಾವತ್ತೂ ಹೋಪ್ ಅನ್ನ ಕಳೆದುಕೊಳ್ಳ ಬಾರದು.ಈ ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವಿರಲ್ ಆಗಿತ್ತು.

ಆದರೆ ಕರೊನಾ ವಿರುದ್ಧ ಸತತ ಹೋರಾಟ ಮಾಡಿ ಧೈರ್ಯದ ಸಂಕೇತವಾಗಿದ್ದ ಈ ಹುಡುಗಿ ಈಗ ನಿಧನರಾಗಿದ್ದಾರೆ. ಈ ಸುದ್ದಿ ನಿಜಕ್ಕು ಎಲ್ಲರಿಗು ಬಹಳ ನೋವು ತಂದಿದೆ.

https://twitter.com/drmonika_langeh/status/1392871777739575301?s=19

Trending

To Top