Bollywood

COVID-19 ಬಗ್ಗೆ ನಿರ್ಲಕ್ಷ್ಯ ಮಾಡಿರುವ ಕಾರಣದಿಂದಾಗಿ ಬಾಲಿವುಡ್ ಸಿಂಗರ್ ಕನಿಕಾ ಕಪೂರ್ ಮೇಲೆ ದೂರು ದಾಖಲಾಗಿದೆ!

ಬ್ರಿಟನ್ ನಿಂದ ಮರಳಿದ ಬಳಿಕ ಪಾರ್ಟಿ ಆಯೋಜಿಸಿ ಹಲವರಿಗೆ ಕೊರೋನಾವೈರಸ್ ಹರಡಿದ ಆರೋಪದಲ್ಲಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ಗೊಳಗಾಗದೇ ಬಂದಿದ್ದ ಕನಿಕಾ ಮುಂಬೈನಲ್ಲಿ ವಿಐಪಿಗಳಿಗಾಗಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಕನಿಕಾಗೆ ಕೊರೋನಾ ಇದ್ದು, ಪಾರ್ಟಿಗೆ ಹಾಜರಾಗಿದ್ದವರಿಗೆಲ್ಲಾ ಸೋಂಕು ತಗುಲಿರುವ ಶಂಕೆಯಿದೆ.

ಕನಿಕಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಬಿಜೆಪಿ ಸಂಸದ ದುಶ್ಯಂತ್ ಕೂಡಾ ಟೀಕೆಗೊಳಗಾಗಿದ್ದಾರೆ. ಕೊರೋನಾ ಇರುವಾಗ ಪಾರ್ಟಿ ಆಯೋಜಿಸಬಾರದು ಎಂದೆಲ್ಲಾ ಸರ್ಕಾರವೇ ಹೇಳುತ್ತಿರುವಾಗ ಅದನ್ನು ಜನನಾಯಕರೇ ಪಾಲಿಸದಿದ್ದರೆ ಹೇಗೆ ಎಂದು ಹಲವರು ಟೀಕೆ ಮಾಡಿದ್ದಾರೆ.

Trending

To Top