Film News

ಸಲಾರ್ ಚಿತ್ರದಲ್ಲಿ ನೀವು ನಟರಾಗಲು ಒಮ್ಮೆ ಟ್ರೈ ಮಾಡಿ!

ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಿಮಗೂ ನಟಿಸಬೇಕೆಂಬ ಆಸೆಯಿದ್ದಲ್ಲಿ, ಸಲಾರ್ ಚಿತ್ರತಂಡ ಆಯೋಜಿಸಿರುವ ಕಾಸ್ಟಿಂಗ್ ಕಾಲ್ ನಲ್ಲಿ ಭಾಗವಹಿಸಿ, ಸೆಲೆಕ್ಟ್ ಆದ್ರೆ ನೀವು ಸಲಾರ್ ಚಿತ್ರದಲ್ಲಿ ನಟಿಸಬಹುದು.

ನಟ ಪ್ರಭಾಸ್ ಜೊತೆ ನಾಯಕಿಯಾಗಲು ಸ್ಟಾರ್ ನಟರೇ ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಅವಕಾಶವೊಂದನ್ನು ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪಿಸಿದ್ದಾರೆ. ಸಲಾರ್ ಚಿತ್ರಕ್ಕಾಗಿ ಹೈದರಾಬಾದ್, ಬೆಂಗಳೂರು ಹಾಗೂ ಚೆನೈ ನಗರಗಳಲ್ಲಿ ಆಡಿಷನ್ ನಡೆಯಲಿದ್ದು, ಸಲಾರ್ ಚಿತ್ರದಲ್ಲಿ ನಟಿಸುವಂತಹವರು, ಡಿ.೧೫ ರಂದು ಹೈದರಾಬಾದಿನ ಸರಿಲಿಂಗಪಲ್ಲಿಯ ಅಲ್ಯೂಮಿನೀಯಂ ಕಾರ್ಖಾನೆಗೆ ಭೇಟಿ ನೀಡಿ ಆಡಿಷನ್ ನಲ್ಲಿ ಪಾಲ್ಗೊಳ್ಳಬಹುದೆಂದು ನೀಲ್ ತಿಳಿಸಿದ್ದಾರೆ.

ಇನ್ನೂ ಅವಕಾಶಕ್ಕಾಗಿ ಯಾವುದೇ ವಯಸ್ಸಿನ ನಿಬಂಧವಿಲ್ಲವಾದ್ದರಿಂದ ಎಲ್ಲಾ ವಯಸ್ಸಿನವರೂ ಪಾಲ್ಗೊಳ್ಳಬಹುದಾಗಿದೆ. ಡಿ.೧೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ರವರೆಗೆ ಆಡಿಷನ್ ನಡೆಯಲಿದ್ದು, ಆಡಿಷನ್ ಗೆ ಸಂಬಂಧಿಸಿದಂತೆ ಮೂರು ಮೊಬೈಲ್ ಸಂಖ್ಯೆಗಳನ್ನು ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೈದರಾಬಾದ್ ನಲ್ಲಿ ಆಡಿಶನ್ ಮುಗಿದ ನಂತರ ಸಲಾರ್ ಚಿತ್ರ ತಂಡ ಬೆಂಗಳೂರು ಹಾಗೂ ಚೆನೈ ನಗರಗಳಲ್ಲಿ ಸಹ ಆಡಿಷನ್ ನಡೆಸಲಿದ್ದು, ಆಸಕ್ತರು ನಟನೆಯ ವಿಡಿಯೋ, ಉತ್ತಮ ಛಾಯಚಿತ್ರಗಳು, ಸ್ವವಿವರಗಳನ್ನು ತೆಗೆದುಕೊಂಡು ಹೋದರೆ ಉತ್ತಮ. ಇನ್ನೂ ಇದೇ ರೀತಿ ಕಜಿಎಫ್ ಸಿನೆಮಾಗಾಗಿ ಕೂಡ ಆಡಿಷನ್ ಗಳನ್ನು ಮಾಡಿದ್ದರು.

Trending

To Top