Film News

ನಟ ರಾಮ್ ಚರಣ್ ಗೆ ಕೊರೋನಾ ಪಾಸಿಟೀವ್

ಹೈದರಾಬಾದ್: ತೆಲುಗು ಸಿನಿರಂಗದ ಮೆಗಾಸ್ಟಾರ್ ಪ್ಯಾಮಿಲಿಯ ರಾಮ್ ಚರಣ್ ರವರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಈ ಕುರಿತು ಸ್ವತಃ ರಾಮ್ ಚರಣ್ ರವರೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಇನ್ನೂ ರಾಮ್ ಚರಣ್ ರವರ ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯ ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ.

ಇನ್ನೂ ಕೊರೋನಾ ಸೋಂಕು ಧೃಡಪಡುತ್ತಿದ್ದಂತೆ ರಾಮ್ ಚರಣ್ ರವರು ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದು, ತಮ್ಮ ಜೊತೆ ಸಂಪರ್ಕವಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇತ್ತಿಚಿಗಷ್ಟೆ ಕ್ರಿಸ್ ಮಸ್ ಹಬ್ಬವನ್ನು ರಾಮ್ ಚರಣ್ ರವರ ಕುಟುಂಬ ಸಡಗರದಿಂದ ಆಚರಿಸಿದ್ದರು. ಈ ಪಾರ್ಟಿಯಲ್ಲಿ ಇತ್ತೀಚಿಗಷ್ಟೆ ಮದುವೆಯಾದ ನಿಹಾರಿಕಾ ದಂಪತಿ ಸೇರಿದಂತೆ ಮೆಗಾ ಫ್ಯಾಮಿಲಿ ಭಾಗಿಯಾಗಿದ್ದರು. ಪ್ರಸ್ತುತ ಕೊರೋನಾ ಸೋಂಕು ರಾಮ್ ಚರಣ್ ರವರಿಗೆ ಧೃಡಪಟ್ಟ ವಿಚಾರ ತಿಳಿಯುತ್ತಿದ್ದಂತೆ ರಾಮ್ ಚರಣ್ ಸೇರಿ ಕುಟುಂಬದ ಅನೇಕ ಸದಸ್ಯರು ಕ್ವಾರೆಂಟೈನ್ ಆಗಿದ್ದಾರೆ.

ಇನ್ನೂ ತಮಗೆ ಕೊರೋನಾ ಸೊಂಕು ದೃಡಪಟ್ಟ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ನಟ ರಾಮ್ ಚರಣ್, ನನ್ನ ಜೊತೆ ಕಳೆದ ಒಂದು ವಾರದಿಂದ ಸಂಪರ್ಕದಲ್ಲಿದ್ದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ, ನನಗೆ ಪಾಸಿಟೀವ್ ಬಂದಿದೆ, ಯಾವುದೇ ಲಕ್ಷಣಗಳು ಇಲ್ಲ, ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದು, ಶೀಘ್ರದಲ್ಲಿಯೇ ಚೇತರಿಸಿಕೊಂಡು ಬರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Trending

To Top