Cinema

ಬಾಲಿವುಡ್ ಗೆ ಬೈ ಹೇಳಿ, ನಮ್ಮ ಕೊಡಗಿನಲ್ಲಿ ತೋಟಮಾಡಲು ಹೊರಟ್ಟಿದ್ದರು ಶುಶಾಂತ್! ಮತ್ತೊಂದು ಸತ್ಯ ಬಯಲು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆ, ಹಲವಾರು ವಿಷಯಗಳನ್ನು ಹೊರತರುತ್ತಿದೆ. ಈ ದುರ್ಘಟನೆಯ ನಂತರ ಹೆಚ್ಚಾಗಿ ಚರ್ಚೆಯಾಗಿದ್ದು, ನೆಪೋಟಿಸಂ ಬಗ್ಗೆ. ಬಾಲಿವುಡ್ ನ ಘಟಾನುಘಟಿಗಳ ಬಗ್ಗೆ ಆರೋಪಗಳು ಕೇಳಿಬಂದವು. ಸುಶಾಂತ್ ಪ್ರಕರಣದಲ್ಲಿ ಹಲವಾರು ದೊಡ್ಡ ಕೈಗಳು ಸೇರಿವೆ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಇತ್ತೀಚೆಗೆ, ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಸುಶಾಂತ್ ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅವರ ಮೇಲೆ ಪೊಲೀಸರ ಬಳಿ ದೂರು ನೀಡಿದ್ದರು. ರಿಯಾ ಚಕ್ರವರ್ತಿಯನ್ನು ವಿಚಾರಣೆ ಮಾಡುವಂತೆ ಒತ್ತಾಯಿಸಿದ್ದರು. ಈ ದೂರಿನಲ್ಲಿ ಯಾರಿಗೂ ತಿಳಿಯದ ಹಲವಾರು ವಿಚಾರಗಳು ಹೊರಬಂದಿದೆ.
ಸುಶಾಂತ್ ಅವರ ತಂದೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿರುವ ಪ್ರಕಾರ, ಅವರ ಮಗ ನಟ ಸುಶಾಂತ್ ಸಿಂಗ್ ಬಾಲಿವುಡ್ ನ ವೃತ್ತಿಜೀವನವನ್ನು ತ್ಯಜಿಸಿ ಗೆಳೆಯ ಮಹೇಶ್ ಜೊತೆ ಕೈಜೋಡಿಸಿ ಕರ್ನಾಟಕದ ಕೊಡಗಿನಲ್ಲಿ ಸಾವಯವ ಕೃಷಿ ಮಾಡಬೇಕು ಎಂದುಕೊಂಡಿದ್ದರಂತೆ. ಆದರೆ ಸುಶಾಂತ್ ಕೃಷಿ ಕೆಲಸ ಮಾಡಲು ರಿಯಾ ಚಕ್ರವರ್ತಿ ಅನುಮತಿ ನೀಡಲಿಲ್ಲ. ಜೊತೆಗೆ, ಸುಶಾಂತ್ ಮುಂಬೈ ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಕಟ್ಟುಪಾಡು ಹಾಕಿದ್ದರು. ಅದರಿಂದಾಗಿಯೇ ಕೃಷಿ ಆಸೆಯನ್ನು ಸುಶಾಂತ್ ಕೈಬಿಟ್ಟಿದ್ದರು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಸುಶಾಂತ್ ಬೇರೆ ಕಡೆ ಹೋಗುವ ಯೋಜನೆ ಮಾಡಿದರೆ ಅಥವಾ ಬೇರೆ ಯಾವುದೇ ತರಹದ ಪ್ಲಾನ್ ಮಾಡಿದರೆ ಅವರ ವೈದ್ಯಕೀಯ ರಿಪೋರ್ಟ್ ಗಳನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದರಂತೆ ರಿಯಾ ಚಕ್ರವರ್ತಿ.
ಮಾ#ನಸಿಕ ಖಿ#ನ್ನತೆಗೆ ಒಳಗಾಗಿದ್ದರು ಸುಶಾಂತ್, ಈ ವಿಚಾರ ಮಾಧ್ಯಮದಲ್ಲಿ ಬಂದರೆ, ತಮ್ಮ ವೃತ್ತಿಜೀವನ ಹಾಳಾಗುತ್ತದೆ. ಕೆಲಸ ಇಲ್ಲದಂತೆ ಆಗುತ್ತದೆ ಎಂಬ ಕಾರಣಕ್ಕೆ ರಿಯಾ ಚಕ್ರವರ್ತಿ ಅವರ ಮಾತುಗಳನ್ನು ಕೇಳಬೇಕಾದ ಸಂದರ್ಭ ಇತ್ತಂತೆ. ಜೂನ್ 8ರಂದು ಸುಶಾಂತ್ ಅವರ ಎಕ್ಸ್ ಮ್ಯಾನೇಜರ್ ಆ#ತ್ಯೆ ಮಾಡಿಕೊಂಡಿದ್ದರು, ಈ ಕಾರಣದಿಂದ ಸುಶಾಂತ್ ಅವರು ಮಾನಸಿಕವಾಗಿ ಇನ್ನಷ್ಟು ಕುಗ್ಗಿ ಹೋಗಿದ್ದರಂತೆ. ಆ ಸಮಯದಲ್ಲಿ ವಿದೇಶದಲ್ಲಿದ್ದ ತಮ್ಮ ಸಹೋದರಿಗೆ ಕರೆಮಾಡಿ ಮಾತನಾಡಿದ್ದರಂತೆ.
ಹಾಗೂ, ಸುಶಾಂತ್ ಅವರ ಮನೆ ಸಿಬ್ಬಂದಿಗಳನ್ನು ಬದಲಿಸಿ, ತಮಗೆ ಪರಿಚಯ ಇದ್ದವರನ್ನು ನೇಮಕ ಮಾಡಿದ್ದಾರಂತೆ ರಿಯಾ. ಜೊತೆಗೆ ಸುಶಾಂತ್ ಮನೆಯಲ್ಲಿ ಇದ್ದ ಬೆಲೆಬಾಳುವ ವಸ್ತುಗಳು ಲ್ಯಾಪ್ ಟಾಪ್ ಹಾಗೂ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರಂತೆ . ಹೋಗುವ ಮುನ್ನಾ ಸುಶಾಂತ್ ಫೋನ್ number ಅನ್ನು ಬ್ಲಾಕ್ ಮಾಡಿದ್ದರಂತೆ. ಮತ್ತು ಸುಶಾಂತ್ ಅವರ ಬ್ಯಾಂಕ್ ಅಕೌಂಟ್ ಇಂದ ರೂ.15 ಕೋಟಿ ವರ್ಗಾವಣೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ 15 ಕೋಟಿ ಹಣ ವರ್ಗಾವಣೆಯ ಬಗ್ಗೆ ತನಿಖೆಯ ಮಾಡಲು ಬಿಹಾರ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ.

Trending

To Top