Film News

ಗಂಗೂಭಾಯಿ ಕಾತೇವಾಡಿ: ನಿರ್ದೇಶಕ ಹಾಗೂ ನಟಿ ವಿರುದ್ದ ಪ್ರಕರಣ

ಮುಂಬೈ: ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಗಂಗೂಬಾಯಿ ಕಾತೇವಾಡಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ಆಲಿಯಾ ಭಟ್ ವಿರುದ್ದ ಮಹರಾಷ್ಟ್ರದಲ್ಲಿ ಪ್ರಕರಣವೊಂದು ದಾಖಲಾಗಿದೆ.

ನಟಿ ಆಲಿಯಾ ಭಟ್ ಗಂಗೂಭಾಯಿ ಕಾತೇವಾಡಿ ಸಿನೆಮಾದಲ್ಲಿ ಗಂಗೂಭಾಯಿ ಕಾತೇವಾಡಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಸಿನೆಮಾ ವಿವಾದದಲ್ಲಿ ಸಿಲುಕಿದ್ದು, ಗಂಗೂಭಾಯಿ ಕಾತೇವಾಡಿ ಕುಟುಂಬಸ್ಥರು ಚಿತ್ರದ ನಟಿ ಹಾಗೂ ನಿರ್ದೇಶಕರ ವಿರುದ್ದ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೆ ಗಂಗೂಭಾಯಿ ಕಾತೇವಾಡಿ ದಿ ಮಾಫಿಯಾ ಕ್ವೀನ್ ಎಂಬ ಹೆಸರಿನಲ್ಲಿ ಈ ಸಿನೆಮಾದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತ್ತು. ಈ ಟ್ಯಾಗ್ ಲೈನ್ ಕಾತೇವಾಡಿ ಕುಟುಂಬ ಆಕ್ರೋಷಕ್ಕೆ ಕಾರಣವಾಗಿದೆ. ಗಂಗೂಬಾಯಿ ಕಾತೇವಾಡಿಯನ್ನು ಅಸಭ್ಯ ರೀತಿಯಲ್ಲಿ ಸಿನೆಮಾದಲ್ಲಿ ಚಿತ್ರೀಕರಿಸಿದೆ. ಸಿನೆಮಾದ ಚಿತ್ರೀಕರಣವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಮುಂಬೈ ಸಿವಿಲ್ ಕೋರ್ಟಿನಲ್ಲಿ ನಟಿ ಆಲಿಯಾ ಭಟ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಕಥೆ ಬರಹಗಾರರ ವಿರುದ್ದ ದೂರು ದಾಖಲಿಸಿದ್ದಾರೆ.

ಇನ್ನೂ ಈ ಚಿತ್ರವು ಜೈದಿ ಎಂಬುವವರು ಬರೆದಿರುವ ದಿ ಮಾಫಿಯಾ ಕ್ವೀನ್ ಆಫ್ ಮುಂಬೈ ಎಂಬ ಪುಸ್ತಕದ ಆಧಾರದ ಮೇಲೆ ನಿರ್ಮಾಣವಾಗುತ್ತಿದ್ದು, ಜೈದಿ ವಿರುದ್ದ ಕೂಡ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Trending

To Top