Film News

ಬಹುನಿರೀಕ್ಷಿತ ಕಾಮಿಡಿ ಎಂಟರ್‍ ಟ್ರೈನರ್‍ ಎಫ್-3 ಸಿನೆಮಾ ಟ್ರೈಲರ್ ಬಿಡುಗಡೆ….

ಟಾಲಿವುಡ್ ನ ಪುಲ್ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾ ಎಫ್-3 ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು, ಸಖತ್ ಫನ್ನಿಯಾಗಿದ್ದು, ಅಭಿಮಾನಿಗಳನ್ನು ನಕ್ಕು ನಲಿಸುತ್ತಿದೆ. ಕಳೆದ 2019 ರಲ್ಲಿ ಬಿಡುಗಡೆಯಾಗಿದ್ದ ಎಫ್ 2 ಸಿನೆಮಾ ಸಖತ್ ಹಿಟ್ ಆಗಿತ್ತು. ಇದೀಗ ಎಫ್-3 ಸಿನೆಮಾ ಸಹ ಇದೇ ಹಾದಿಯಲ್ಲಿ ಸಿದ್ದವಾಗಿದ್ದು, ಪ್ರೇಕ್ಷರನ್ನು ನಕ್ಕು ನಲಿಸಲು ಮೇ.27 ರಂದು ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದ ಪ್ರಚಾರ ಕಾರ್ಯಗಳು ಸಹ ಭರದಿಂದ ಸಾಗುತ್ತಿವೆ.

ಟಾಲಿವುಡ್ ಖ್ಯಾತ ನಟ ವಿಕ್ಟರಿ ವೆಂಕಟೇಶ್ ಹಾಗೂ ಮೆಗಾ ಪ್ರಿನ್ಸ್ ವರುಣ್ ತೇಜ್ ರವರ ಕಾಂಬಿನೇಷನಲ್ಲಿ ಈ ಸಿನೆಮಾ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದೆ. ಇಂದು ಈ ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು, ಒಳ್ಳೆಯ ಕಂಟೆಂಟ್ ಉಳ್ಳ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾ ಆಗಿರಲಿದೆ ಎಂಬುದು ತಿಳಿಯುತ್ತದೆ. ಇನ್ನೂ ಇಡೀ ಎಫ್-3 ಸಿನೆಮಾದ ಹಣದ ಸುತ್ತ ಸುತ್ತುವ ಕಥೆಯಾಗರಲಿದೆ ಎಂಬುದು ಸಹ ತಿಳಿಯುತ್ತದೆ. ಎಫ್-2 ಕಥೆಗೂ ಎಫ್-3 ಕಥೆಗೂ ಯಾವುದೇ ಸಂಬಂಧವಿಲ್ಲವಾದರೂ ಕೆಲವು ಪಾತ್ರಗಳು ಮಾತ್ರ ಹಾಗೆ ಇವೆಯಂತೆ. ಈ ಸಿನೆಮಾದಲ್ಲಿ ವೆಂಕಟೇಶ್ ರಾತ್ರಿ ಕುರುಡು ಸಮಸ್ಯೆಯನ್ನು ಹೊಂದಿದ್ದರೇ, ಮತ್ತೊರ್ವ ನಟ ವರುಣ್ ತೇಜ್ ತೊದಲು ಸಮಸ್ಯೆಯನ್ನು ಹೊಂದಿರುತ್ತಾರೆ. ಈ ಕಾಂಬಿನೇಷನ್ ಪ್ರೇಕ್ಷಕರನ್ನು ನಕ್ಕು ನಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ತಮನ್ನಾ ಭಾಟಿಯಾ ಹಾಗೂ ಮೆಹರೀನ್ ರವರು ವೆಂಕಟೇಶ್ ಹಾಗೂ ವರುಣ್ ತೇಜ್ ರವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಸಿನೆಮಾದಲ್ಲಿ ಟ್ರೆಡಿಷಿನಲ್ ಅಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋನಾಲ್ ಚೌಹಾನ್ ಹಾಗೂ ಸುನೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ನಟ ವೆನ್ನೆಲ ಕಿಷೋರ್‍ ಪಾನ್ ಇಂಡಿಯಾ ಜೂನಿಯರ್‍ ನಟನಾಗಿ ರಂಜಿಸಲಿದ್ದಾರೆ. ಅಷ್ಟೇ ಅಲ್ಲದೇ ಈ ಸಿನೆಮಾದಲ್ಲಿ ರಾಜೇಂದ್ರ ಪ್ರಸಾದ್, ಮುರಳಿ ಶರ್ಮಾ, ರಘುಬಾಬು, ಪೃಥ್ವಿರಾಜ್ ಸೇರಿದಂತೆ ದೊಡ್ಡ ಕಲಾವಿದರು ಸಹ ಬಣ್ಣ ಹಚ್ಚಿದ್ದಾರೆ.

ಇನ್ನೂ ಈ ಸಿನೆಮಾ ಮಧ್ಯಮ ವರ್ಗ ಕುಟುಂಬದ ಕನಸು ನನಸಾಗುವುದರ ಜೊತೆಗೆ ಮನರಂಜನೆಯ ಕುರಿತು ಮಾಹಿತಿ ನೀಡುವ ಸಿನೆಮಾ ಆಗಿದೆ. ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ಐಟಂ ಸಾಂಗ್ ವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನೆಮಾದ ಮತ್ತೊಂದು ಹೈಲೆಟ್ ಆಗಿದೆ. ದಿಲ್ ರಾಜು ಈ ಸಿನೆಮಾ ನಿರ್ದೇಶನ ಮಾಡಿದ್ದು, ಶ್ರೀ ವೆಂಟೇಶ್ವರ ಕ್ರಿಯೇಷನ್ಸ್ ಬ್ಯಾನರ್‍ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನೆಮಾ ಮೇ.27 ರಂದು ತೆರೆಮೇಲೆ ಬರಲಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಕೀರ್ತಿ ಸುರೇಶ್, ಅವಕಾಶ ಸಿಗದಿದ್ದರೇ ಕೆಲಸ ಮಾಡಿಕೊಳ್ಳುತ್ತೇನೆ ಎಂದ ನಟಿ….!

ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರಾಗಿದ್ದಾರೆ. ಮಹಾನಟಿ ಎಂಬ ಸಿನೆಮಾಗಾಗಿ ಆಕೆ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಮಲಯಾಳಂ…

2 hours ago

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ತೆಲುಗು ನಟಿ ಅನಸೂಯ…!

ಕೆಜಿಎಫ್ ಸಿನೆಮಾದ ಬಳಿಕ ಇಡೀ ದೇಶದಾದ್ಯಂತ ಅನೇಕರ ಮೆಚ್ಚುಗೆಗೆ ಪಾತ್ರವಾದ ಸಿನೆಮಾ ಕಾಂತಾರ ಎಂದೇ ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕ…

3 hours ago

ಮತ್ತೊಮ್ಮೆ ಮದುವೆ ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ…!

ಸೌತ್ ನಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಸದಾ ಗ್ಲಾಮರ್‍ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸೋಷಿಯಲ್…

4 hours ago

ವಿಜಯ್ ದೇವರಕೊಂಡ ತಾಯಿಯೊಂದಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್, ವೈರಲ್ ಆದ ಪೊಟೋ…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿಯರಲ್ಲಿ ಜಾನ್ವಿ ಕಪೂರ್‍ ಸಹ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನಟಿ ಜಾನ್ವಿಗೆ…

7 hours ago

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

19 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

20 hours ago