ಬಹುನಿರೀಕ್ಷಿತ ಕಾಮಿಡಿ ಎಂಟರ್‍ ಟ್ರೈನರ್‍ ಎಫ್-3 ಸಿನೆಮಾ ಟ್ರೈಲರ್ ಬಿಡುಗಡೆ….

ಟಾಲಿವುಡ್ ನ ಪುಲ್ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾ ಎಫ್-3 ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು, ಸಖತ್ ಫನ್ನಿಯಾಗಿದ್ದು, ಅಭಿಮಾನಿಗಳನ್ನು ನಕ್ಕು ನಲಿಸುತ್ತಿದೆ. ಕಳೆದ 2019 ರಲ್ಲಿ ಬಿಡುಗಡೆಯಾಗಿದ್ದ ಎಫ್ 2 ಸಿನೆಮಾ ಸಖತ್ ಹಿಟ್ ಆಗಿತ್ತು. ಇದೀಗ ಎಫ್-3 ಸಿನೆಮಾ ಸಹ ಇದೇ ಹಾದಿಯಲ್ಲಿ ಸಿದ್ದವಾಗಿದ್ದು, ಪ್ರೇಕ್ಷರನ್ನು ನಕ್ಕು ನಲಿಸಲು ಮೇ.27 ರಂದು ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದ ಪ್ರಚಾರ ಕಾರ್ಯಗಳು ಸಹ ಭರದಿಂದ ಸಾಗುತ್ತಿವೆ.

ಟಾಲಿವುಡ್ ಖ್ಯಾತ ನಟ ವಿಕ್ಟರಿ ವೆಂಕಟೇಶ್ ಹಾಗೂ ಮೆಗಾ ಪ್ರಿನ್ಸ್ ವರುಣ್ ತೇಜ್ ರವರ ಕಾಂಬಿನೇಷನಲ್ಲಿ ಈ ಸಿನೆಮಾ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದೆ. ಇಂದು ಈ ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು, ಒಳ್ಳೆಯ ಕಂಟೆಂಟ್ ಉಳ್ಳ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾ ಆಗಿರಲಿದೆ ಎಂಬುದು ತಿಳಿಯುತ್ತದೆ. ಇನ್ನೂ ಇಡೀ ಎಫ್-3 ಸಿನೆಮಾದ ಹಣದ ಸುತ್ತ ಸುತ್ತುವ ಕಥೆಯಾಗರಲಿದೆ ಎಂಬುದು ಸಹ ತಿಳಿಯುತ್ತದೆ. ಎಫ್-2 ಕಥೆಗೂ ಎಫ್-3 ಕಥೆಗೂ ಯಾವುದೇ ಸಂಬಂಧವಿಲ್ಲವಾದರೂ ಕೆಲವು ಪಾತ್ರಗಳು ಮಾತ್ರ ಹಾಗೆ ಇವೆಯಂತೆ. ಈ ಸಿನೆಮಾದಲ್ಲಿ ವೆಂಕಟೇಶ್ ರಾತ್ರಿ ಕುರುಡು ಸಮಸ್ಯೆಯನ್ನು ಹೊಂದಿದ್ದರೇ, ಮತ್ತೊರ್ವ ನಟ ವರುಣ್ ತೇಜ್ ತೊದಲು ಸಮಸ್ಯೆಯನ್ನು ಹೊಂದಿರುತ್ತಾರೆ. ಈ ಕಾಂಬಿನೇಷನ್ ಪ್ರೇಕ್ಷಕರನ್ನು ನಕ್ಕು ನಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ತಮನ್ನಾ ಭಾಟಿಯಾ ಹಾಗೂ ಮೆಹರೀನ್ ರವರು ವೆಂಕಟೇಶ್ ಹಾಗೂ ವರುಣ್ ತೇಜ್ ರವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಸಿನೆಮಾದಲ್ಲಿ ಟ್ರೆಡಿಷಿನಲ್ ಅಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋನಾಲ್ ಚೌಹಾನ್ ಹಾಗೂ ಸುನೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ನಟ ವೆನ್ನೆಲ ಕಿಷೋರ್‍ ಪಾನ್ ಇಂಡಿಯಾ ಜೂನಿಯರ್‍ ನಟನಾಗಿ ರಂಜಿಸಲಿದ್ದಾರೆ. ಅಷ್ಟೇ ಅಲ್ಲದೇ ಈ ಸಿನೆಮಾದಲ್ಲಿ ರಾಜೇಂದ್ರ ಪ್ರಸಾದ್, ಮುರಳಿ ಶರ್ಮಾ, ರಘುಬಾಬು, ಪೃಥ್ವಿರಾಜ್ ಸೇರಿದಂತೆ ದೊಡ್ಡ ಕಲಾವಿದರು ಸಹ ಬಣ್ಣ ಹಚ್ಚಿದ್ದಾರೆ.

ಇನ್ನೂ ಈ ಸಿನೆಮಾ ಮಧ್ಯಮ ವರ್ಗ ಕುಟುಂಬದ ಕನಸು ನನಸಾಗುವುದರ ಜೊತೆಗೆ ಮನರಂಜನೆಯ ಕುರಿತು ಮಾಹಿತಿ ನೀಡುವ ಸಿನೆಮಾ ಆಗಿದೆ. ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ಐಟಂ ಸಾಂಗ್ ವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನೆಮಾದ ಮತ್ತೊಂದು ಹೈಲೆಟ್ ಆಗಿದೆ. ದಿಲ್ ರಾಜು ಈ ಸಿನೆಮಾ ನಿರ್ದೇಶನ ಮಾಡಿದ್ದು, ಶ್ರೀ ವೆಂಟೇಶ್ವರ ಕ್ರಿಯೇಷನ್ಸ್ ಬ್ಯಾನರ್‍ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನೆಮಾ ಮೇ.27 ರಂದು ತೆರೆಮೇಲೆ ಬರಲಿದೆ.

Previous articleಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಹುಬೇಡಿಕೆ ನಟಿ ಸಾಯಿ ಪಲ್ಲವಿ… ಹುಟ್ಟು ಹಬ್ಬಕ್ಕೆ ಸಾಯಿ ಪಲ್ಲವಿಗೆ ಗಿಫ್ಟ್..
Next articleಬಿಕಿನಿ ಅವತಾರದಲ್ಲೇ ಹುಟ್ಟು ಹಬ್ಬ ಆಚರಿಸಿಕೊಂಡ ಬಾಲಿವುಡ್ ನಟನ ಮಗಳು…