ಬಾಹುಬಲಿ ಪ್ರಭಾಸ್ ಕುರಿತಂತೆ ಸಂಚಲನಾತ್ಮಕ ಸತ್ಯಗಳನ್ನು ಹೊರಹಾಕಿದ ಹಾಸ್ಯ ನಟ ಶ್ರೀನು….!

ಟಾಲಿವುಡ್ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವ ನಟ ಪ್ರಭಾಸ್ ರವರ ಜೊತೆ ಅನೇಕ ಸಿನೆಮಾಗಳನ್ನು ಮಾಡಿದಂತಹ ಹಾಸ್ಯನಟ ಶ್ರೀನು ಪ್ರಭಾಸ್ ರವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹೊರಹಾಕಿದ್ದಾರೆ. ಪ್ರಭಾಸ್ ಜೊತೆಗೂಡಿ ಫಿಲ್ಮಂ ಜರ್ನಿ ಶುರು ಮಾಡಿದ ಶ್ರೀನು ಅನೇಕ ಸಿನೆಮಾಗಳಲ್ಲಿ ಪ್ರಭಾಸ್ ರವರಿಗೆ ಬಲಗೈ ಆಗಿದ್ದರು ಎನ್ನಬಹುದು. ಆದರೆ ಇತ್ತಿಚಿಗೆ ಶ್ರೀನು ರನ್ನು ಪ್ರಭಾಸ್ ದೂರ ಇಟ್ಟಿದ್ದಾರೆ. ಅಷ್ಟಕ್ಕೂ ಪ್ರಭಾಸ್ ರವರ ಬಗ್ಗೆ ಶ್ರೀನು ಹೇಳಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಹಾಸ್ಯನಟರಲ್ಲಿ ಶ್ರೀನು ಒಳ್ಳೆಯ ಕ್ರೇಜ್ ಕಲಾವಿದರಾಗಿದ್ದಾರೆ. ಬಾಹುಬಲಿ ಪ್ರಭಾಸ್ ರವರೊಂದಿಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ರವರೊಂದಿಗೆ ಸಿನಿ ಕೆರಿಯರ್‍ ಪ್ರಾರಂಭ ಮಾಡಿದ ಶ್ರೀನು ರೆಬೆಲ್ ಸ್ಟಾರ್‍ ಪ್ರಭಾಸ್ ಗೆ ಡೇಟ್ಸ್ ಸಹ ನೋಡಿದ್ದಾರೆ. ಜೊತೆಗಿದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಆದರೆ ಏನಾಯಿತೋ ತಿಳಿಯದ ಇವರಿಬ್ಬರೂ ಬೇರೆಯಾದರು. ಸಿನೆಮಾಗಳಲ್ಲಿ ಬ್ಯುಸಿಯಾದ ಕಾರಣಕ್ಕೋ ಅಥವಾ ಅವರಿಬ್ಬರ ನಡುವೆ ಏನಾದರೂ ವಿಭೇದಗಳು ಹುಟ್ಟಿಕೊಂಡವೇ ತಿಳಿಯದು ಆದರೆ ಇವರಿಬ್ಬರೂ ಮಾತ್ರ ದೂರವೇ ಇದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಮೃತಪಟ್ಟಾಗ ಪ್ರಭಾಸ್ ರವರ ಜೊತೆ ಅಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡರು.

ಇವರಿಬ್ಬರೂ ಬೇರೆಯಾಗಿ ಸುಮಾರು ತಿಂಗಳುಗಳೇ ಕಳೆದಿದೆ. ಇದೀಗ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರ ಬಗ್ಗೆ ಸುದ್ದಿ ಹೊರಬಂದಿದೆ. ಅನೇಕ ಸಿನೆಮಾಗಳಲ್ಲಿ ವಿಲನ್ ಗ್ಯಾಂಗ್ ನಲ್ಲಿ ರೌಡಿಯಾಗಿ ಕಾಣಿಸಿಕೊಂಡ ಪ್ರಭಾಸ್ ಶ್ರೀನು ಬಳಿಕ ಹಾಸ್ಯ ನಟನಾಗಿ ಕಾಣಿಸಿಕೊಂಡರು. ಇನ್ನೂ ಇತ್ತೀಚಿಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ರವರಿಂದ ದೂರವಾಗಿದ್ದು ಯಾಕೆ ಎಂಬ ವಿಚಾರವನ್ನು ಶ್ರೀನು ಹಂಚಿಕೊಂಡಿದ್ದಾರೆ. ಇನ್ನೂ ಶ್ರೀನು ಈ ಕುರಿತು ಸ್ಪಷ್ಟನೆ ನೀಡುತ್ತಾ ಪ್ರಭಾಸ್ ನನ್ನನ್ನು ದೂರ ಇಟ್ಟಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಹೊರಗೆ ಅನೇಕ ವಿಧದಲ್ಲಿ ಹೇಳಿಕೊಳ್ಳುತ್ತಿದ್ದಾರೆ, ನಾನು ಪ್ರಭಾಸ್ ಜೊತೆಗೆ ಗಲಾಟೆ ಮಾಡಿಕೊಂಡು ಬೇರೆಯಾಗಿದ್ದೇನೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯಲ್ಲಿ ಯಾವುದೇ ನಿಜಾಂಶ ಇಲ್ಲ. ಎಲ್ಲವೂ ಕೆಲಸ ಇಲ್ಲದವರು ಸೃಷ್ಟಿ ಮಾಡಿರುವ ಸುಳ್ಳು ಸುದ್ದಿಗಳಾಗಿವೆ. ನಾನು ಪ್ರಭಾಸ್ ಇಂದಿಗೂ ಎಂದಿಗೂ ಒಳ್ಳೆಯ ಸ್ನೇಹಿತರಾಗಿಯೇ ಇರುತ್ತೇವೆ ಎಂದಿದ್ದಾರೆ.

ಪ್ರಭಾಸ್ ರವರ ಬಗ್ಗೆ ಮತಷ್ಟು ವಿಚಾರಗಳನ್ನು ಹೇಳುತ್ತಾ ನಾನು ಪ್ರಭಾಸ್ ಇಬ್ಬರೂ ವೈಜಾಗ್ ನಲ್ಲಿ ಸತ್ಯಾನಂದ ರವರ ಇನ್ಸಿಸ್ಟಿಟ್ಯೂಟ್ ನಲ್ಲಿ ನಟನೆಯನ್ನು ಕಲಿತೆವು.  ಅಲ್ಲಿಂದಲೇ ನಾನು ಪ್ರಭಾಸ್ ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದೇ ನಾನು ಊಹಿಸಿದ್ದೆ ಪ್ರಭಾಸ್ ದೊಡ್ಡ ಸ್ಟಾರ್‍ ಆಗುತ್ತಾರೆ ಎಂದು. ಪ್ರಭಾಸ್ ರವರ ಮೊದಲನೇ ಸಿನೆಮಾ ಈಶ್ವರ್‍ ನಲ್ಲಿ ನಾನು ನಟಿಸಬೇಕಿತ್ತು. ಆದರೆ ನಾನು ಬೇರೆ ಸಿನೆಮಾದಲ್ಲಿ ಬ್ಯುಸಿಯಾದ ಕಾರಣ ಅದು ಸಾಧ್ಯವಾಗಲಿಲ್ಲ. ಬಳಿಕ ಅನೇಕ ಸಿನೆಮಾಗಳಲ್ಲಿ ಆತನೊಂದಿಗೆ ನಟಿಸಿದ್ದೇನೆ. ಅಷ್ಟೇಅಲ್ಲದೇ ಪ್ರಭಾಸ್ ಇದೀಗ ದೊಡ್ಡ ಸ್ಟಾರ್‍ ಆದರೂ ಸಹ ನನ್ನ ಜೊತೆ ಮೊದಲು ಹೇಗಿದ್ದರೋ ಈಗಲೂ ಸಹ ಅದೇ ರೀತಿಯಲ್ಲಿದ್ದಾರೆ ಅವರ ಸ್ನೇಹಕ್ಕೆ ಅವರ ಸರಳತೆಯೇ ಉತ್ತಮ ಉದಾಹರಣೆ ಎಂದಿದ್ದಾರೆ ಶ್ರೀನು.

Previous articleನಯನತಾರಾ ಗರ್ಭಿಣಿಯಂತೆ, ವಿಗ್ನೇಶ್ ಮಾಡಿದ ಪೋಸ್ಟ್ ನಿಂದ ಹುಟ್ಟಿದ ಸುದ್ದಿ….!
Next articleರಾಜಾ ರವೀಂದ್ರ ಹಾಗೂ ಸುರೇಖವಾಣಿ ಪಾರ್ಟಿಯಲ್ಲಿ ಸದ್ದು, ವೈರಲ್ ಆದ ವಿಡಿಯೋ….!