Cinema

ಮತ್ತೆ ಓಪನ್ ಆಗಲಿದೆ ಚಿತ್ರ ಮಂದಿರಗಳು! ಸರ್ಕಾರದಿಂದ ಗ್ರೀನ್ ಸಿಗ್ನಲ್!

ಕರೊನಾ ಸಮಸ್ಯೆ ಶುರುವಾದಾಗಿನಿಂದಲೂ ಎಲ್ಲಾ ಉದ್ಯಮಗಳಿಗೂ ಸಮಸ್ಯೆ ಎದುರಾಗಿದೆ. ಸಿನಿಮಾರಂಗ ಇದಕ್ಕೆ ಹೊರತಾಗಿಲ್ಲ. ಸುಮಾರು ತಿಂಗಳುಗಳಿಂದ ಶೂಟಿಂಗ್ ನಡೆಯದೆ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ, ದಿನಗೂಲಿ ನೌಕರರಿಗೆ ಮಾತ್ರವಲ್ಲದೇ, ಸಿನಿಮಾ ಪ್ರದರ್ಶನ ಕಾಣದೆ ಚಿತ್ರಮಂದಿರ ನಡೆಸುವವರಿಗೆ ಮತ್ತು ಅಲ್ಲಿನ ಕೆಲಸಗಾರರಿಗೆ ಬಹಳ ತೊಂದರೆಯಾಗಿದೆ.

ಚಿತ್ರಮಂದಿರಗಳನ್ನೇ ನಂಬಿಕೊಂಡಿದ್ದ ಹಲವಾರು ಜನರಿಗೆ ಇದರಿಂದಾಗಿ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಇದರ ಬಗ್ಗೆ ಕೆಲ ದಿನಗಳ ಹಿಂದೆ ಸಹ ಸಾಕಷ್ಟು ಚರ್ಚೆಯಾಗಿತ್ತು. ಥಿಯೇಟರ್ ಗಳನ್ನು ತೆರೆಯಲು ಅವಕಾಶ ಕೊಡಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ, ಚಿತ್ರಮಂದಿರಗಳನ್ನು ತೆರೆಯುವ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಸೆಪ್ಟೆಂಬರ್ 15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್ ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್ ಗಳಿಗೂ ಸಹ ಚಾಲನೆ ಸಿಕ್ಕಿದ್ದು, ಒಂದಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಅವುಗಳನ್ನು ಪಾಲಿಸಿ ಶೂಟಿಂಗ್ ಪುನರಾರಂಭ ಮಾಡಬೇಕು ಎನ್ನಲಾಗಿತ್ತು ಇದೀಗ, ಅವುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಜೊತೆಗೆ ಥಿಯೇಟರ್ ಗಳನ್ನು ಸಹ ಸೆಪ್ಟೆಂಬರ್ 15ರಿಂದ ತೆರೆಯಲು ಅನುಮತಿ ಸಿಗಬಹುದು. ಈ ಬಗ್ಗೆ ಕೇಂದ್ರ ಸರ್ಕಾರದಿಂದಲು ಸಹ ಮಾಹಿತಿ ಸಿಕ್ಕಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್ ತಿಳಿಸಿದ್ದಾರೆ. ಕರೊನಾ ಸಮಸ್ಯೆ ಶುರುವಾದಾಗಿನಿಂದಲೂ ಎಲ್ಲಾ ಉದ್ಯಮಗಳಿಗೂ ಸಮಸ್ಯೆ ಎದುರಾಗಿದೆ. ಸಿನಿಮಾರಂಗ ಇದಕ್ಕೆ ಹೊರತಾಗಿಲ್ಲ. ಸುಮಾರು ತಿಂಗಳುಗಳಿಂದ ಶೂಟಿಂಗ್ ನಡೆಯದೆ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ, ದಿನಗೂಲಿ ನೌಕರರಿಗೆ ಮಾತ್ರವಲ್ಲದೇ, ಸಿನಿಮಾ ಪ್ರದರ್ಶನ ಕಾಣದೆ ಚಿತ್ರಮಂದಿರ ನಡೆಸುವವರಿಗೆ ಮತ್ತು ಅಲ್ಲಿನ ಕೆಲಸಗಾರರಿಗೆ ಬಹಳ ತೊಂದರೆಯಾಗಿದೆ.

Trending

To Top