ವಿಕ್ರಾಂತ್ ರೋಣ ಸಿನೆಮಾದ ರಾರಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಸಿನಿ ತಾರೆಯರು….

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನೆಮಾ ವಿಕ್ರಾಂತ್ ರೋಣ. 3 ಡಿ ರೂಪದಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಹೆಚ್ಚು ನಿರೀಕ್ಷೆಯನ್ನು ಹುಟ್ಟಿಸಿದೆ. ಇದರ ಜೊತೆಗೆ ಇತ್ತೀಚಿಗಷ್ಟೆ ಬಿಡುಗಡೆಯಾದ ರಾ ರಾ ರಕ್ಕಮ್ಮ ಹಾಡಂತೂ ಹವಾ ಸೃಷ್ಟಿಸಿದೆ. ಬಹುತೇಕ ಕಿಚ್ಚನ ಪ್ಯಾನ್ಸ್ ಬಾಯಲ್ಲಿ ರಾ ರಾ ರಕ್ಕಮ್ಮ ಹಾಡು ಸದ್ದು ಮಾಡುತ್ತಿದೆ. ಜೊತೆಗೆ ಕೆಲವೊಂದು ಸೆಲೆಬ್ರೆಟಿಗಳೂ ಸಹ ರಾ ರಾ ರಕ್ಕಮ್ಮ ಹಾಡಿಗೆ ಫಿದಾ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ರಾ ರಾ ರಕ್ಕಮ್ಮ ಬಿಡುಗಡೆಯಾಯಿತು. ಬಳಿಕ ಸೋಷಿಯಲ್ ಮಿಡಿಯಾ ಸೇರಿದಂತೆ ರೀಲ್ಸ್ ಗಳಲ್ಲೂ ಸಹ ರಾ ರಾ ರಕ್ಕಮ್ಮ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕಿಚ್ಚನ ಅಭಿಮಾನಿಗಳೊಂದಿಗೆ ಸಿನಿಮಾ ತಾರೆಯರೂ ಸಹ ಹೆಜ್ಜೆ ಹಾಕಿದ್ದು, ವಿಡಿಯೋಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಕಿಚ್ಚನ ರಾ ರಾ ರಕ್ಕಮ್ಮ ಹಾಡಿಗೆ ಸ್ಯಾಂಡಲ್ ವುಡ ನಟಿ ಆಶಿಕಾ ರಂಗನಾಥ್, ಚಂದನ್ ಶೆಟ್ಟಿ ನಿವೇದಿತಾ ಗೌಡ, ಪಾವಗಡ ಮಂಜು, ಸೃಜನ್ ಸೇರಿದಂತೆ ಅನೇಕರು ಭರ್ಜರಿಯಾಗಿ ಕುಣಿದಿದ್ದಾರೆ. ಸದ್ಯ ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿವೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಸಕ್ರಿಯರಾಗಿರುವಂತಹ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಹ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಟಿ ನಿವೇದಿತಾ ಬ್ಲಾಕ್ ಅಂಡ್ ವೈಟ್ ಹಾಗೂ ಚಂದನ್ ಶೆಟ್ಟಿ ಬ್ಲಾಕ್ ಅಂಡ್ ರೆಡ್ ಡ್ರೆಸ್ ಗಳಲ್ಲಿ ಮಿಂಚಿದ್ದಾರೆ. ಈ ಜೋಡಿ ಜೊತೆಯಾಗಿ ಈ ವಿಡಿಯೋವನ್ನುಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಟಿ ಆಶಿಕಾ ರಂಗನಾಥ್ ಸಹ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ಈ ಹಾಡಿಗೆ ಮೊದಲ ಬಾರಿಗೆ ಕಿಚ್ಚ ಸುದೀಪ್ ರೀಲ್ಸ್ ಮಾಡಿದ್ದರು. ಇದೇ ರೀಲ್ಸ್ ಅನ್ನು ಆಶಿಕಾ ರಂಗನಾಥ್ ಸಹ ಅನುಕರಿಸಿದ್ದಾರೆ. ಆಶಿಕಾ ಸರಳವಾದ ಡ್ರೆಸ್ ನಲ್ಲಿ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಮಂಜು ಪಾವಗಡ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಜೋಡಿಯಾಗಿ ಮಾಡಿರುವ ರಾ ರಾ ರಕ್ಕಮ್ಮ ಹಾಡಿನ ವಿಡಿಯೋ ಸಖತ್ ವೈರಲ್ ಆಗಿದೆ. ಈ ಹಾಡಿಗೆ ವಿಭಿನ್ನವಾಗಿ ತಮ್ಮದೇ ಆದ ಶೈಲಿಯಲ್ಲಿ ಕೊಂಚ ಕಾಮಡಿಯನ್ನು ಆಡ್ ಮಾಡಿ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಟ ಸೃಜನ್ ಸಹ ಮಕ್ಕಳ ಗುಂಪಿನೊಂದಿಗೆ ಸೇರಿ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

Previous articleಸಲಾರ್ ಸಿನೆಮಾ ಕ್ಲೈಮ್ಯಾಕ್ಸ್ ಭೂಮಿಯ ಮೇಲೆ ಅಲ್ಲವಂತೆ, ಸಮುದ್ರದಲ್ಲಂತೆ…!
Next articleಬಾಲಿವುಡ್ ನ ಸಿನೆಮಾವೊಂದರಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪೂಜಾ…..