Kannada Cinema News

ನಿನ್ನ ಶುಭಾಶಯಗಳನ್ನು ಬಹಳ ಮಿಸ್ ಮಾಡ್ತಿದ್ದೀನಿ ಚಿರು ಮಗನೇ ಎಂದು ಹೇಳಿದ ಅರ್ಜುನ್ ಸರ್ಜಾ!

ನಿನ್ನೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಹುಟ್ಟುಹಬ್ಬ. ಹೆಮ್ಮೆಯ ಕನ್ನಡಿಗರಾದ ಅರ್ಜುನ್ ಸರ್ಜಾ ಅವರು ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲೆಡೆ ಚಿರಪರಿಚಿತರಾದ ವ್ಯಕ್ತಿ. ಇತ್ತೀಚೆಗೆ ಇವರು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ ಕರ್ಣನ ಪಾತ್ರ ಮರೆಯಲಸಾಧ್ಯ. ಚಿಕ್ಕ ವಯಸ್ಸಿನಿಂದಲೇ ಬಾಲ ನಟರಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ಅವರು ಬಾಲ್ಯದಲ್ಲೇ ವ್ಯಾಯಾಮ, ಕರಾಟೆ ಇಂದಾಗಿ ಬಹಳ ಖ್ಯಾತಿ ಪಡೆದಿದ್ದರು. ನಂತರ ನಾಯಕನಟರಾದ ಅರ್ಜುನ್ ಸರ್ಜಾ, ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟರಾಗಿ ಗುರುತಿಸಿಕೊಂಡಿದ್ದಾರೆ.

ನಿನ್ನೆ ಅರ್ಜುನ್ ಸರ್ಜಾ ಅವರಿಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಿನ್ನೆಯ ವಿಶೇಷವಾದ ದಿನದಂದು ಅರ್ಜುನ್ ಸರ್ಜಾ ಅವರಿಗೆ ಹಲವಾರು ಸೆಲೆಬ್ರಿಟಿಗಳು ಸಹಸ್ರಾರು ಜನರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದರೆ ಅರ್ಜುನ್ ಸರ್ಜಾ ಅವರು ಮಾತ್ರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ. ಚಿರು ರನ್ನು ನೆನೆದು ಪೋಸ್ಟ್ ಮಾಡಿರುವ ಅರ್ಜುನ್ ಸರ್ಜಾ, “ನನ್ನ ಮೆಚ್ಚಿನ ಹುಡುಗನನ್ನು ಇಂದು ಮಿಸ್ ಮಾಡಿಕೊಳ್ಳುತ್ತಿದ್ದೇನೆ.. ನಿನ್ನಿಂದ ಬರುತ್ತಿದ್ದ ಹುಟ್ಟುಹಬ್ಬದ ಶುಭಾಶಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಚಿರು ಮಗನೇ..” ಎಂದು ಪೋಸ್ಟ್ ಮಾಡಿ ಚಿರು ಜೊತೆ ಇರುವ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ ಅರ್ಜುನ್ ಸರ್ಜಾ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಒಂದು ಫೋಟೋದಲ್ಲಿ ಚಿರು ಜೊತೆ ನಿಂತಿದ್ದಾರೆ ಮತ್ತೊಂದು ಫೋಟೋದಲ್ಲಿ ಚಿರುಗೆ ತಾವೇ ಮೇಕಪ್ ಮಾಡುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಲಾಕ್ ಡೌನ್ ಸಮಯದಲ್ಲಿ ಅತ್ಯಂತ ಖುಷಿಯಿಂದ ಮನೆಯವರ ಜೊತೆ ಆಟವಾಡುತ್ತಾ ಕಾಲಕಳೆಯುತ್ತಿದ್ದ ಚಿರು, ದಿಢೀರ್ ಎಂದು ಬಂದ ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದರು. ಸುಂದರವಾದ ಕೂಡು ಕುಟುಂಬವನ್ನು ಬಿಟ್ಟು ಹೋದರು ಚಿರು. ಆದರೆ ಇಂದಿಗೂ ಸಹ ಮನೆಯವರು, ಚಿರು ನೆನಪಿನಲ್ಲೆ ಇದ್ದಾರೆ.ನಿನ್ನೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಹುಟ್ಟುಹಬ್ಬ. ಹೆಮ್ಮೆಯ ಕನ್ನಡಿಗರಾದ ಅರ್ಜುನ್ ಸರ್ಜಾ ಅವರು ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲೆಡೆ ಚಿರಪರಿಚಿತರಾದ ವ್ಯಕ್ತಿ. ಇತ್ತೀಚೆಗೆ ಇವರು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ ಕರ್ಣನ ಪಾತ್ರ ಮರೆಯಲಸಾಧ್ಯ. ಚಿಕ್ಕ ವಯಸ್ಸಿನಿಂದಲೇ ಬಾಲ ನಟರಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ಅವರು ಬಾಲ್ಯದಲ್ಲೇ ವ್ಯಾಯಾಮ, ಕರಾಟೆ ಇಂದಾಗಿ ಬಹಳ ಖ್ಯಾತಿ ಪಡೆದಿದ್ದರು. ನಂತರ ನಾಯಕನಟರಾದ ಅರ್ಜುನ್ ಸರ್ಜಾ, ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟರಾಗಿ ಗುರುತಿಸಿಕೊಂಡಿದ್ದಾರೆ.

Trending

To Top