Cinema

ಚಿರು ಆ#ತ್ಮದ ಜೊತೆ ಮಾತಾಡಿದ ಭೂಪ! ಇವನ್ನೆಲ್ಲ ನಂಬಬಹುದಾ? ವಿಡಿಯೋ ನೋಡಿ

ವಿದೇಶಿ ಪ್ಯಾರಾನಾರ್ಮಲ್ ತಜ್ಞ ಸ್ಟೀವ್ ಹಾಫ್ ಅವರ ಇತ್ತೀಚಿನ ವಿಡಿಯೋಗಳು ಭಾರತೀಯರ ಕುತೂಹಲ ಕೆರಳಿಸಿದೆ. ಕೆಲ ದಿನಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಅತ್ಮದ ಜೊತೆ ಮಾತನಾಡಿರುವುದಾಗಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಒಂದು ವಾರದ ಹಿಂದೆ ಚಿರಂಜೀವಿ ಸರ್ಜಾ ಅವರ ಅತ್ಮದ ಜೊತೆ ಮಾತನಾಡಿರುವುದಾಗಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಜೂನ್ 7 ರಂದು ಹೃದ#ಘಾತದಿಂದಾಗಿ ಅಗಲಿದರು ಯುವಸಾಮ್ರಾಟ್ ಚಿರಂಜೀವಿ ಸರ್ಜಾ. ಇವರ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿದಿತ್ತು. ಇಂದಿಗೂ ಸಹ ಇವರ ಅಗಲಿಕೆಯ ನೋವಿನಿಂದ ಹೊರಬರಲು ಕಷ್ಟಪಡುತ್ತಿದ್ದಾರೆ ಅಭಿಮಾನಿಗಳು ಮತ್ತು ಅವರ ಕುಟುಂಬದವರು. ಇಂತಹ ಸಮಯದಲ್ಲಿ ಸ್ಟೀವ್ ಹಾಫ್ ಅವರು ಅಪ್ಲೋಡ್ ಮಾಡಿರುವ ಈ ವಿಡಿಯೋ ನೆಟ್ಟಿಗರ ಕುತೂಹಲ ಹೆಚ್ಚಿಸಿದೆ. ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ನೋಡಿ
ತಾವು ಚಿರಂಜೀವಿ ಸರ್ಜಾ ಅವರ ಅತ್ಮದ ಜೊತೆ ಮಾತನಾಡಿದ್ದಾರೆ ಎಂದು ಹೇಳಿಕೊಂಡಿರುವ ವಿಡಿಯೋ ಗೆ “ಚಿರಂಜೀವಿ ಸರ್ಜಾ ಸೆಲೆಬ್ರಿಟಿ ಘೋಸ್ಟ್ ಬಾಕ್ಸ್ ಇಂಟರ್​ವ್ಯೂವ್​ ಇವಿಪಿ” ಎಂದು ಶೀರ್ಷಿಕೆ ನೀಡಿದ್ದಾರೆ ಸ್ಟೀವ್ ಹಾಫ್. ಇವರು ಚಿರು ಅವರ ಅತ್ಮದ ಜೊತೆ ಮಾತುಕತೆ ನಡೆಸಿರುವುದೋ ನಿಜವೋ ಸುಳ್ಳೋ ಎಂಬುದು ಎಲ್ಲರಲ್ಲೂ ಗೊಂದಲ ಸೃಷ್ಟಿಸಿದೆ.ಆದರೆ ಈ ವಿಡಿಯೋ ಭಾರತೀಯರಲ್ಲಿ ಸಂಚಲನ ಮೂಡಿಸಿದೆ. ವಿಡಿಯೋ ಆರಂಭದಲ್ಲಿ ಚಿರು ಅವರ ಜನ್ಮ ದಿನ ಹಾಗೂ ಅವರು ಅಗಲಿಕೆಯ ದಿನವನ್ನು ಹೇಳುತ್ತಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
ನಂತರ, ನಿಮ್ಮ ಅಭಿಮಾನಿಗಳಿಗೆ ಏನಾದರೂ ಸಂದೇಶ ನೀಡುತ್ತೀರಾ ಎಂದು ಕೇಳುತ್ತಾರೆ.. ಆಗ ಕೆಲವೊಂದು ಸಲ ಬೀಪ್ ಆಗುತ್ತದೆ ಮತ್ತು ಸಿಗ್ನಲ್ ನಲ್ಲಿ ಡಿಸ್ಟರ್ಬೆನ್ಸ್ ಆಗುತ್ತದೆ. ಅದಾದ ನಂತರ 2018ರಲ್ಲಿ ಮೇಘನಾರನ್ನು ಮದುವೆಯಾಗಿದ್ದಿರಿ ಅವರಿಗೆ ಏನಾದರೂ ಸಂದೇಶ ನೀಡುತ್ತೀರಾ ಎಂದು ಕೇಳಲಾಗುತ್ತದೆ..
ಮತ್ತೊಮ್ಮೆ, ನಿಮ್ಮ ತಾತಾ ಶಕ್ತಿ ಪ್ರಸಾದ್ ಅವರು ಅವರೊಂದಿಗೆ ನೀವು ಸೇರಿಕೊಂಡಿದ್ದೀರಾ ಎಂದು ಕೇಳಲಾಗುತ್ತದೆ. ಆಗಲೂ ಸಹ ಬೀಪ್ ಹಾಗೂ ಡಿಸ್ಟರ್ಬೆನ್ಸ್ ಕೇಳುತ್ತದೆ. ಸ್ಟೀವ್ ಹಾಫ್ ಹೇಳುವ ಪ್ರಕಾರ ಇದೇ ಅವರ ಸನ್ನೆ ಅಂತೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಈ ವಿಡಿಯೋಗೆ ಎಲ್ಲರಿಂದ ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಅಗಲಿಕೆ ಬಾಲಿವುಡ್ ಅಂಗಳವನ್ನೇ ಡಿಸ್ಟರ್ಬ್ ಮಾಡಿದೆ. ಇಂದಿಗೂ ಸಹ ಸುಶಾಂತ್ ಅವರ ಸುತ್ತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಕೇಸ್ ಅನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸುಶಾಂತ್ ಅವರ ಅತ್ಮದ ಜೊತೆ ಮಾತನಾಡಿ ಅವರ ಅಗಲಿಕೆಯ ಹಿಂದಿನ ಸತ್ಯವನ್ನು ತಿಳಿದುಕೊಳ್ಳುವುದಾಗಿ ಸ್ಟೀವ್ ಹಾಫ್ ಹೇಳಿದ್ದರು.

Trending

To Top