Cinema

ಚಿರು ಮತ್ತೆ ಉದಯಿಸುತ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್! ಏನು ನೋಡಿ

ಕಳೆದ ಒಂದೆರಡು ದಿನಗಳ ಹಿಂದೆ ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ ರಾಜ್ ಅವರಿಗೆ ಸೀ’ಮಂತ ಶಾಸ್ತ್ರ ನಡೆಯಿತು. ದೈಹಿಕವಾಗಿ ಚಿರು ಇಲ್ಲದಿದ್ದರೂ, ಚಿರು ಇದ್ದಾರೆ ಎಂಬ ಭಾವನೆಯಲ್ಲಿ ಚಿರು ಅವರ ದೊಡ್ಡ ಪೋಸ್ಟರ್ ಅನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಶಾಸ್ತ್ರಗಳನ್ನು ಮಾಡಿಸಿಕೊಂಡರು ಮೇಘನಾ. ಮೇಘನಾರ ಸೀಮಂತ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಅವರ ನೇತೃತ್ವದಲ್ಲಿ ನಡೆಯಿತು. ಬಹಳ ಆಪ್ತರು ಹಾಗೂ ಕೆಲವೇ ಕೆಲವು ಕುಟುಂಬಸ್ಥರ ನಡುವೆ ಸೀ’ಮಂತ ಶಾಸ್ತ್ರ ನಡೆಯಿತು. ಚಿರು ತಮ್ಮ, ಅತ್ತಿಗೆಯ ಪ್ರೀತಿಯ ಮೈದುನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಮೇಘನಾರ ಸೀ’ಮಂತ ಶಾಸ್ತ್ರದಲ್ಲಿ ಪಾಲ್ಗೊಂಡು ಮೇಘನಾರ ನಗುವಿಗೆ ಕಾರಣವಾದರು. ಮೇಘನಾರ ಸೀಮಂತ ಎರಡು ನಡೆದಿದ್ದು, ಮೇಘನಾರ ಸ್ನೇಹಿತರೆಲ್ಲರೂ ಸಹ ಮಾಡರ್ನ್ ಆಗಿ ಸಂಭ್ರಮ ಆಚರಿಸಿ ಚಿರುವನ್ನು ಜೀವಂತವಾಗಿರಿಸಿದರು.

ಸೀಮಂತ ಶಾಸ್ತ್ರದ ಸುದ್ದಿಯೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಇದೀಗ ಚಿರು ವಿಷಯದಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಚಿರು ಅಭಿನಯದ ಕೊನೆಯ ಸಿನಿಮಾ ಶಿವಾರ್ಜುನ ಸಿನಿಮಾ ಆಕ್ಟೊಬರ್ 16ರಂದು ಮತ್ತೊಮ್ಮೆ ಬಿಡುಗಡೆಯಾಗಲಿದೆ. ಲಾಕ್ ಡೌನ್ ಇಂದಾಗಿ ದೀರ್ಘ ಕಾಲದಿಂದ ಚಿತ್ರಮಂದಿರಗಳು ಬಂದ್ ಆಗಿದ್ದವು, ಇದೀಗ ಚಿತ್ರಮಂದಿರಗಳನ್ನು ತೆರೆಯಲು ಆದೇಶ ನೀಡಲಾಗಿದ್ದು, ಶಿವಾರ್ಜುನ ಸಿನಿಮಾ ಮರುಬಿಡುಗಡೆಯಾಗುತ್ತಿದೆ.

ಶಿವಾರ್ಜುನ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲು ಮತ್ತೊಂದು ವಿಶೇಷವಾದ ಕಾರಣ ಏನೆಂದರೆ ಆಕ್ಟೊಬರ್ 17ರಂದು ಚಿರಂಜೀವಿ ಸರ್ಜಾ ಅವರ ಹು’ಟ್ಟುಹಬ್ಬ. ಹಾಗಾಗಿ ಶಿವಾರ್ಜುನ ಸಿನಿಮಾವನ್ನು ಮರುಬಿಡುಗದೆ ಮಾಡಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮೇಘನಾ, “ಮತ್ತೆ ಉದಯಿಸುತ್ತಿದ್ದಾರೆ.. ಚಿರಂಜೀವಿ ಎನ್ನುವ ಹೆಸರಿಗೆ ಅರ್ಥ ನೀಡುತ್ತಿದ್ದಾರೆ. ಆಕ್ಟೊಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ..” ಎಂದು ಪೋಸ್ಟ್ ಮಾಡಿದ್ದಾರೆ ಮೇಘನಾ ರಾಜ್.

ಶಿವಾರ್ಜುನ ಸಿನಿಮಾಗಿಂತಲೂ ಮೊದಲು, “ಸಿಂಗ” ಹಾಗೂ “ಖಾಕಿ” ಸಿನಿಮಾ ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದರು ಚಿರಂಜೀವಿ ಸರ್ಜಾ. ಲಾಕ್ ಡೌನ್ ಶುರುವಾಗುವ ಒಂದೆರಡು ದಿನಗಳ ಮೊದಲು ಬಿಡುಗಡೆಯಾಗಿದ್ದ ಶಿವಾರ್ಜುನ ಸಿನಿಮಾವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದರು. ಹಾಗೂ ಶಿವಾರ್ಜುನ್ ನಿರ್ಮಾಣ ಮಾಡಿದ್ದರು. ಶಿವಾರ್ಜುನ ಒಂದು ಪಕ್ಕಾ ಕಮರ್ಷಿಯಲ್ ಎಂಟರ್ಟ್ರೇನ್ ಸಿನಿಮಾ ಆಗಿದ್ದು, ಕಾಮಿಡಿ, ಫ್ಯಾಮಿಲಿ ಡ್ರಾ’ಮಾ, ಎಮೋ’ಷನ್ಸ್ ಎಲ್ಲಾ ಅಂಶಗಳು ಶಿವಾರ್ಜುನದಲ್ಲಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಕಲಾವಿದರ ದಂಡೇ ಶಿವಾರ್ಜುನದಲ್ಲಿದೆ.

Trending

To Top