Actors

ಅಪ್ಪುವನ್ನು ವೇದಿಕೆ ಮೇಲೆ ನೆನೆದು ಭಾವುಕರಾದ ಮೆಗಾಸ್ಟಾರ್

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಕರುನಾಡಿಗೆ ನುಂಗಲಾರದ ತುತ್ತಾಗಿದೆ. ಅಪ್ಪು ನಮ್ಮನ್ನು ಅಗಲಿ 20 ದಿನಗಳು ಕಳೆದಿದ್ದರೂ ಅವರ ನೆನಪುಗಳು ಕಾಡುತ್ತಿವೆ. ಅರಸನನ್ನು ಕಳೆದುಕೊಂಡ ನೋವು ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನೋವುಂಟು ಮಾಡಿದೆ. ಅದೇ ರೀತಿ ಅಣ್ಣವರ ಕುಟುಂಬದ ಜೊತೆ ಬಾವನಾತ್ಮಕ ಬಾಂಧವ್ಯ ಹೊಂದಿರುವ ಮೆಗಾ ಸ್ಟಾರ್ ಚಿರಂಜೀವಿ ಕೂಡ ಅಪ್ಪು ಕನವರಿಕೆಯಲ್ಲೇ ಇದ್ದಾರೆ.

ಜೊತೆಗೆ ಅಪ್ಪು ಕಳೆದುಕೊಂಡಿರುವ ನೋವನ್ನು ಒಂದು ಸಂದೇಶದ ಮೂಲಕ ಅಂಚಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆ ಬೇಜಾವಾಬ್ದಾರಿ ಬದುಕಿನ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ಮೇಘಾ ಸ್ಟಾರ್ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಪುನೀತ್ ನಿಧನದ ಬಗ್ಗೆ ಮಾತನಾಡಿ ಅಣ್ಣಾವ್ರ ಕುಟುಂಬದ ಹೃದ್ರೋಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೊಡ್ದ್ಮನೆಯ ಬಗ್ಗೆ ಅಪಾರ ಗೌರವ ಪ್ರೀತಿ ಹೊಂದಿರುವ ಮೇಘಾ ಸ್ಟಾರ್ ಚಿರಂಜೀವಿ.

ಅಣ್ಣಾವ್ರ ಕುಟುಂಬಕ್ಕೆ ಕಾಡುತ್ತಿರುವ ಹೃದಯದ ಸಂಬಂಧಿ ಕಾಯಿಲೆಯ ಬಗ್ಗೆ ತುಂಬಾ ನೋವಿನಿಂದಲೇ ಪ್ರಸ್ತಾಪ ಮಾಡಿದ್ದಾರೆ. ಅಣ್ಣಾವ್ರು ಹೃದಯ ಸಂಬಂಧಿ ಕಾಯಿಲೆಯಿಂದಲೇ ನಮ್ಮನ್ನೆಲ್ಲಾ ಅಗಲಿದರು. ರಾಜ ಕುಮಾರ್ ಅವರ ದೊಡ್ಡ ಮಗ ಶಿವರಾಜ್ ಕುಮಾರ್ ಅವರು ಸಹ ಹೃದಯ ಸಂಬಂಧಿ ಕಾಯಿಲೆಯಿಂದಲೇ ಬಳಲುತ್ತಿದ್ದರು. ಸದ್ಯ ಇದೀಗ ಹುಷಾರಾಗಿದ್ದಾರೆ. ರಾಜ್ ಕುಮಾರ್ ಅವರ ಎರಡನೇ ಮಗ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಮತ್ತು ಬ್ರೇನ್ ಸ್ಟ್ರೋಕ್ ಇಂದ ಬಳಲುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ ಮೆಗಾ ಸ್ಟಾರ್ ಚಿರಂಜೀವಿ.

Trending

To Top