Film News

ಆಚಾರ್ಯ ಚಿತ್ರದ ಟೀಸರ್ ರಿಲೀಸ್

ಹೈದರಾಬಾದ್: ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿನ ಹಲವು ದೃಶ್ಯಗಳು ಚಿತ್ರ ಯಾವ ರೀತಿಯಲ್ಲಿರಲಿದೆ ಎಂಬ ಕುತೂಹಲ ಹೆಚ್ಚಿಸಿದೆ. ಮೇ 13 ರಂದು ಸಿನೆಮಾ ಅದ್ದೂರಿಯಾಗಿ ತೆರೆಮೇಲೆ ಪ್ರದರ್ಶನವಾಗಲಿದೆ.

ಆಚಾರ್ಯ ಚಿತ್ರವನ್ನು ತೆರೆಮೇಲೆ ಕಾಣಲು ಚಿರು ಅಭಿಮಾನಿಗಳು ಸೇರಿದಂತೆ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದು, ಇದೀಗ ಟೀಸರ್ ಮೂಲಕ ಕಾಯುವಿಕೆಗೆ ಮತಷ್ಟು ಹೈಪ್ ಕ್ರಿಯೇಟ್ ಮಾಡಿದ ಹಾಗಿದೆ. ಆಚಾರ್ಯ ಚಿತ್ರದ ಟೀಸರ್ ನ ಮತ್ತೊಂದು ವಿಶೇಷತೆ ಎಂದರೇ ಹಿನ್ನೆಲೆಯಲ್ಲಿ ಕೇಳಿಸುವ ಧ್ವನಿ ಮೆಗಾಸ್ಟಾರ್ ಚಿರಂಜೀವಿ ರವರ ಮಗ ರಾಮಚರಣ್ ತೇಜ್ ರವರದ್ದು. ಇನ್ನೂ ಚಿರು ಎಂಟ್ರಿ ಸೀನ್, ಪವರ್‌ಪುಲ್ ಆಕ್ಷನ್ ದೃಶ್ಯಗಳ ಜೊತೆಗೆ ಟೀಸರ್ ನಲ್ಲಿ ಕಾಣಿಸಿಕೊಳ್ಳುವಂತಹ ಒಂದೊಂದು ದೃಶ್ಯ ಸಹ ಅಭಿಮಾನಿಗಳ ಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೇ ಟೀಸರ್ ನಲ್ಲಿನ ಚಿರಂಜೀವಿ ಡೈಲಾಗ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.

ಇನ್ನೂ ಈ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ೨ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಚಿತ್ರಕ್ಕೆ ಸಂಗೀತ ನಿದೇಶನ ಮಾಡಿದ ಮಣಿಶರ್ಮಾ ರವರ ಸಂಗೀತವೂ ಸಹ ಟೀಸರ್ ನಲ್ಲಿ ಪ್ರತಿಧ್ವನಿಸುತ್ತಿದೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರಾಮ್ ಚರಣ್ ತೇಜ್ ಹಾಗೂ ನಿರಂಜನ್ ರೆಡ್ಡಿ ಬಂಡವಾಳ ಹಾಕಿದ್ದಾರೆ. ಇನ್ನೂ ಈ ಸಿನೆಮಾ ಬೇಸಿಗೆ ಕಾಲದ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳುಲಾಗುತ್ತಿದ್ದು, ಮೇ 13 ರಂದು ಸಿನೆಮಾ ಅದ್ದೂರಿಯಾಗಿ ತೆರೆಮೇಲೆ ಪ್ರದರ್ಶನವಾಗಲಿದೆ.

Trending

To Top