ಎಲ್ಲಾ ರಂಗಗಳಲ್ಲೂ ಇರುವಂತೆ ಸಿನಿರಂಗದಲ್ಲೂ ಸಹ ರಾಜಕೀಯ, ಕುತಂತ್ರಗಳು ಇರುತ್ತವೆ, ಒಬ್ಬರು ಬೆಳೆಯುತ್ತಿದ್ದರೇ, ಅವರನ್ನು ಯಾವ ರೀತಿಯಲ್ಲಿ ಕೆಳಗೆ ತಳ್ಳಬೇಕು ಎಂದು ಕಾಯುತ್ತಿರುವವರು ತುಂಬಾನೆ ಇರುತ್ತಾರೆ. ಆದರೆ ಸಿನಿರಂಗದಲ್ಲಿ ಇದು ದೊಡ್ಡ ಮಟ್ಟದಲ್ಲೇ ಇರುತ್ತದೆ. ನಟ ನಟಿಯರ ನಡುವೆ ಅನಾರೋಗ್ಯಕರವಾದ ಪೈಪೋಟಿಗಳು ಸಹ ನಡೆಯುತ್ತಿರುತ್ತವೆ. ಇದೇ ಮಾದರಿಯಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೂ ಸಹ ನಡೆದಿದ್ದು, ಆತನ ಮೇಲೆ ವಿಷ ಪ್ರಯೋಗ ಸಹ ಮಾಡಲಾಗಿತ್ತಂತೆ. ಈ ಹೇಳಿಕೆಗಳನ್ನು ನೀಡಿ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಗಿದ್ದಾರೆ ಹಿರಿಯ ನಟ ಮುರಳಿ ಮೋಹನ್.
ನಟ ಚಿರಂಜೀವಿಯವರ ಮೇಲೆ 80 ದಶಕದಲ್ಲಿ ವಿಷ ಪ್ರಯೋಗ ಮಾಡಿದ್ದರಂತೆ. ಚಿರಂಜೀವಿಯವರನ್ನು ಸಾಯಿಸಬೇಕೆಂದು ದೊಡ್ಡ ಪ್ರಯತ್ನವೇ ನಡೆದಿದ್ದತಂತೆ. ಆದರೆ ಚಿರು ಪ್ರಾಣಾಪಾಯದಿಂದ ಹೊರಬಂದಿದ್ದರಂತೆ. ಅಂದು ಸಂಚಲನಾತ್ಮಕವಾಗಿದ್ದ ಒಂದು ಸಂಘಟನೆ ಅಕ್ಷರಶಃ ನಿಜ ಎಂದು ಹಿರಿಯ ನಟ ಮುರಳಿ ಮೋಹನ್ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮುರಳಿ ಮೋಹನ್ ಚಿರು ಮೇಲೆ ನಡೆದಂತಹ ಘಟನೆಯ ಬಗ್ಗೆ ಪೂರ್ಣವಾಗಿ ವಿವರಣೆ ನೀಡಿದ್ದಾರೆ. 1988ರಲ್ಲಿ ನಿರ್ದೇಶಕ ಕೋದಂಡರಾಮಿಸ್ವಾಮಿ ಸಾರಥ್ಯದಲ್ಲಿ ಮರಣ ಮೃದಂಗಂ ಎಂಬ ಸಿನೆಮಾದ ಶೂಟಿಂಗ್ ನಡೆಯುತ್ತಿತ್ತು. ಚೆನೈನಲ್ಲಿ ಈ ಶೂಟಿಂಗ್ ನಡೆಯುತ್ತಿತ್ತು. ಪ್ರತಿನಿತ್ಯ ಚಿರಂಜೀವಿ ಆತನ ಅಭಿಮಾನಿಗಳನ್ನು ಶೂಟಿಂಗ್ ಬಿಡುವಿನಲ್ಲಿ ಬಂದು ಮಾತನಾಡಿ ಹೋಗುತ್ತಿದ್ದರು. ಇದೇ ಸಮಯದಲ್ಲಿ ಒಬ್ಬ ಅಜ್ಞಾತ ವ್ಯಕ್ತಿ ನನ್ನ ಹುಟ್ಟುಹಬ್ಬ ನೀವು ಕೇಕ್ ತಿನ್ನಬೇಕು ಎಂದು ಚಿರುರವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಅಭಿಮಾನಿಯ ಆಸೆಯಂತೆ ಚಿರಂಜೀವಿ ಕೇಕ್ ತಿಂದರು. ಅಲ್ಲಿಂದ ಮನೆಗೆ ವಾಪಸ್ಸಾದರು. ಕೇಕ್ ತಿಂದ ಬಳಿಕ ಚಿರುರವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗುತ್ತಿದ್ದನ್ನು ಸೆಟ್ ನಲ್ಲಿರುವವರು ಗಮನಿಸಿದ್ದರಂತೆ. ಚಿರು ಸಹ ಆಸ್ಪತ್ರೆಗೆ ಹೋದರು.
ಬಳಿಕ ಚಿರಜೀವಿ ಮೇಲೆ ವಿಷ ಪ್ರಯೋಗ ಆಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು. ಎರಡು ದಿನಗಳ ಬಳಿಕ ಚಿರಂಜೀವಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಚಿರಂಜೀವಿ ಬೆಳೆಯುತ್ತಿರುವುದನ್ನು ಸಹಿಸಲಾರದೇ ಯಾರೋ ಆತನ ಮೇಲೆ ವಿಷ ಪ್ರಯೋಗ ಮಾಡಿದ್ದರು ಎಂದು ಮುರಳಿ ಮೋಹನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕಾರ್ಯಕ್ಕೆ ಪ್ರಯತ್ನಿಸಿದ್ದಾದರು ಯಾರು ಎಂಬುದು ಇಂದಿಗೂ ತಿಳಿಯದು. ಜೊತೆಗೆ ಕೇಕ್ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಹಿಡಿದುಕೊಂಡರೇ, ಅಥವಾ ಚಿರಂಜೀವಿ ಕೇಸ್ ಏನಾದರೂ ಕೊಟ್ಟರೇ ಎಂಬ ವಿಚಾರ ಸಹ ತಿಳಿಯದು. ಟಾಲಿವುಡ್ ನಲ್ಲಿ ತಿಳಿದ ಈ ವಿಚಾರ ಜನಗಳಿಗೆ ತಲುಪಲಿಲ್ಲ. ಯಾಕೆಂದರೇ ಅಂದು ಕೇವಲ ಒಂದೆರಡು ಪೇಪರ್ ಗಳಲ್ಲಿ ಮಾತ್ರ ಈ ಸುದ್ದಿ ಪ್ರಸಾರವಾಗಿತ್ತು ಎನ್ನಲಾಗಿದೆ.
ಸುಮಾರು ವರ್ಷಗಳ ಕಾಲ ಚಿರಂಜೀವಿ ಅನೇಕ ಸೂಪರ್ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡಿದ್ದರು. ಅದರಲ್ಲೂ ಆತನ 1983ರಲ್ಲಿ ತೆರೆಕಂಡ ಖೈದಿ ಎಂಬ ಸಿನೆಮಾ ಚಿರಂಜೀವಿಯವರಿಗೆ ಬಿಗ್ ಬ್ರೇಕ್ ದೊರೆತಿದೆ. ಆ ಬಳಿಕ ನಿರ್ದೇಶಕ ಕೊಂಡರಾಮಿರೆಡ್ಡಿ ನಿರ್ದೇಶನದಲ್ಲಿ ಬಂದ ಗೂಂಡಾ, ರುಸ್ತುಂ, ಚಾಲೆಂಜ್, ವಿಜೇತ, ರಾಕ್ಷಸುಡು ಮೊದಲಾದ ಸಿನೆಮಾಗಳು ಅಂದಿನ ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಹೊಡೆದವು.
