News

ತಮ್ಮ ಜೀವನದಲ್ಲಿ ನಡೆದ ಒಂದು ಕಹಿ ಸತ್ಯ ವನ್ನು ಬಿಚ್ಚಿಟ್ಟ ಬಿಗ್ ಬಾಸ್ ಚಿನ್ನು ಕವಿತಾ ಗೌಡ! ಕಣ್ಣೀರಿಟ್ಟ ಚಿನ್ನು

kavita

ನಮ್ಮ ಕನ್ನಡದ ಬಿಗ್ ಬಾಸ್ 6 ನೇ ಸೀಸನ್ ಸದ್ಯ ನಡೆಯುತ್ತಿದೆ. ಈ ಸೀಸನ್ ನಲ್ಲಿ ಮುದ್ದು ಮುಖದ ಚೆಲುವೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ ಗೌಡ ಅಲಿಯಾಸ್ ಚಿನ್ನು. ಕವಿತಾ ಗೌಡ ಅವರು ಚಿತ್ರ ರಂಗದಲ್ಲಿ ಯಾವುದೇ ಒಂದು ಸಪೋರ್ಟ್ ಇಲ್ಲದೆ ಇಲ್ಲಿಯ ವರೆಗೆ ಬೆಳೆದಿದ್ದಾರೆ. ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಕನ್ನಡ ಹಾಗು ತಮಿಳು ಭಾಷೆಯಲ್ಲಿ ಧಾರಾವಾಹಿಗಳನ್ನು ಮಾಡಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕವಿತಾ ಗೌಡ ಅವರು ಬೆಳೆದಿದ್ದೆಲ್ಲ ತಮ್ಮ ತಾಯಿ ಹಾಗು ತಂಗಿಯ ಜೊತೆಗೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಮನೆಯ ಎಲ್ಲಾ ಜವಾಬ್ದಾರಿಯನ್ನು ಕವಿತಾ ಗೌಡ ಅವರು ತಾವೆ ನಿರ್ವಹಿಸಿದರು.
ಈಗ ವಿಷ್ಯ ಏನಪ್ಪಾ ಅಂದ್ರೆ, ಬಿಗ್ ಬಾಸ್ ಕನ್ನಡದ ಸೀಸನ್ 6 ರ ಒಂದು ಎಪಿಸೋಡ್ ನಲ್ಲಿ ಕವಿತಾ ಗೌಡ ಅವರು ತಮ್ಮ ಜೀವನದಲ್ಲಿ ಆದ ಒಂದು ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಚಿತ್ರ ರಂಗದಲ್ಲಿ ಅವಕಾಶ ಸಿಗಬೇಕು ಅಂದ್ರೆ ಕಾಂಪ್ರೊಮೈಸ್ ಮಾಡ್ಕೋ ಬೇಕು ಅನ್ನುವುದು ಎಲ್ಲರಿಗೆ ತಿಳಿದಿರೋ ವಿಷ್ಯ. ಅಂತಹದ್ದೇ ಒಂದು ಕಹಿ ಘಟನೆ ಕವಿತಾ ಗೌಡ ಅವರ ಜೀವನದಲ್ಲಿ ಕೂಡ ನಡೆದಿದೆ. ಕವಿತಾ ಗೌಡ ಅವರು ಹೇಳುವ ಪ್ರಕಾರ ಅವರಿಗೆ ಈ ರೀತಿಯ ಕಹಿ ಘಟನೆಗಳು ಜೀವನದಲ್ಲಿ ಎರಡು ಭಾರಿ ನಡೆದಿದೆ ಅಂತೆ. ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಯಾರೋ ಒಬ್ಬ ಪ್ರೊಡ್ಯೂಸರ್ ಹಾಗು ಮ್ಯಾನೇಜರ್ ಬಂದು ನಮ್ಮ ಹೀರೋ ನಿಮ್ಮನ್ನೇ ಹೆರೋಯಿನ್ ಆಗಿ ಕೇಳುತ್ತಿದ್ದಾರೆ ಆದರೆ ನಿಮ್ಮಿಂದ ಬೇರೆ ಏನೋ expect ಕೂಡ ಮಾಡ್ತಾ ಇದ್ದಾರೆ ಎಂದು ಹೇಳಿದ್ದರಂತೆ. ಅದಕ್ಕೆ ಕವಿತಾ ಗೌಡ ಅವರು ಖಡಾ ಖಂಡಿತವಾಗಿ ಇಲ್ಲ ಅಂತ ಹೇಳಿದ್ದರು.
ನೀವು ನಮ್ಮ ಸಿನಿಮಾದಲ್ಲಿ ಆಕ್ಟಿಂಗ್ ಮಾಡಿದರೆ ನಿಮಗೆ ಎಷ್ಟು ದುಡ್ಡು ಬೇಕಾದ್ರು ಕೊಡುತ್ತಾರೆ ಎಂದು ಹೇಳಿದ್ದರಂತೆ. ಎರಡನೇ ಭಾರಿ ಕವಿತಾ ಗೌಡ ಅವರು ಒಂದು ಹೊಸ ಸಿನಿಮಾದ ಕಥೆ ಕೇಳಲೆಂದು ಒಂದು ಖಾಸಗಿ ಹೋಟೆಲ್ ಗೆ ಹೋಗಿದ್ದರಂತೆ. ಅಲ್ಲಿ ಕೂಡ ನಿರ್ದೇಶಕರು ಹಾಗು ನಿರ್ಮಾಪಕ ಇಂತಹ ಕಾಂಪ್ರೊಮೈಸ್ ಮಾಡ್ಕೋ ಬೇಕು ಅಂತ ಬಲವಂತ ಮಾಡಿದ್ದರಂತೆ. ಇದನ್ನೆಲ್ಲಾ ನೋಡಿ ಬೇಸತ್ತ ಕವಿತಾ ಗೌಡ ಅವರು ಈ ಸಿನೆಮಾಗಳ ಸಹವಾಸನೆ ಬೇಡ ಅಂತ ತಮ್ಮ ಧಾರಾವಾಹಿಗಳನ್ನು ಮುಂದು ವರಿಸಿದ್ದಾರೆ.
ಇನ್ನೊಂದೆಡೆ ಕವಿತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬ ಸ್ಪರ್ದಿಯಾದ ಶಶಿ ಜೊತೆ ಬಹಳ ಕ್ಲೋಸ್ ಆಗಿ ಇರುತ್ತಾರೆ. ಇದನ್ನು ನೋಡಿ ಜನ ಇವರಿಬ್ಬರ ಮಧ್ಯೆ ಏನೋ ಇದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top