Film News

‘100 ಕೋಟಿ’ ಚಿತ್ರದಲ್ಲಿ ನಟಿಸಲಿದ್ದಾರೆ ಚೇತನ್ ಕುಮಾರ್

ಬೆಂಗಳೂರು: ಸ್ಯಾಂಡಲ್ ವುಡ್ ನ ’ಆ ದಿನಗಳು’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಚೇತನ್ ಕುಮಾರ್ ಹೊಸ ಚಿತ್ರದಲ್ಲಿ ನಟಿಸಲು ಸಿದ್ದರಾಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇನ್ನೂ ಈ ಚಿತ್ರಕ್ಕೆ ‘100 Crores’ ಎಂದು ಶೀರ್ಷಿಕೆಯನ್ನಿಟ್ಟಿದ್ದು, ತೆಲುಗು ನಿರ್ದೇಶಕ ಹರೀಶ್ ಶಂಕರ್ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಇನ್ನೂ ಈ ಪೋಸ್ಟರ್ ಈಗಾಗಲೇ ಭಾರಿ ಮಟ್ಟದಲ್ಲಿ ಕುತೂಹಲ ಹೆಚ್ಚಿಸಿದೆ. ಈ ಕುರಿತು ಚೇತನ್ ಕುಮಾರ್ ರವರೇ ಸಂತಸ ವ್ಯಕ್ತಪಡಿಸಿ, ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನೂ ಈ ಚಿತ್ರ ಕ್ರೈಮ್ ಥಿಲ್ಲರ್ ಆಧಾರಿತ ಚಿತ್ರವಾಗಿದ್ದು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಕುರಿತು ಚೇತನ್ ಟ್ವೀಟ್ ಮಾಡಿದ್ದಾರೆ. ‘100 Crores’  ಚಿತ್ರ ಹೈದರಾಬಾದ್ ನಲ್ಲಿ ಚಿತ್ರೀಕರಣ ಸಾಗುತ್ತಿದ್ದು, ಮೂಲತಃ ಬರಹಗಾರರಾಗಿದ್ದ ವಿರಾಟ್ ಚಕ್ರವರ್ತಿ ಈಗ ಡೈರೆಕ್ಟರ್ ಆಗಿ ಮುಂಬಡ್ತಿ ಆಗಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಹಾಗೂ ಶ್ರೀಕಾಂತ್ ರವರು ಬಂಡವಾಳ ಹೂಡಿದ್ದು, ಪೂರ್ಣ ಸಿನೆಮಾ ತೆಲುಗು ತಂತ್ರಜ್ಞರು ಹಾಗೂ ಕಲಾವಿದರಿಂದಲೇ ನಿರ್ಮಾಣವಾಗಲಿದೆ. ಕನ್ನಡ ಭಾಷೆಯಲ್ಲೂ ಸಹ ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಚೇತನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಹ್ಯಾಪಿಡೇಸ್ ಚಿತ್ರದ ನಟ ರಾಹುಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿರಂಜೀವಿ ಸರ್ಜಾ, ಚೇತನ್ ಹಾಗೂ ಶ್ರುತಿ ಹರಿಹರನ್ ಕಾಂಬಿನೇಷನ್ ಲ್ಲಿ ಮೂಡಿಬಂದ ರಣಂ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

Trending

To Top