News

ತನ್ನ ಒಂದು ದಿನದ ಸಂಪಾದನೆಯನ್ನು ಮೃತ ಯೋಧನ ಕುಟುಂಬಕ್ಕೆ ನೀಡಿದ ಕೆಮಿಸ್ಟ್ರಿ of ಕರಿಯಪ್ಪ ಚಿತ್ರತಂಡ! ಇವರ ಕೆಲಸಕ್ಕೆ ಸಲಾಂ

chemistry-of-kariyappa-kannada

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕೆಮಿಸ್ಟ್ರಿ of ಕರಿಯಪ್ಪ ಎಂಬ ಒಂದು ಕನ್ನಡ ಚಿತ್ರ ಬಿಡುಗಡೆ ಆಗಿದೆ! ಬಿಡುಗಡೆ ಆಗಿ ಇಡೀ ಕರ್ನಾಟಕದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ಮೊನ್ನೆ ಅಷ್ಟೇ ನಮ್ಮ ಭಾರತದ CRPF ಯೋಧರಮೇಲೆ ಒಂದು ಧಾಳಿ ಆಗಿ ಸುಮಾರು 44 ಕ್ಕೂ ಹೆಚ್ಚು ವೀರ ಯೋಧರು ಮೃತಪಟ್ಟಿದ್ದಾರೆ! ಈ ಯೋಧರಲ್ಲಿ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಗುರು ಅವರು ಕೂಡ ಮೃತಪಟ್ಟಿದ್ದಾರೆ! ವಿಷ್ಯ ತಿಳಿದ ಕೆಮಿಸ್ಟ್ರಿ of ಕರಿಯಪ್ಪ ಚಿತ್ರ ತಂಡದವರು ಹಿಂದು ಮುಂದು ನೋಡದೆ, ಭಾನುವಾರದ ದಿನ ತಮ್ಮ ಚಿತ್ರ ಮಾಡಿರುವ ಅಷ್ಟೂ ಸಂಪಾದನೆಯನ್ನು ಮೃತ ಯೋಧ ಗುರು ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ! ಇಂತಹ ಅದ್ಭುತ ಕೆಲಸ ಮಾಡಿದ ಕೆಮಿಸ್ಟ್ರಿ of ಕರಿಯಪ್ಪ ಚಿತ್ರ ತಂಡ ದವರಿಗೆ ನಮ್ಮ ಕಡೆ ಇಂದ ಒಂದು ಸಲಾಂ! ಇದೆ ರೀತಿ ಹಲವಾರು ಕನ್ನಡ ಸೆಲೆಬ್ರಿಟಿಗಳು, ಕನ್ನಡ ಚಿತ್ರ ತಂಡದವರು ಇಂತಹ ಒಳ್ಳೆಯ ಕೆಲಸಗಲ್ನ್ನು ಮಾಡಬೇಕು ಎಂದು ನಮ್ಮ ಕಡೆ ಇಂದ ವಿನಂತಿ!
CHEMISTRY OF ಕರಿಯಪ್ಪ ಇತ್ತೀಚಿಗೆ ತನ್ನ ಟ್ರೇಲರ್ ಇಂದ ಬಹಳ ಸದ್ದು ಮಾಡಿತ್ತು! ಇದಲ್ಲದೆ ಈ ಚಿತ್ರದ ಟ್ರೇಲರ್ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಹಾಗು ಟ್ರೆಂಡ್ ಆಗಿತ್ತು. ಇವತ್ತು CHEMISTRY OF ಕರಿಯಪ್ಪ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. CHEMISTRY OF ಕರಿಯಪ್ಪ ಚಿತ್ರದಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ ಅವರ ಜೊತೆ ತಬಲಾ ನಾಣಿ ಹಾಗು ಸಂಜನಾ ಅವರು ನಟಿಸಿದ್ದಾರೆ. ಈ ಚಿತ್ರವನ್ನು ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ! ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಿದೆ.
ಇದೆ ಮೊದಲ ಬಾರಿಗೆ ನಟ ಚಂದನ್ ಆಚಾರ್ ಅವರು ಒಬ್ಬ ಹೀರೋ ಆಗಿ ನಟಿಸಿದ್ದಾರೆ! ಈ ಹಿಂದೆ ಸುಮಾರು 4 ಕನ್ನಡ ಚಿತ್ರ ಗಳಲ್ಲಿ ಹೀರೋ ಗೆಳೆಯನಾಗಿ ಪಾತ್ರವನ್ನು ಮಾಡಿದ್ದರು. CHEMISTRY OF ಕರಿಯಪ್ಪ ಚಿತ್ರದಲ್ಲಿ ಚಂದನ್ ಆಚಾರ್ ತಮ್ಮ ಪಾತ್ರವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ! CHEMISTRY OF ಕರಿಯಪ್ಪ ಚಿತ್ರದಲ್ಲಿ ತಬಲಾ ನಾಣಿ ಅವರು ಚಂದನ್ ಅವರ ತಂದೆಯ ಪಾತ್ರವನ್ನು ಮಾಡಿದ್ದಾರೆ! ಇವರಿಬ್ಬರ ಹಾಸ್ಯ ಜುಗಲ್ ಬಂದಿ ಯನ್ನು ನೀವು ಚಿತ್ರದುದ್ದಕ್ಕೂ ನೋಡಬಹುದು! ಇವರಿಬ್ಬರ ಹಾಸ್ಯ ದೃಶ್ಯಗಳನ್ನು ಪ್ರೇಕ್ಷಕರು ಸಕತ್ ಎಂಜಾಯ್ ಮಾಡುತ್ತಾರೆ!
CHEMISTRY OF ಕರಿಯಪ್ಪ ಚಿತ್ರದ ನಿರ್ದೇಶಕರಾದ ಕುಮಾರ್ ಅವರು ಚಿತ್ರದ ಪ್ರತಿ ಒಂದು ಫ್ರೆಮ್ ನಲ್ಲಿ ಕೂಡ ಬಹಳ ಹಾಸ್ಯವನ್ನು ಅಳವಡಿಸಿದ್ದಾರೆ. ತಬಲ ನಾಣಿ ಅವರ ಪಾತ್ರವನ್ನು ಮಾತ್ರ ನೀವು ಎಷ್ಟು ಸಲ ನೋಡಿದ್ರೂ ಬೇಜಾರ್ ಆಗುವುದಿಲ್ಲ! CHEMISTRY OF ಕರಿಯಪ್ಪ ಚಿತ್ರದ ಶುರುವಿನಿಂದ ಕೊನೆಯ ವರೆಗೆ ತಬಲಾ ನಾಣಿ ಅವರು ನಿಮ್ಮನ್ನು ಅದ್ಭುತವಾಗಿ ರಂಜಿಸುತ್ತಾರೆ! ಸದ್ಯ ಚಿತ್ರ ಇಂದು ಬಿಡುಗಡೆ ಆಗಿ ಎಲ್ಲಾರೂ ಚಿತ್ರವನ್ನು ಹಾಡಿ ಹೊಗಳುತಿದ್ದಾರೆ.
ಈ ಚಿತ್ರವನ್ನು DR.MANJUNATHA D.S ಅವರು M SIRI ಪ್ರೋಡ್ಯೂಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. CHEMISTRY OF ಕರಿಯಪ್ಪ ಚಿತ್ರದಲ್ಲಿ ARAV ರಿಷಿಕ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. Chemistry Of ಕರಿಯಪ್ಪ ಚಿತ್ರದಲ್ಲಿ ಕನ್ನಡದ ಬಹಳ ಟಾಲೆಂಟೆಡ್ ನಟ ಸುಚೇಂದ್ರ ಪ್ರಸಾದ್ ಅವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. Chemistry Of ಕರಿಯಪ್ಪ ಚಿತ್ರ ಸುಮಾರು 150 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಿದೆ . ಮತ್ತೊಂದು ವಿಶೇಷ ಏನಪ್ಪಾ ಅಂದರೆ, ಕೆಮಿಸ್ಟ್ರಿ of ಕರಿಯಪ್ಪ ಚಿತ್ರದಲ್ಲಿ ನಮ್ಮ ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಅವರು ಕೂಡ ಒಂದು ಹಾಡನ್ನು ಹಾಡಿದ್ದಾರೆ. ಒಟ್ಟಿನಲ್ಲಿ CHEMISTRY OF ಕರಿಯಪ್ಪ ಚಿತ್ರ ಒಂದೊಳ್ಳೆ ಕಮರ್ಷಿಯಲ್ entertainment ಚಿತ್ರ! ನೀವು ಚಿತ್ರವನ್ನು ನೋಡಿ 2 ಘಂಟೆಗಳ ಕಾಲ ಎಂಜಿಯ್ ಮಾಡಬಹುದು! ತಪ್ಪದೆ ಚಿತ್ರವನ್ನು ಥಿಯೇಟರ್ ಅಲ್ಲಿ ನೋಡಿರಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top