ತಿರುವನಂತಪುರಂ: ಮಾದಕ ನಟಿ ಈ ಹಿಂದಿ ನೀಲಿ ಚಿತ್ರಗಳಲ್ಲಿ ನಟಿಸಿದ್ದ ಸನ್ನಿ ಲಿಯೋನಿ ಮೇಲೆ ವಂಚನೆ ಆರೋಪವೊಂದು ಕೇರಳದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬರುವುದಾಗಿ 29 ಲಕ್ಷ ಪಡೆದು ಮೋಸ ಮಾಡಿದ್ದಾರೆ ಎಂದು ಕೇರಳದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರಂತೆ.
ಕೇರಳ ಸೇರಿದಂತೆ ವಿಶ್ವವ್ಯಾಪಿ ಸನ್ನಿ ಲಿಯೋನಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕೇರಳ ರಾಜ್ಯಕ್ಕೆ ಭೇಟಿ ನೀಡಿದಾಗ ಅಪಾರ ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಈ ಹಿನ್ನೆಲೆಯಲ್ಲಿ ಕೇರಳದ ಶಿಯಾಸ್ ಎಂಬ ವ್ಯಕ್ತಿ ಎರಡು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುವಂತೆ ಆಹ್ವಾನಿಸಿದ್ದಾರಂತೆ. ಇದಕ್ಕೆ ಸನ್ನಿ ಸಹ ಒಪ್ಪಿದ್ದು, ಸುಮಾರು 29 ಲಕ್ಷ ಪಡೆದುಕೊಂಡಿದ್ದರಂತೆ. ಆದರೆ ಹಣ ಪಡೆದು ಕಾರ್ಯಕ್ರಮಕ್ಕೆ ಸನ್ನಿ ಬಂದಿಲ್ಲ ಎಂದು ದೂರು ನೀಡಿದ್ದರಂತೆ ಶಿಯಾಸ್. ಈ ಹಿನ್ನೆಯಲ್ಲಿ ಸನ್ನಿ ಲಿಯೋನಿ ಯವರನ್ನು ಕೊಚ್ಚಿ ಕ್ರೈಂ ವಿಭಾಗದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಕುರಿತು ಸನ್ನಿ ಲಿಯೋನ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾರಿಗೂ ಮೋಸ ಮಾಡಿಲ್ಲ, ಮಾಡುವುದು ಇಲ್ಲ. ಶಿಯಾಸ್ ರವರು ನೀಡಿದ ದೂರಿನಲ್ಲಿ ಸತ್ಯಾಂಶವಿಲ್ಲ. ಶಿಯಾಸ್ ರವರು ಸುಮಾರು ಬಾರಿ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಹೇಳಿದ ಸಮಯಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದರೇ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ ಎಂದು ಉತ್ತರ ನೀಡಿದ್ದಾರಂತೆ. ಸದ್ಯ ಸನ್ನಿ ಲಿಯೋನಿ ಕೆಲವು ದಿನಗಳಿಂದ ಕೇರಳದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ.
