ಕ್ಲಬ್ ನಲ್ಲಿ ಮಗಳ ಬಾಯಿಗೆ ವೈನ್ ಸುರಿದ್ರು ಕ್ಯಾರೆಕ್ಟರ್ ಆರ್ಟಿಸ್ಟ್ ಸುರೇಖಾ ವಾಣಿ…!

ತೆಲುಗು ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿ ಪಡೆದುಕೊಂಡ ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಸಹ ಒಬ್ಬರು. ಅನೇಕ ಸಿನೆಮಾಗಳಲ್ಲಿ ಈಕೆ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಎಂತಹುದೇ ಪಾತ್ರ ನೀಡಿದರು ಆಕೆ ನಿಭಾಯಿಸಬಲ್ಲ ಕಲೆ ಹೊಂದಿದ್ದಾಳೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಟಾಪ್ ಸ್ಥಾನದಲ್ಲಿರುತ್ತಾರೆ. ಸುರೇಖಾ ತನ್ನ ಮಗಳೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಇದೀಗ ತಾಯಿ ಮಗಳು ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ನಟಿ ಸುರೇಖಾವಾಣಿ ಆಕೆಯ ಪುತ್ರಿಯೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾ ತಮ್ಮ ಮಗಳೊಂದಿಗೆ ಎಂಜಾಯ್ ಮಾಡುತ್ತಿರುವ ವಿಡಿಯೋಗಳನ್ನು ಪೊಟೊಗಳನ್ನು ಶೇರ್‍ ಮಾಡುತ್ತಿದ್ದಾರೆ. ಇನ್ನೂ ಸುರೇಖಾ ವಾಣಿಯ ಜೊತೆಗೆ ಆಕೆಯ ಪುತ್ರಿ ಸುಪ್ರಿತಾ ಸಹ ಸಿನಿ ರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ತುಂಬಾ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸುರೇಖಾ ಹಾಗೂ ಸುಪ್ರಿತಾ ವಿಶೇಷ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಇದೀಗ ಅವರು ಆ ಪಾರ್ಟಿಯಲ್ಲಿ ಮಾಡಿದ ಹಲ್ ಚಲ್ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇನ್ನೂ ಈ ಪಾರ್ಟಿಯಲ್ಲಿ ಸುರೇಖವಾಣಿ ಹಾಗೂ ಸುಪ್ರಿತಾ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಇನ್ನೂ ನಟಿ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರಿತಾ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದು ಅಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಸುಪ್ರಿತಾ ಹುಟ್ಟುಹಬ್ಬದ ನಿಮಿತ್ತ ಸುರೇಖಾ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಸುಪ್ರಿತಾ ಸ್ನೇಹಿತರೂ ಸಹ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಸುರೇಖಾ ಚಾಂಪಿಯನ್ ಬಾಟಲ್ ನಲ್ಲಿನ ವೈನ್ ತನ್ನ ಮಗಳಾದ ಸುಪ್ರಿತಾ ಬಾಯಿಗೆ ಹಾಕುತ್ತಿದ್ದಾರೆ. ಅಷ್ಟೇಅಲ್ಲದೇ ಸುರೇಖವಾಣಿ ಹಾಗೂ ಸುಪ್ರಿತಾ ಇಬ್ಬರೂ ಗ್ಲಾಮರಸ್ ಸೌಂದರ್ಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಇನ್ನೂ ಇವರಿಬ್ಬರನ್ನು ನೋಡಿದ ಅನೇಕರು ತಾಯಿ ಮಗಳು ಅಂದುಕೊಳ್ಳುವುದಿಲ್ಲ. ಬದಲಿಗೆ ಅಕ್ಕ ತಂಗಿ ಎಂದು ಹೇಳುತ್ತಾರೆ. ಸದ್ಯ ತಾಯಿ ಮಗಳು ಪಾರ್ಟಿಯಲ್ಲಿ ಮಾಡಿದ ಸದ್ದು ಜೋರಾಗಿಯೇ ಹರಿದಾಡುತ್ತಿದೆ.

ಇನ್ನೂ ಸುರೇಖಾವಾಣಿ ತನ್ನ ಮಗಳಾದ ಸುಪ್ರೀತಾರವರನ್ನು ಸಹ ಸಿನಿರಂಗಕ್ಕೆ ಪರಿಚಯ ಮಾಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿರಂಗಕ್ಕೆ ಎಂಟ್ರಿಕೊಡುವ ನಿಟ್ಟಿನಲ್ಲೇ ಸುಪ್ರಿತಾ ಸಹ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ ಸಹ ಮಾಡುತ್ತಿರುತ್ತಾರೆ. ಇನ್ನೂ ಸುರೇಖವಾಣಿ ಕಳೆದ 2004 ರಿಂದ ಸಿನಿರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.

Previous articleಥೈಸ್ ಶೋ ಮೂಲಕ ಎಲ್ಲರನ್ನು ತನ್ನತ್ತ ಸೆಳೆದ ಪೂಜಾ ಹೆಗ್ಡೆ, ವೈರಲ್ ಆದ ಥೈಸ್ ಪೊಟೋಸ್….!
Next articleರಶ್ಮಿಕಾ ಮಂದಣ್ಣಾ ಹೇಳಿದ್ರು ಇಂಟ್ರಸ್ಟಿಂಗ್ ಹೇಳಿಕೆಗಳು, ಕೆಲವೊಮ್ಮೆ ಕಂಫರ್ಟ್ ಜೋನ್ ದಾಟಿ ನಟಿಸುತ್ತಿದ್ದೇನೆ ಎಂದ ರಶ್…!