Film News

ಪಬ್ ಗಳ ವಿರುದ್ದ ಹೋರಾಟಕ್ಕಿಳಿದ ಚಂದನ್ ಶೆಟ್ಟಿ

ಬೆಂಗಳೂರು: ಕನ್ನಡ ಸಿನಿರಂಗದ ರ್‍ಯಾಪರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಪಬ್ ಗಳ ವಿರುದ್ದ ಹೋರಾಟಕ್ಕಿಳಿದಿದ್ದಾರೆ. ಬೆಂಗಳೂರಿನ ಪಬ್‌ಗಳಲ್ಲಿ ಮಾತ್ರವಲ್ಲದೇ, ಜಿಮ್, ದೊಡ್ಡ ದೊಡ್ಡ ಮಾಲ್‌ಗಳಲ್ಲೂ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಬೇಸರ ಹಾಗೂ ಆಕ್ರೋಷವನ್ನು ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿರುವ ಪಬ್, ಜಿಮ್, ಮಾಲ್‌ಗಳಲ್ಲಿ ಕನ್ನಡ ಹಾಡುಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅನೇಕ ಪಬ್‌ಗಳಲ್ಲಿ ಹಿಂದಿ, ಅರೇಬಿಕ್, ಇಂಗ್ಲೀಷ್ ಹಾಡುಗಳನ್ನು ಹಾಕುತ್ತಾರೆ. ಕನ್ನಡಿಗ ಕನ್ನಡ ಹಾಡು ಹಾಕಿ ಎಂದು ಕೇಳಿದರೇ, ಹಾಕೋದಿಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅವಾಜ್ ಹಾಕುತ್ತಾರೆ.

ಇನ್ನೂ ಇತ್ತೀಚಿಗಷ್ಟೆ ಬೆಂಗಳೂರಿನ ಪಬ್ ಒಂದರಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಚಂದನ್, ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಅವಮಾನ ಜಾಸ್ತಿಯಾಗುತ್ತಿದೆ. ಅನ್ಯ ಭಾಷಿಕರಿಂದ ಕನ್ನಡ ಭಾಷೆಯ ಮೇಲಾಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ನಿಲ್ಲಬೇಕು. ಎಲ್ಲಾ  ಪಬ್, ಮಾಲ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕಬೇಕು. ಕನ್ನಡಿಗರ ಒಗ್ಗಟ್ಟನ್ನು ತೋರಿಸುವ ಸಮಯ ಈಗ ಬಂದಿದ್ದು, ಸ್ಯಾಂಡಲ್‌ವುಡ್ ಸಿನಿರಂಗದ ನಟರು, ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ ಕಡ್ಡಾಯ ಕನ್ನಡ ನೀತಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.

Trending

To Top