BBK8

ಚಕ್ರವರ್ತಿ ಚಂದ್ರಚೂಡ್ ಅವರಿಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್ !

ಬಿಗ್ ಬಾಸ್ ಮನೆಯಲ್ಲಿ ವಾರದ ಮಧ್ಯೆ ನಡೆದ ಮಾವ ಎಂಬ ಪದ ಬಳಕೆಗೆ ಮಂಜು ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ನಡೆದ ಜಗಳದ ವಿಚಾರವಾಗಿ ಸುದೀಪ್ ಅವರ ವಾರದ ಕಥೆಯಲ್ಲಿ ದೊಡ್ಡ ಚರ್ಚೆಯೇ ನಡೆಯಿತು.ಚಂದ್ರಚೂಡ ಚಕ್ರವರ್ತಿ ಅವರು ಬಿಗ್ ಬಾಸ್ ಮನೆಗೆ ಬರುವವರೆಗೂ ಮನೆಯವರ ಜೊತೆ ಸರಿಯಾಗಿದ್ದ ಪ್ರಶಾಂತ್ ಸಂಬರ್ಗಿ ಅವರ ಆಗಮನದ ನಂತರ ಅವರ ಮಾತುಗಳಿಂದ ಮನೆಯವರ ಜೊತೆ ಜಗಳ ಮಾಡಿಕೊಳ್ಳುತ್ತಿದ್ದಾರೆ.

ಮಂಜು ಮತ್ತು ಪ್ರಶಾಂತ್ ಅವರ ನಡುವೆ ನಡೆದ ಜಗಳದ ವಿಚಾರವಾಗಿ ಸುದೀಪ್ ಅವರು “ಮಾವ ಎಂಬುದು ಕೆಟ್ಟ ಪದವ ಎಂದು ಪ್ರಶಾಂತ್ ಅವರನ್ನು ಪ್ರಶ್ನಿಸಿದರು, ಅದಕ್ಕೆ ಪ್ರಶಾಂತ್ ಅವರು ಅದು ಕೆಟ್ಟ ಪದ ಅಲ್ಲ ಆದರೆ ಮುಂದೆ ಮಾವ ಅಂತಾರೆ ಹಿಂದೆ ಗೇಲಿ ಮಾಡ್ತಾರೆ ಆ ವಿಚಾರ ನನಗೆ ತಿಳಿಯಿತು”ಎಂದು ಹೇಳಿದರು.ಸುದೀಪ್ ಅವರು ಈ ವಿಚಾರ ನಿಮಗೆ ಹೇಳಿದವರು ಯಾರು ಎಂದು ಕೇಳಿದಾಗ ಪ್ರಶಾಂತ್ ಸಂಬರ್ಗಿ ಅವರು ಮಾತ್ರ ಚಕ್ರವರ್ತಿ ಎಂದು ನೇರವಾಗಿ ಹೇಳಲಿಲ್ಲ ಬದಲಿಗೆ ಗೋತಾಯಿತು ಗೋತಾಯಿತು ಎಂದು ಹೇಳಿದರು.

ಆಗ ಸುದೀಪ್ ಅವರು ಮನೆಯ ಕಾಂಟೆಸ್ಟೆಂಟ್ಸ್ಗಳ ಬಳಿ ಚಕ್ರವರ್ತಿ ಅವರ ಬಗ್ಗೆ ಅಭಿಪ್ರಾಯ ಕೇಳಿದಾಗ ಎಲ್ಲರೂ ಪ್ರಶಾಂತ್ ಅವರು ಚಕ್ರವರ್ತಿ ಅವರ ಮಾತುಗಳಿಗೆ ಇನ್ಫಲುಎನ್ಸ್ ಆಗುತ್ತಾರೆ ಎಂದು ಉತ್ತರಿಸಿದರು.ಮತ್ತು ಚರವರ್ತಿ ಅವರು ಎಲ್ಲರೂ ಪ್ಲಾನ್ ಮಾಡಿ ಅವರಿಗೆ ಕಳಪೆ ಕೊಟ್ಟಿದ್ದಾರೆ ಎಂದು ಹೇಳಿದ್ದಕ್ಕೆ ಸುದೀಪ್ ಅವರು ಎಲ್ಲರ ಅಭಿಪ್ರಾಯ ಕೇಳಿ ಚಕ್ರವರ್ತಿ ಅವರಿಗೆ ಸುದೀಪ್ ಅವರು ಉತ್ತರಿಸಿದರು.

Trending

To Top