Film News

ಡಿ.ಕೆ.ರವಿ ಬಯೋಪಿಕ್ ನಲ್ಲಿ ಚಕ್ರವರ್ತಿ ಚಂದ್ರಚೂಡ್?

ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ದಿಸುವ ಮೂಲಕ ಫೇಮಸ್ ಆದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಪಾತ್ರದಲ್ಲಿ ಅಭಿನಯಿಸಲು ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಈತ ಅಲ್ಪಾವದಿಯಲ್ಲಿಯೇ ಚಕ್ರವರ್ತಿ ಚಂದ್ರಚೂಡ್ ಅವರು ಸಕ್ಕತ್ ಸುದ್ದಿಯಾಗಿದ್ದರು.ಆದರೆ ಕೊರೋನದಿಂದ ಅರ್ಧದಲ್ಲಿಯೇ ಬಿಗ್ ಬಾಸ್ ಕಾರ್ಯಕ್ರಮವನ್ನು ರದ್ದು ಗೊಳಿಸಬೇಕಾಯಿತು.ಸದ್ಯ ಕೊರೋನ ಲಾಕ್ ಡೌನ್ ನಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಚಕ್ರವರ್ತಿ ಚಂದ್ರಚೂಡ್ ಅವರಿಗೆ ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಪಾತ್ರದಲ್ಲಿ ಅಭಿನಯಿಸಲು ಆಫರ್ ಬಂದಿದೆಯಂತೆ.

ಇದರ ಕುರಿತು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ

ಸಾ.ರಾ.ಮಹೇಶ್, ಡಿ ಕೆ ರವಿ ಸಿನಿಮಾ ತೆಗೀತಾರಂತೆ ಇತ್ತ ರೋಹಿಣಿ ಸಿಂಧೂರಿ ಸಿನಿಮಾ ಘೋಷಣೆಯಾಗಿದೆ.ನೆನ್ನೆ ಹೊಸ ಡೈರೆಕ್ಟರ್ ಒಬ್ಬರು ಡಿ ಕೆ ರವಿ ಪಾತ್ರ ಮಾಡುತ್ತೀರಾ ಅಂತ ಕೇಳಿದರು. ಎರಡು ಕಂಡೀಷನ್ ಹಾಕಿದ್ದೀನಿ ಆ 37 ಮೆಸೇಜ್ ತೋರಿಸ್ತೀರ ಸಿನಿಮಾದಲ್ಲಿ ಇನ್ನೊಂದು ದುಡ್ಡಲ್ಲ ನೋಡೋಣ ಮುಂದ ಎಂದು ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದಾರೆ.

Trending

To Top