Film News

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಚೈತ್ರ ಕೋಟೂರ್ !

ಕನ್ನಡದ ನಟಿ, ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ಇತ್ತೀಚೆಗೆ ವಿವಾದದ ನಡುವೆ ವಿವಾಹವಾದರು, ಗುರುವಾರ ತನ್ನ ಕೋಲಾರದ ಮನೆಯಲ್ಲಿ ಫೈನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ. ಆಕೆಯ ಆರೋಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮಾರ್ಚ್ 28ರಂದು ಮಂಡ್ಯ ಮೂಲದ ನಾಗಾರ್ಜುನ ಅವರೊಂದಿಗೆ ಚೈತ್ರ ಮದುವೆಯಾಗಿದ್ದರು, ಆದರೆ ಮದುವೆಯಾದ ದಿನವೇ ವಿವಾದ ಶುರುವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬೆಂಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಮದುವೆ ಬಗ್ಗೆ ಮಾತನಾಡಿದ್ದ ನಾಗಾರ್ಜುನ ಚೈತ್ರ ಅವರನ್ನು ಮದುವೆಯಾಗಲು ಕೆಲವು ಗುಂಪುಗಳು ಒತ್ತಾಯಿಸಿದರು ಮತ್ತು ಚೈತ್ರಳನ್ನು ಮದುವೆಯಾಗಲು ವೈಯಕ್ತಿಕವಾಗಿ ಆಸಕ್ತಿ ಇಲ್ಲ ಎಂದು ಆರೋಪಿಸಿದರು.ಆದರೆ ಚೈತ್ರ ಕೊಟ್ಟೂರು ಮಾತ್ರ “ನನಗೆ ನಾಗಾರ್ಜುನ ತುಂಬಾ ಇಷ್ಟ ಅವರ ಜೊತೆಯೇ ಹೋಗುತ್ತೀನಿ..” ಎಂದು ಪಟ್ಟುಹಿಡಿದ್ದಿದ್ದರು. ನಾಗಾರ್ಜುನ ಸೇರಿ ಅವರ ಮನೆಯವರಿಗೆ ಕೂಡ ಮದುವೆ ಇಷ್ಟವಿರಲಿಲ್ಲ, ಬಳಿಕ ಎರಡು ಕುಟುಂಬದವರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧಾರಿಸಿದರು, ಇದೀಗ ಚೈತ್ರ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ಕುಟುಂಬದ್ದಲ್ಲಿ ನಡೆದಿದ್ದೇನು ಎಂದು ಪೊಲೀಸ್ ತನಿಖೆಯ ನಂತರ ತಿಳಿಯುತ್ತದೆ.

Trending

To Top